ಅಡ್ವಾಣಿ ಅವರಿಗೆ ಭಾರತ ರತ್ನ ಸಿಕ್ಕಿರುವುದು ಸಂತಸದ ವಿಷಯ:ಆರ್.ಅಶೋಕ್

2 years ago

ಬೆಂಗಳೂರು: ಮಾಜಿ ಉಪಪ್ರಧಾನಿ ಅಡ್ವಾಣಿ ಅವರಿಗೆ ಭಾರತರತ್ನ ಪ್ರಶಸ್ತಿ ಘೋಷಿಸಿರುವುದನ್ನು ಪ್ರಶಂಸಿಸಿರುವ ವಿಪಕ್ಷ ನಾಯಕ ಆರ್ ಅಶೋಕ್, ಉಕ್ಕಿನ ಮನುಷ್ಯ ಅಡ್ವಾಣಿ ಅವರಿಗೆ ಭಾರತ ರತ್ನ ಸಿಕ್ಕಿರುವುದು ಸಂತಸ ತಂದಿದೆ. ತತ್ವ, ಸಿದ್ಧಾಂತದಲ್ಲಿ ಎಂದಿಗೂ ರಾಜಿಯಾಗದ, ರಾಜಕಾರಿಣಿ ಅಂದರೆ ಹೇಗಿರಬೇಕು ಎನ್ನುವ ರೀತಿ ಆದರ್ಶ ವ್ಯಕ್ತಿತ್ವ ಹೊಂದಿದ್ದ ಮೇರು ನಾಯಕ ಅಡ್ವಾಣಿಯವರು. ಅಡ್ವಾಣಿ ಜೊತೆ ಮೂರು ಸಂಧರ್ಭಗಳಲ್ಲಿ ತಮ್ಮ ಒಡನಾಟವನ್ನು ನೆನೆದು ಹಳೆಯ ನೆನಪುಗಳನ್ನು ಹಂಚಿಕೊಂಡರು.

ಎಲ್.ಕೆ.ಅಡ್ವಾಣಿ ಅವರ ರಥಯಾತ್ರೆ ಕರ್ನಾಟಕದಲ್ಲಿ ಸಂಚರಿಸುತ್ತಿದ್ದಾಗ ಭಜರಂಗದಳದ ಕಾರ್ಯಕರ್ತನಾಗಿ ಅವರ ಜೊತೆ ಇದ್ದೆ ಎಂದು ನೆನಪಿಸಿಕೊಂಡ ಆರ್ ಅಶೋಕ್, ಅಯೋಧ್ಯೆಯಲ್ಲಿ ಇವತ್ತು ರಾಮಮಂದಿರ ಉದ್ಘಾಟನೆಯಾಗಿದೆ ಅಂದ್ರೆ ಅದಕ್ಕೆ ಕಾರಣಕರ್ತರು ಅಡ್ವಾಣಿಯವರು. ಅವತ್ತು ಅವರು ರಾಮಜ್ಯೋತಿ ಹಚ್ಚಿಲ್ಲದಿದ್ದರೆ ರಾಮ ಮಂದಿರ ನಿರ್ಮಾಣವಾಗೋಕೆ ಇನ್ನೂ ಎಷ್ಟು ವರ್ಷ ಬೇಕಿತ್ತೋ ಏನೋ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅಡ್ವಾಣಿ ಅವರ ಜೊತೆಗೆ ಬೆಂಗಳೂನಲ್ಲಿ ಜೈಲುವಾಸ, ಅಯೋಧ್ಯೆಯಲ್ಲಿ 21 ದಿನ ಕರಸೇವೆಯಲ್ಲಿ ಪಾಲ್ಗೊಂಡ ನೆನಪುಗಳನ್ನು ಹಂಚಿಕೊಂಡರು.

Leave a Reply