ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾದ ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ

3 years ago

#Onceuponatimetherewasaking #released #digital #platform #yogeshmaster #sathoshkodnkeri #entertainment #sandalwood #ravindranathtagore

ಬಹುಭಾಷಾ ಚಿತ್ರ ನಿರ್ದೇಶಿಸಿದ ಸಂತೋಷ್ ಕೊಡಂಕೇರಿಯವರ ಹೊಸ ಪ್ರಯತ್ನ

24 ಪಾತ್ರಗಳಲ್ಲಿ ನಟಿಸಿ ದಾಖಲೆ ನಿರ್ಮಿಸಿರುವ ರಂಗಕರ್ಮಿ ಯೋಗೇಶ್ ಮಾಸ್ಟರ್

“ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ” ಚಿತ್ರ ಡಿಜಿಟಲ್ ಪ್ಲಾಟ್ಫಾರ್ಮ್ “ಜಂಕಾರ್ ಮ್ಯೂಸಿಕ್ ಮೂವೀಸ್” ನಲ್ಲಿ ಬಿಡುಗಡೆಯಾಗಿದೆ.

ಈ ಚಿತ್ರದಲ್ಲಿ ರಂಗ ಕಲಾವಿದ, ನಾಟಕಕಾರ, ನಟ, ಕಾದಂಬರಿಕಾರ, ವಿಚಾರವಾದಿ ಯೋಗೇಶ್ ಮಾಸ್ಟರ್ ಇಪ್ಪತ್ನಾಲ್ಕು ಪಾತ್ರಗಳನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಹನ್ನೆರಡು ಪ್ರಾಸಂಗಿಕ ಹಾಡುಗಳು ಕೂಡ ಇವೆ.

ರವೀಂದ್ರನಾಥ್ ಠಾಗೂರ್ ಅವರ ಕಾದಂಬರಿ ಆಧಾರಿತ ಚಿತ್ರ “ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ” https://malgudiexpress.co.in/kannada-film-got-india-book-of-records/ ಒಂದು ವಿಶ್ವಮಟ್ಟದ ರಂಗಭೂಮಿ ಅನುಭವದ ಚಿತ್ರವಾಗಿದೆ ಎಂಬ ಪ್ರಶಂಸೆಗೆ ಪಾತ್ರವಾಗಿದೆ.

ಸಿನಿಮಾ ತಂತ್ರಗಾರಿಕೆಯಲ್ಲಿ ರಂಗಭೂಮಿಯ ನಿರೂಪಣೆ ಇದ್ದು, “ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ”ರವೀಂದ್ರನಾಥ್ ಠಾಗೂರ್ ಅವರ “Once There was a King” ಕಾದಂಬರಿಯನ್ನು ರಂಗ ರೂಪಕ್ಕೆ ತಂದು ರಂಗಭೂಮಿಯ ಮೇಲೆ ಇಪ್ಪತ್ತೊಂದು ವರ್ಷಗಳ ಹಿಂದೆ ಯೋಗೇಶ್ ಮಾಸ್ಟರ್ ಅವರು ಮಾಡಿದ ಏಕವ್ಯಕ್ತಿ ಪ್ರದರ್ಶನದ ಚಿತ್ರ ರೂಪ ಇದಾಗಿದೆ.

ಈ ಪ್ರಯೋಗವನ್ನು, ರಂಗಭೂಮಿಯಿಂದ ಚಲನಚಿತ್ರ ಮಾಧ್ಯಮಕ್ಕೆ ಅಳವಡಿಸುವ ಸಾಹಸವನ್ನು ದೃಷ್ಟಿ ಮೀಡಿಯಾ ಸಂಸ್ಥೆ ಮಾಡಿದ್ದು, ಸಿನಿಮಾ ಮಾಧ್ಯಮದಲ್ಲಿ ರಂಗಭೂಮಿಯಲ್ಲಿ ಇರುವ ಇತಿಮಿತಿಗಳನ್ನು ಮೀರಲು ಸಾಧ್ಯವಾಗಿದೆ. ಮೇಕಪ್, ಅಗತ್ಯದ ವೇಷಭೂಷಣ, ಬೆಳಕು ಮತ್ತು ಅಭಿನಯದ ಸೂಕ್ಷ್ಮ ಸಂವೇದನೆಗಳನ್ನು ಸೆರೆಹಿಡಿಯಲು ಸಾಧ್ಯವಾಗಿದೆ. ಒಟ್ಟಾರೆ ಹೇಳುವುದಾದರೆ ರಂಗ ಪುಯೋಗದ ಸ್ವರೂಪವನ್ನು ಬದಲಿಸದೇ ಅದನ್ನು ಸಿನಿಮಾದ ಮೂಲಕ ಮತ್ತಷ್ಟು ಕುಸುರಿಗೊಳಿಸುವ ಕೆಲಸ ಇದಾಗಿದೆ ಎಂದು ನಿರ್ದೇಶಕ ಮತ್ತು ನಿರ್ಮಾಪಕ ಸಂತೋಷ್ ಕೊಡಂಕೇರಿ ಅವರು ಪ್ರತಿಕ್ರಿಯಿಸಿದ್ದಾರೆ.

“ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ” ಚಿತ್ರ ದಿನಾಂಕ 09-09-2023 ರಂದು “ಜಂಕಾರ್ ಮ್ಯೂಸಿಕ್ ಮೂವೀಸ್” ಡಿಜಿಟಲ್ ಪ್ಲಾಟ್ಫಾರ್ಮ್ ನಲ್ಲಿ ಬಿಡುಗಡೆಗೊಂಡಿರುವುದು ನಮಗೆ ಹೆಮ್ಮೆಯ ಸಂಗತಿ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕಲಾತ್ಮಕ ಚಿತ್ರವನ್ನು ತಾವೆಲ್ಲರು ನೋಡಿ ಹಾಗೂ ನಮ್ಮನ್ನು ಪ್ರೋತ್ಸಾಹಿಸಿ ಎಂದು ಈ ಮೂಲಕ ಕೇಳಿಕೊಳ್ಳುತ್ತೇವೆ. ನಿಮ್ಮೆಲ್ಲರ ಸಹಕಾರ, ಪ್ರೀತಿ ಸದಾ ಇರಲಿ ಮನವಿ ಮಾಡಿಕೊಂಡಿದ್ದಾರೆ.

Leave a Reply