ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ರೈತರ ಪರವಾಗಿ ನಿಲ್ಲಬೇಕು

3 years ago

#government #districtincharge #minister #MLAs #farmers #koppala #baldota

ಕೊಪ್ಪಳ ಜಿಲ್ಲಾ ಬಚಾವ್ ಆಂದೋಲನ

ಕೊಪ್ಪಳ: MSPL ಬಲ್ಡೋಟ ಕಂಪನಿ ಕುರಿ, ದನಕರುಗಳಿಗೆ (ಸ.ನಂ. 143, 44,34 ಎಕರೆ)  ಬಸಾಪುರ ಕೆರೆಯ ನೀರು ಕುಡಿಯಲು ಬಿಡದೆ  ಹೈ ಕೋರ್ಟ್ ಆದೇಶವನ್ನು ಉಲ್ಲಂಘಿಸಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಡಿ.ಹೆಚ್.ಪೂಜಾರ ಆರೋಪಿಸಿದರು.

ಬಸಾಪುರ ಕೆರೆಯ ಕುರಿತು ಪ್ರಸ್ತಾಪ ಮಾಡಿದ ಅವರು, ದಿನಾಂಕ 25-09-2025 ರಂದು ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಉಸ್ತುವಾರಿ ಮಂತ್ರಿ ಹಾಗೂ ಎಲ್ಲಾ ಅಧಿಕಾರಿಗಳ  ಸಮಾಕ್ಷಮ ಚರ್ಚಿಸಲಾಯಿತು. ದಿನಾಂಕ 26-09-2023 ಸಹಾಯಕ ಆಯುಕ್ತರು ಸಭೆ ನಡೆಸಿ ಕೆರೆಯನ್ನು ಮುಚ್ಚಿರುವ ಕುರಿತು ಸರ್ವೆ ನಡೆಸಿ DC ಗೆ ವರದಿ ಸಲ್ಲಿಸಲು ತೀರ್ಮಾನವಾಯಿತು ಎಂದು ಹೇಳಿದರು.

ಆಗಸ್ಟ್ 24 ರಂದು ಕೆರೆಯ ದಂಡೆಯ ಮೇಲೆ ಸಾವಿರಾರು ಕುರಿಗಳು ಮತ್ತು ನೂರಾರು ದನಕರುಗಳ ಸಮೇತ ಈ ವಿಷಯದ ಕುರಿತು ಹೋರಾಟ ನಡೆಸಿದರು ಕೂಡ ಜಿಲ್ಲಾಧಿಕಾರಿಗಳು ಕಂಪನಿಯ ವಿರುದ್ಧ ಕಾನೂನ ಕ್ರಮ ಜರುಗಿಸುತ್ತಿಲ್ಲ ಎಂದರು.

ನಾವು 2009ರಲ್ಲಿ ಬೆಂಗಳೂರ ಹೈ ಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೆವು. 2022 ರಲ್ಲಿ ಹೈಕೋರ್ಟ್, ಜನರಿಗೆ ನೀರು ಬಳಕೆ ಮಾಡಿಕೊಳ್ಳಲು ಹಾಗು ಜಾನುವಾರುಗಳಿಗೆ ನೀರು ಕುಡಿಯಲು ತಕರಾರು ಮಾಡಬಾರದೆಂದು ಆದೇಶಿಸಿದೆ. ಕಂಪನಿಯವರು ಜನರಿಗೆ ಮತ್ತು ಜಾನುವಾರುಗಳಿಗೆ ನೀರು ಕುಡಿಯಲು ತಕರಾರು ಮಾಡುತ್ತಿದ್ದಾರೆ ಎಂದು ಹೇಳಿದರು.

ಆಗಸ್ಟ್ 24 ರಂದು ನಡೆದ ಹೋರಾಟದ ದಿನದಂದು ಪೊಲೀಸ್ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ, 10 ದಿನಗಳಲ್ಲಿ ಸಮಸ್ಯೆ ಪರಿಹರಿಸುವ ಭರವಸೆ ಕೊಟ್ಟಿದ್ದರು. ಅಂದರೆ 40 ಅಡಿಯ ಕೆರೆಗೆ ಇಳಿಜಾರು ಕಾಮಗಾರಿ ನಡೆಸಿ ದನ ಕರುಗಳು  ಕೆರೆಯಲ್ಲಿ ಇಳಿದು ನೀರು ಕುಡಿಯಲು ಅನುಕೂಲ ಕಲ್ಪಿಸುವ  ಮಾತುಕತೆ ನಡೆದಿತ್ತು. 34 ದಿನ ಕಳೆದರೂ ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆಯ ಪರಿಹಾರಕ್ಕೆ  ಮುಂದಾಗುತ್ತಿಲ್ಲ ಎಂದರು.

