ಹುಬ್ಬಳ್ಳಿ-ಅಂಕೋಲಾ ಹೊಸ ರೈಲ್ವೆ ಮಾರ್ಗದ ಕುರಿತು ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಜಗದೀಶ್ ಶೆಟ್ಟರ್

3 years ago

#JagdishShettar #Hubli #Ankola #railway #officials

ಹುಬ್ಬಳ್ಳಿ: ಹುಬ್ಬಳ್ಳಿ ನೈರುತ್ಯ ರೈಲ್ವೆ ಕಛೇರಿಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ, ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಅವರು ಹುಬ್ಬಳ್ಳಿ ಅಂಕೋಲಾ ಹೊಸ ರೈಲ್ವೆ  ಮಾರ್ಗದ ಬಗ್ಗೆ ರೈಲ್ವೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ಅಂಕೋಲಾ ಹೊಸ ರೈಲ್ವೆ ಮಾರ್ಗದ ಅನುಷ್ಠಾನ ಮತ್ತು ಕಾನೂನು ಹಾಗೂ ಪರಿಸರ ತೊಡಕುಗಳಿಂದ ಅಡತಡೆ ಉಂಟಾಗಿತ್ತು. ಇತ್ತೀಚಿಗೆ ಹೈಕೊರ್ಟ್ ನಲ್ಲಿ ದಾಖಲಾಗಿದ್ದ ಸಾರ್ವಜನಿಕ ರಿಟ್ ಅರ್ಜಿಗಳು ನಿಕಾಲೆ (ಡಿಸ್ಪೋಸಲ್) ಆದ ಮೇಲೆ ಈಗ ಆ ಯೋಜನೆಗೆ ತೀವ್ರಗತಿಯಿಂದ ಚಾಲನೆ ದೊರೆತಿದೆ‌. ಅದಕ್ಕಾಗಿ ಇದರ ಬಗ್ಗೆ ಆದಷ್ಟು ಬೇಗನೆ ಸರ್ವೇ ಮತ್ತು ಕಾಮಗಾರಿ ಚಾಲನೆಗೆ ಬೇಕಾದ ವರದಿ ತಯಾರಿಸುವುದು. ಆದಷ್ಟು ಬೇಗನೆ ತೀವ್ರಗತಿ ಪ್ರಯತ್ನ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಬೇಕಾದ ಸಹಕಾರವನ್ನು ಕೊಡಿಸಲು ಭರವಸೆಯನ್ನು ನೀಡಿದರು.

ಹುಬ್ಬಳ್ಳಿ ನೈರುತ್ಯ ರೈಲ್ವೆಯ ಜನರಲ್ ಮ್ಯಾನೆಜರ್ ಸಂಜೀವ ಕಿಶೋರ ಮಾತನಾಡಿ, ಹುಬ್ಬಳ್ಳಿ ಅಂಕೋಲಾ ಹೊಸ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿಯನ್ನು ಅತೀ ಶೀರ್ಘದಲ್ಲಿ ಪ್ರಾರಂಭಿಸಲು ಯೋಜಿಸಿದೆ. ನ್ಯಾಷನಲ್ ಬೋರ್ಡ್ ಆಫ್ ವೈಲ್ಡ್ ಲೈಫ್ ನಿರ್ದೇಶನದ ಮೇರೆಗೆ ಫೋರ್-ವೇ (4 ವೇ-ಮಾರ್ಗ) ರೈಲ್ವೆ ಮಾರ್ಗದ ಯೋಜನೆಗೆ ಮತ್ತು ಇಂಟಿಗ್ರೇಟೆಡ್ ಟ್ರಾನ್‌ಫೋರ್ಟ್‌ (ರೋಡ್, ರೇಲ್ & ಬಂದರು ) ಪ್ರಾಜೆಕ್ಟ್ ತಯಾರಿಸಲು ಸರ್ವೆ ಪ್ರಾರಂಭ ಮಾಡಿದ್ದೇವೆ. ಸರ್ವೇ ಮುಗಿದ ತಕ್ಷಣ ಸರ್ವೇ ರಿಪೋರ್ಟ್ ನ್ನು ನ್ಯಾಷನಲ್ ಬೋರ್ಡ್ ಆಫ್ ವೈಲ್ಡ್ ಲೈಫ್‌ಗೆ ಸಲ್ಲಿಸಲಾಗುವುದು. ಬೋರ್ಡ್ ನವರ ಒಪ್ಪಿಗೆ ದೊರೆತ ನಂತರ ಮುಂದಿನ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಕಾನೂನು ಮತ್ತು ಪರಿಸರ ಸಂಬಂಧಿಸಿದ ವಿಷಯಗಳ ಕುರಿತು ಪರಿಸರ ಅಧಿಕಾರಿ ಅಜಯಸಿಂಗ್ ಅವರು ಸಮಗ್ರ ಮಾಹಿತಿ ನೀಡಿದರು. 

ಸಭೆಯಲ್ಲಿ ನೈರುತ್ಯ ರೈಲ್ವೆಯ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.

Leave a Reply