ದೆಹಲಿ: ನನ್ನ ಯಾವುದೇ ಕಾಮೆಂಟ್ ಗಳನ್ನು ಆಧರಿಸಿ ನಿಮ್ಮ ಕೊಳಕು ಅಜೆಂಡಾಗಳನ್ನು ನೀವ್ಯಾರೂ ಮುಂದುವರೆಸುವ ಮಾಧ್ಯಮವನ್ನಾಗಿಸಬೇಡಿ ಎಂದು ನಿಮ್ಮೆಲ್ಲರಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಒಲಂಪಿಕ್ ನಲ್ಲಿ ಜಾವಾಲಿನ್ ಥ್ರೋನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಮನವಿ ಮಾಡಿಕೊಂಡಿದ್ದಾರೆ.
ಒಲಿಂಪಿಕ್ ನಲ್ಲಿ ಚಿನ್ನ ಗೆದ್ದ ಬಳಿಕ ನೀಡಿದ ಸಂದರ್ಶನಗಳಲ್ಲಿ ಪಾಕ್ ಜಾವಲಿನ್ ಆಟಗಾರ ಅರ್ಷದ್ ನದೀಮ್ ವಿಷಯದ ಕುರಿತು ಪ್ರತಿಕ್ರಿಯಿಸಿದ್ದ ಚೋಪ್ರಾ, ಆಟದ ಸಮಯದಲ್ಲಿ ಆದ ಘಟನೆಯೊಂದನ್ನು ಮೆಲುಕು ಹಾಕಿದ್ದರು. ಈ ಹಿನ್ನೆಲೆಯಲ್ಲಿ ಜಾಲತಾಣಗಳಲ್ಲಿ ಚೋಪ್ರಾ ವಿರುದ್ಧ ಕೆಲವರು ಕೆಣಕುವ ರೀತಿಯಲ್ಲಿ ಕಾಮೆಂಟ್ ಹಾಕಿದ್ದರು.
मेरी आप सभी से विनती है की मेरे comments को अपने गंदे एजेंडा को आगे बढ़ाने का माध्यम न बनाए। Sports हम सबको एकजूट होकर साथ रहना सिखाता हैं और कमेंट करने से पहले खेल के रूल्स जानना जरूरी होता है 🙏🏽 pic.twitter.com/RLv96FZTd2
— Neeraj Chopra (@Neeraj_chopra1) August 26, 2021
ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮೂಲಕ ಕೆಲವು ವಿಷಯಗಳನ್ನು ಹಂಚಿಕೊಂಡಿರುವ ಅವರು, ಕ್ರೀಡೆಗಳು ನಮ್ಮೆಲ್ಲರನ್ನೂ ಒಂದಾಗಿಸಿ ಒಗ್ಗಟ್ಟಾಗಿರಿಸಲು ಯತ್ನನಿಸುತ್ತವೆ ಮತ್ತು ಕಾಮೆಂಟ್ ಮಾಡುವ ಮುನ್ನ ಕ್ರೀಡೆಗಳ ಶಾಲೆಗಳಿಗೆ ಹೋಗುವುದು ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.