MSPL ಕಂಪನಿಯವರು ಸುಪ್ರೀಂ ಕೋರ್ಟಿನಲ್ಲಿ ಕೆರೆ ವಿಷಯ ಬಗೆಹರೆದಿದೆ ಎಂದು ಜಿಲ್ಲಾಡಳಿತವನ್ನು ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ಇದಲ್ಲದೆ 10 ಎಕರೆಯಷ್ಟು ಕೆರೆಯನ್ನು ಮುಚ್ಚಿ 70 ಮೀಟರ್ ಅಗಲದ ರಸ್ತೆ ಮಾಡಿ, ಸರ್ಕಾರದ ಆದೇಶವನ್ನು ಉಲ್ಲಂಘಿಸಲಾಗಿದೆ. ಜಿಲ್ಲಾಧಿಕಾರಿಗಳು ಈ ವಿಷಯದ ಕುರಿತು ಯಾಕೆ ಕ್ರಮಕ್ಕೆ ಮುಂದಾಗುತ್ತಿಲ್ಲ. ಅವರ ಮೌನ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಿದರು.

ದಿನಾಂಕ 25 ರಂದು  ಜನತಾ ದರ್ಶನ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವರೊಂದಿಗೆ ನಾವು ಚರ್ಚಿಸುವಾಗ, ಜಿಲ್ಲಾಧಿಕಾರಿಗಳು ಈ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿದೆ ಎಂದು ಸುಳ್ಳು ಹೇಳಿದರು. ನಿನ್ನೆ ಸಹಾಯಕ ಆಯುಕ್ತರು ನಡೆಸಿದ ಸಭೆಯಯಲ್ಲಿ, ಸುಪ್ರೀಂ ಕೋರ್ಟಿನ ಯಾವ ಆದೇಶ ಇಲ್ಲವೆಂದು ಪೊಲೀಸ್ ಅಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ಗೊತ್ತಾಯಿತು. ಸಹಾಯಕ ಆಯುಕ್ತರು ಎರಡು ದಿನಗಳಲ್ಲಿ ಕೆರೆಗೆ ಭೇಟಿಕೊಟ್ಟು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿ ಮುಂದಿನ ಕ್ರಮ ಜರುಗಿಸುವ ಭರವಸೆ ಕೊಟ್ಟರು ಎಂದು ಮಾಹಿತಿ ನೀಡಿದರು.

ದನಕರುಗಳಿಗೆ ನೀರು ಕುಡಿಯಲು ಇಳಿಜಾರು ಕೆಲಸ ಮತ್ತು  ಕಂಪೌಂಡ ಕಟ್ಟುವ ಕೆಲಸ ಮಾಡಬಾರದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಲಾಯಿತು. ಆದರೆ ಕಂಪನಿಯವರು ನಿನ್ನೆ ರಾತ್ರಿ ಕೆರೆಯ ಸುತ್ತ ಕಂಪೌಂಡ ಕಟ್ಟಲು ಪ್ರಾರಂಭಿಸಿದ್ದಾರೆ. ಜಿಂದಾಲ್ ಕಂಪೆನಿಯಿಂದ ಹತ್ತಾರು ಕಂಕರ ಮಿಕ್ಸ್ ವಾಹನಗಳನ್ನು ತರಿಸಿಕೊಂಡು ರಾತ್ರಿ ಕಟ್ಟಡ ಕಟ್ಟುವ ಕಾರ್ಯ ಮಾಡುವುದು ಎಷ್ಟು ಸರಿ ಜಾನುವಾರುಗಳಿಗೆ ಕೆರೆಯಲ್ಲಿ ನೀರು  ಕುಡಿಸಲು ಬೇಡ ಎಂದು ಹೇಳುವ ಅಧಿಕಾರಿಗಳು ಕಂಪನಿಯವರಿಗೆ ಕಂಪೌಂಡ ಕಟ್ಟುವುದನ್ನು ನಿಲ್ಲಿಸುವ ಮಾತನಾಡುತ್ತಿಲ್ಲ. ಒಟ್ಟಾರೆ ಜಿಲ್ಲಾಡಳಿತ ಕಂಪನಿಯ ಪರವಾಗಿ ನಿಂತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದರು.

