75 ಕೋಟಿ ಭಾರತೀಯರಿಗೆ ವ್ಯಾಕ್ಸಿನ್‌!

5 years ago

ದೆಹಲಿ: ಭಾರತ ಕೊರೊನಾ ಲಸಿಕೆ ನೀಡುವಲ್ಲಿ ನೂತನ ದಾಖಲೆ ಬರೆದಿದೆ. ಲಸಿಕೆ ಅಭಿಯಾನದಡಿಯಲ್ಲಿ 75 ಕೋಟಿ ಕೋವಿಡ್ ಲಸಿಕೆ ಡೋಸ್ʼಗಳನ್ನು ಜನರಿಗೆ ನೀಡಲಾಗಿದೆ. ಈ ವಿಷಯವನ್ನು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಡಾ. ಪೂನಮ್ ಖೇತ್ರಪಾಲ್ ಸಿಂಗ್, ಭಾರತ ಮೈಲಿಗಲ್ಲು ಸಾಧಿಸಿದ್ದಕ್ಕಾಗಿ ಭಾರತವನ್ನ ಅಭಿನಂದಿಸಿದ್ದಾರೆ. ಕೋವಿಡ್-19 ಲಸಿಕೆಯನ್ನ ಅಭೂತಪೂರ್ವ ವೇಗದಲ್ಲಿ ನೀಡಿದ್ದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ಕೂಡ ಭಾರತವನ್ನು ಅಭಿನಂದಿಸಿದೆ. ಮೊದಲ 100 ಮಿಲಿಯನ್ ಡೋಸ್ʼಗಳನ್ನು ನೀಡಲು 85 ದಿನಗಳ ಕಾಲಾವಧಿಯನ್ನು ತೆಗೆದುಕೊಳ್ಳಲಾಗಿತ್ತು. ನಂತರ ಭಾರತ 13 ದಿನಗಳಲ್ಲಿ 650 ದಶಲಕ್ಷದಿಂದ 750 ದಶಲಕ್ಷ ಡೋಸ್ʼಗಳನ್ನು ನೀಡಿದೆ ಎಂದು ಅವರು ಸಂತಸಪಟ್ಟಿದ್ದಾರೆ.

Leave a Reply