ಬೌದ್ಧ ಧಮ್ಮದಲ್ಲಿ ಮನುಷ್ಯರೆಲ್ಲರೂ ಒಂದೇ: ಧಮ್ಮ ತಿಸ್ಸಾ ಬಂತೇ

3 years ago

#Buddhist #Dhamma #human #beings are #same #DhammaTissaBante

ಚಾಮರಾಜನಗರ: ಬೌದ್ಧ ಧಮ್ಮದಲ್ಲಿ ಮನುಷ್ಯರೆಲ್ಲರೂ ಒಂದೇ. ಜಾತಿ -ಬೇಧ, ಮೇಲು- ಕೀಳು ಎಂಬ ತಾರತಮ್ಯ ಇಲ್ಲ ಎಂದು ಕೊಳ್ಳೇಗಾಲದ ಪೂಜ್ಯ ಬಂತೇ ಧಮ್ಮ ತಿಸ್ಸಾ ಹೇಳಿದರು.

ಇಲ್ಲಿನ ಸಾರನಾಥ ಬುದ್ಧ ವಿಹಾರದಲ್ಲಿ ಗುರುಪೂರ್ಣಿಮೆ ಅಂಗವಾಗಿ ಭಾರತೀಯ ಬೌದ್ಧ ಮಹಾಸಭಾ ಆಯೋಜಿಸಿದ್ದ ಧಮ್ಮ ಚಕ್ಕ ಪವತ್ತನ ದಿನಾಚರಣೆ  ಧಮ್ಮ ಪ್ರವಚನ ನೀಡಿ ಮಾತನಾಡಿದ ಅವರು, ಬುದ್ಧ ಗುರು ಹೇಳಿದ ಆರು ಸರ್ವಶ್ರೇಷ್ಠ ದಾನಗಳಾದ ಆಹಾರ ಧಾನ, ವಸ್ತ್ರದಾನ, ಔಷಧ ದಾನ, ವಸತಿದಾನ ಅಭಯದಾನ ಮತ್ತು ಧಮ್ಮ ಧಾನಗಳನ್ನು ಅಗತ್ಯಾನುಸಾರವಾಗಿ ಜನರಿಗೆ ನೀಡುವುದು ಅತ್ಯಂತ ಮಹತ್ತರವಾದ ಸದ್ಗುಣಗಳಾಗಿವೆ ಎಂದು ಹೇಳಿದರು.

ಎಲ್ಲಾ ದಾನಗಳಲ್ಲೂ ದಮ್ಮ ದಾನವೇ ಶ್ರೇಷ್ಠವಾದದ್ದು. ಇದರಿಂದ ಮಾನವೀಯ ಗುಣ ಸಂಪನ್ನರಾಗಿ ಜನರನ್ನು ಪ್ರಬುದ್ಧರನ್ನಾಗಿಸಲು ಸಾಧ್ಯವಾಗುತ್ತದೆ. ಶೀಲ- ಸಮಾಧಿ -ಪ್ರಜ್ಞೆ -ವಿಮುಕ್ತಿ ಇದೆ ಧಮ್ಮದ ಶ್ರೇಷ್ಠತೆ. ಎಲ್ಲರೂ ಗೌರವದಿಂದ ಧಮ್ಮವನ್ನು ಆಚರಿಸಬೇಕು ಎಂದರು.

ಭಾರತ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಆರ್ ಬಸವರಾಜು, ಕಾರ್ಯದರ್ಶಿ ಶಿವಣ್ಣ , ಸಂಬುದ್ಧ ಟ್ರಸ್ಟಿ ಸಿ.ಎಂ ನರಸಿಂಹಮೂರ್ತಿ, ವಕೀಲರ ಸಂಘದ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ದಲಿತ ಮುಖಂಡ ಸಿಎಂ ಕೃಷ್ಣಮೂರ್ತಿ, ಮಲ್ಲಿಕ್ ಸೇರಿದಂತೆ ನೂರಾರು ಬೌದ್ಧ ಉಪಾಸಕ  ಉಪಾಸಕಿಯರು ಭಾಗವಹಿಸಿದ್ದರು.

Leave a Reply