ರಾಜ್ಯದಲ್ಲಿ ನೀಫಾ ವೈರಸ್ ಆತಂಕ

5 years ago

ಮಂಗಳೂರು: ಕೊರೊನಾ ಮೂರನೇ ಅಲೆ ಆತಂಕದ ನಡುವೆ ನಿಫಾ ವೈರಸ್ ಭೀತಿ ಕರ್ನಾಟಕಕ್ಕೆ ಎದುರಾಗಿದೆ. ಕೇರಳದ ನಂತರ ರಾಜ್ಯದಲ್ಲಿ ನಿಫಾ ಸೋಂಕು ಪತ್ತೆಯಾಗಿದೆ. ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಯುವಕನಲ್ಲಿ ನಿಫಾ ವೈರಸ್ ಲಕ್ಷಣಗಳು ಕಂಡುಬಂದಿದೆ. ಸ್ವ್ಯಾಬ್, ರಕ್ತದ ಮಾದರಿಯನ್ನು ಪುಣೆ ಲ್ಯಾಬ್ ಗೆ ರವಾನಿಸಲಾಗಿದೆ.

ಜಿಲ್ಲಾ ಆರೋಗ್ಯ ಇಲಾಖೆ ವ್ಯಕ್ತಿಯ ಸ್ಯಾಂಪಲ್ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದೆ. ಕೇರಳದಲ್ಲಿ ನಿಫಾ ಪ್ರಕರಣ ವ್ಯಾಪಕವಾಗಿದ್ದು, 12 ವರ್ಷದ ಬಾಲಕ ಈಚೆಗೆ ಬಲಿಯಾಗಿದ್ದ. ನಂತರ ಆತನ ಕುಟುಂಬದ 8 ಜನರಲ್ಲಿ ನಿಫಾ ಲಕ್ಷಣಗಳು ಕಂಡುಬಂದಿವೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Leave a Reply