ಓವಲ್: ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತ 157 ರನ್ ಗಳಿಂದ ಗೆಲುವು ದಾಖಲಿಸಿದೆ. ಈ ಮೂಲಕ 2-1ರ ಮುನ್ನಡೆ ಪಡೆದಿದೆ. ಐದನೇ ದಿನವಾದ ಇಂದು ಭಾರತೀಯ ಬೌಲರ್ ಗಳು ಮೇಲುಗೈ ಸಾಧಿಸಿದ್ದು, ಇಂಗ್ಲೆಂಡ್ ತಂಡವನ್ನು 200 ರನ್ ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ಕಡೆಯ ಪಂದ್ಯ ಸೆಪ್ಟಂಬರ್ 10ರಂದು ನಡೆಯಲಿದೆ. ಜೊತೆಗೆ ಭಾರತ 1971ರ ನಂತರ ಓವಲ್ ನಲ್ಲಿ ಇದೇ ಮೊದಲ ಬಾರಿ ಪಂದ್ಯ ಜಯಿಸಿದ ದಾಖಲೆ ಬರೆದಿದೆ.