2007 ರ ಅವಧಿಯ  ಜಿಲ್ಲಾಧಿಕಾರಿಗಳು, (ನವಿರಾದ ಸಿಂಗ್) ಸಣ್ಣ ನೀರಾವರಿ ಅಧಿಕಾರಿಗಳು ಕೆರೆಗೆ ಜಲ ಮೂಲ ಇಲ್ಲವೆಂದು ಅನುಪಯುಕ್ತ ಕೆರೆ ಎಂದು  ವರದಿ ಸಲ್ಲಿಸಿದ್ದರಿಂದ ಸರ್ಕಾರ ಕೆರೆ ಮಂಜೂರಾತಿ ಕೊಟ್ಟಿತು. ಇದಕ್ಕೂ ಮುನ್ನ ಗ್ರಾಮಸ್ಥರೊಂದಿಗೆ ಚರ್ಚಿಸಬೇಕಾಗಿತ್ತು. ರೈತರಿಗೆ ವಂಚನೆ ಮಾಡಿ ಮೋಸದಿಂದ ಕೆರೆಯನ್ನು ಕಂಪನಿಗೆ ಕೊಡಲಾಗಿದೆ. ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ರೈತರ ಪರವಾಗಿ ನಿಲ್ಲಬೇಕು ಎಂದು ಆಗ್ರಹಿಸಿದರು.

ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಮಾತನಾಡಿ, ಗ್ರಾಮದ ಜನರಿಗೆ ತಿಳಿಸದೆ, ವಿಷಯವನ್ನು ಮುಚ್ಚಿಟ್ಟು ಕೆರೆ ಕಂಪನಿಗೆ  ಕೊಟ್ಟದ್ದು ಖಂಡನೀಯ. ಈ ಕಂಪನಿಯವರು ಭೂಮಿ ಕಳೆದುಕೊಂಡ 500 ಕ್ಕೂ ಹೆಚ್ಚಿನ ಕುಟುಂಬದ ಜನರಿಗೆ ಉದ್ಯೋಗ ಕೊಟ್ಟಿಲ್ಲ. ರೈತರು ಕೃಷಿಯಿಂದ ವಂಚನೆ ಗೊಂಡಿರುತ್ತಾರೆ ಮತ್ತು ಭೂಮಿ ಬೀಳು ಬಿದ್ದಿದೆ.ಯ ಎಂದರು.

AITUCI  ಬಸವರಾಜ ಶೀಲವಂತರ ಮಾತನಾಡಿ, ಜಿಲ್ಲೆಯ ಸಂಸದರು ಶಾಸಕು ಜಿಲ್ಲಾ ಮಂತ್ರಿಗಳು ರೈತರ ಪರವಾಗಿ ನಿಲ್ಲದಿದ್ದರೆ ಹೋರಾಟ ತೀವ್ರಗೊಳಿಸುವ  ಎಚ್ಚರಿಕೆ ನೀಡಿದರು.

TUCI  ರಾಜ್ಯ ಉಪಾಧ್ಯಕ್ಷ ಕೆ.ಬಿ.ಗೋನಾಳ ಮಾತನಾಡಿ ತುಳಸಿ ಮದ್ದಿನೇನಿ ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ,  MSPL ಕಂಪನಿಯವರು ಕೆರೆಯಲ್ಲಿ ಆಕ್ರಮ ಮುರಂ ತಗೆದಿದ್ದಕ್ಕೆ 1.20 ಕೋಟಿ ದಂಡ ವಿಧಿಸಿದ್ದರು. ಆಗಿನ ಹಿರಿಯ ಭೂಗಣಿ ಇಲಾಖೆಯ ಖಾನ್ ಎನ್ನುವ ಅಧಿಕಾರಿ ಕಂಪನಿಯ ವಿರುದ್ಧ ನಿಷ್ಟುರತೆಯಿಂದ ಕೆಲಸ ಮಾಡಿದ್ದರು ಎಂದು ಹೇಳಿದರು.

ಬಸಾಪುರ  ಗ್ರಾಮದ ಮುಖಂಡರಾದ ಮುಖಪ್ಪ ಎನ್ ಮೇಸ್ತ್ರಿ, ಮಲಾರಪ್ಪ ಲಿಂಗದ ಹಳ್ಳಿ, ಯಮನೂರಪ್ಪ ಹಾಲಹಳ್ಳಿ ಕುರಿ ಹುಣ್ಣೆ ಉತ್ಪಾದನೆ ಸಂಘದ ಅಧ್ಯಕ್ಷರು, ಶಿವಯ್ಯ ಹಿರೇಮಠ, ಪಕೀರಪ್ಪ ಬಂಗ್ಲಿ ಇತರರು ಭಾಗವಹಿಸಿದ್ದರು.

Leave a Reply