ಸುಳ್ಳಿನಿಂದ ಕೂಡಿದ ಕೇಂದ್ರ ಬಜೆಟ್

2 years ago

ಬೆಂಗಳೂರು: ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತರಾಮನ್ ಇವರು ಮಂಡಿಸಿದ 2024ರ ಮಧ್ಯಂತರ ಬಜೆಟ್ ಜನ ವಿರೋಧಿಯಾಗಿದೆ ಎಂದು CPIML RI KARNATAKA State Committee ಯ ರಾಜ್ಯ ಕಾರ್ಯದರ್ಶಿ ಡಿ.ಹೆಚ್.ಪೂಜಾರ ಮತ್ತು ಕೇಂದ್ರ ಸಮಿತಿ ಸದಸ್ಯ ಡಿ.ಎಸ್.ನಿರ್ವಾಣಪ್ಪ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

47,63,750 ಲಕ್ಷ ಕೋಟಿ ಬಜೆನಲ್ಲಿ 11.90 ಲಕ್ಷ ಕೋಟಿ ಸಾಲದ ಬಡ್ಡಿಗೆ ( ದೇಶದ ಸಾಲ 200 ಲಕ್ಷ ಕೋಟಿಗೆ ತಲುಪಿದೆ), 6.2 ಲಕ್ಷ ಕೋಟಿ ರಕ್ಷಣಾ ವೆಚ್ಚಕ್ಕೆ ಹೋಗುತ್ತದೆ, 16.80. ಲಕ್ಷ ಕೋಟಿ ಕೊರತೆ ಬಜೆಟ್ ಅನ್ನು ಸರಿದೂಗಿಸಲು ಪುನಃ 17 ಲಕ್ಷ ಕೋಟಿ ಸಾಲ ಮಾಡಲಾಗುತ್ತಿದೆ ಎಂದಿದ್ದಾರೆ.

ಹಸಿವಿನ ಸೂಚ್ಯಂಕದಲ್ಲಿ ಭಾರತ 107 ನೆ ಸ್ಥಾನದಲಿದೆ. ಸರ್ಕಾರದ ನೀತಿ ಆಯೋಗ 10 ವರ್ಷಗಳಲ್ಲಿ 25ರಷ್ಟು ಬಡತನ ಕಡಿಮೆಯಾಗಿದೆ ಎಂದು ಸುಳ್ಳಿನಿಂದ ಕೂಡಿದ ವರದಿ ಕೊಟ್ಟಿದೆ. ಈ ಸುಳ್ಳನ್ನೆ ಹಣಕಾಸು ಮಂತ್ರಿಗಳು ಬಜೆಟ್ ನಲ್ಲಿ ಓದಿದ್ದಾರೆ. ಕಾರ್ಪೋರೇಟ್ ಕಂಪನಿಗಳಿಗೆ ತೆರಿಗೆ ಹೆಚ್ಚು ಮಾಡದೆ ಹಳೆಯ ತೆರಿಗೆಯನ್ನು ಮುಂದುವರಿಸಿ, ಸಾಮಾನ್ಯ ಜನರಿಗೆ ದ್ರೋಹ ಮಾಡಿದೆ ಎಂದಿದ್ದಾರೆ.

ಜನರ ತರಿಗೆ ಹಣದಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಭೂಮಿ, ನೀರು, ರಸ್ತೆ ವಿದ್ಯುತ್ ಇತರೆ ಮೂಲಭೂತ ಸೌಲಭ್ಯಗಳನ್ನು ಕೊಡುತ್ತಿರುವುದು ಖಂಡನೀಯ. ಆರ್ಥಿಕ ಮುಗ್ಗಟ್ಟಿನಲ್ಲಿರುವ ಕೇಂದ್ರ ಸರ್ಕಾರ ರೈತರಿಗೆ, ಕಾರ್ಮಿಕರಿಗೆ ಬಡವರಿಗೆ ಯಾವ ವಿಶೇಷ ಯೋಜನೆಗಳನ್ನು ಘೋಷಿಸಿಲ್ಲ. ತೀವ್ರ ಬರಗಾಲವನ್ನು ಎದುರಿಸುತ್ತಿರುವ ಜನರಿಗೆ ವಿಶೇಷ ಕೊಡುಗೆ ನೀಡಬಹುದು ಮತ್ತು ಬೆಳೆ ಸಾಲ ಮನ್ನಾ ಮಾಡಬಹುದು ಎನ್ನುವ ನಿರೀಕ್ಷೆ ಸುಳ್ಳಾಗಿದೆ ಎಂದಿದ್ದಾರೆ.

ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. (ಕೇವಲ 85 ಸಾವಿರ ಕೋಟಿ ಕೊಡಲಾಗಿದೆ) ಸಾಮಾನ್ಯ ಜನರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸದೆ ಜನರ ಹೊಟ್ಟೆಯ ಮೇಲೆ ಹೊಡೆದಿದೆ ಎಂದಿದ್ದಾರೆ.

ಕಳೆದ ವರ್ಷದ ಬಜೆಟ್ ನಲ್ಲಿ ಭದ್ರಾ ನೀರಾವರಿ ಯೋಜನೆಗೆ 5,300 ಕೋಟಿ ಘೋಷಣೆ ಮಾಡಲಾಗಿತ್ತು, ಈ ಕುರಿತು ಯಾವ ಪ್ರಸ್ತಾಪವಿಲ್ಲ. ರಾಜ್ಯದಿಂದ ಪ್ರತಿ ವರ್ಷ 4 ಲಕ್ಷ ಕೋಟಿ GST ಇತರೆ ತರಿಗೆ ಹಣ ಪಡೆಯುವ ಕೇಂದ್ರ ಸರ್ಕಾರ ರಾಜ್ಯಕ್ಕೆ ದ್ರೋಹ ಮಾಡಿದೆ. ಸುಳ್ಳಿನಿಂದ ಕೂಡಿದ ಈ ಬಜೆಟ್ ಅನ್ನು ವಿರೋಧಿಸಿ ಹೋರಾಡಬೇಕೆಂದು CPIML RI ರಾಜ್ಯ ಸಮಿತಿ ಜನತೆಗೆ ನೀಡಿದೆ.

Leave a Reply