ಬೆಂಗಳೂರು: ಕರ್ನಾಟಕ ಬೀದಿನಾಟಕ ಅಕಾಡೆಮಿ, ಬೆಂಗಳೂರು ವತಿಯಿಂದ ಮೂರು ದಿನಗಳ ಒಡಲಾಳ ನಾಟಕೋತ್ಸವ ನಡೆಯಲಿದೆ. ಇದೇ ಸಮಾರಂಭದಲ್ಲಿ 2021, 2022, 2023ನೇ ಸಾಲಿನ ಸಿಜಿಕೆ ಪ್ರಶಸ್ತಿ ಪುರಸ್ಕಾರವನ್ನು ಕೂಡ ಆಯೋಜಿಸಲಾಗಿದ್ದು, ರಂಗಪ್ರಯೋಗಗಳು ಮತ್ತು ಜಾನಪದ ಗೀತೆಗಳ ಗಾಯನ ಕಾರ್ಯಕ್ರಮವನ್ನು ಕೂಡ ಆಯೋಜಸಲಾಗಿದೆ. ಸಂಜೀವಿನ ಮತ್ತು ಚೋಮನದುಡಿ ನಾಟಕಗಳ ಪ್ರಯೋಗ ಕೂಡ ನಡೆಯಲಿದೆ.

ಕಾರ್ಯಕ್ರಮ ಕುವೆಂಪು ಕಲಾಕ್ಷೇತ್ರ, ಬಿಇಎಲ್ ಕಾರ್ಖಾನೆ ಆವರಣ ಜಾಲಹಳ್ಳಿ, ಬೆಂಗಳೂರು – 560013 ಇಲ್ಲಿ ನಡೆಯಲಿದ್ದು, ಹೆಚ್ಚಿನ ಮಾಹಿತಿಗೆ 8050643467 ನಂಬರ್ ಗೆ ಸಂಪರ್ಕಿಸಬಹುದು.

25 ಜೂನ್ 2023 ಭಾನುವಾರ ಸಂಜೆ:6-30ಕ್ಕೆ
ಉದ್ಘಾಟನೆ: ಸಾಂಬಶಿವ ದಳವಾಯಿ, ರಂಗ ಪದವೀಧರರು, ರಾಷ್ಟ್ರೀಯ ನಾಟಕ ಶಾಲೆ, ನವದೆಹಲಿ
ಅಧ್ಯಕ್ಷತೆ: ನರಸಿಂಹ ನಾಯ್ಕ, ಅಧ್ಯಕ್ಷರು, ಬಿ.ಇ.ಎಲ್.ಲಲಿತಕಲಾ ಸಂಘ, ಬೆಂಗಳೂರು
ಅತಿಥಿಗಳು: ಎನ್.ಹರಿಕುಮಾರ್, ನಿವೃತ್ತ ಸಹಾಯಕ ನಿರ್ದೇಶಕರು,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು
ಜಯಶಂಕರ ಬೆಳಗುಂಬ, ರಂಗ ನಿರ್ದೇಶಕರು, ಹಾಸನ
ರಂಗಪ್ರಯೋಗ: ಸಂಜೀವಿನಿ
ತಂಡ: ರಂಗವರ್ಣ ಬೆಂಗಳೂರು
ನಿರ್ದೇಶನ: ಕೃಷ್ಣಮೂರ್ತಿ ಕವತ್ತಾರ್

26 ಜೂನ್ 2023 ಸೋಮವಾರ ಸಂಜೆ:6-30ಕ್ಕೆ
ಅತಿಥಿಗಳು: ಎಲ್. ನಾಗಭೂಷಣ್, ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಕಲಾವಿದರು.
ಆನಂದ ಪಣ್ಣೇದೊಡ್ಡಿ, ರಂಗಭೂಮಿ ಹಾಗೂ ಕಿರುತೆರೆ ಕಲಾವಿದರು
ಪ್ರದೀಪ್ ತಿಪಟೂರು, ರಂಗ ನಿರ್ದೇಶಕರು ಹಾಗೂ ಕಿರುತೆರೆ ಕಲಾವಿದರು
ರಂಗಪ್ರಯೋಗ: ಚೋಮನ ದುಡಿ
ತಂಡ: ರೂಪಾಂತರ
ರಚನೆ: ಶಿವರಾಮ ಕಾರಂತ
ನಿರ್ದೇಶನ:ಕೆ ಎಸ್ ಡಿ ಎಲ್ ಚಂದ್ರು

27 ಜೂನ್ 2023 ಮಂಗಳವಾರ ಸಂಜೆ 6:30ಕ್ಕೆ
ಪ್ರಶಸ್ತಿ ಪ್ರದಾನ: ಡಾ.ಎಂ.ಎಸ್.ಮೂರ್ತಿ, ಹಿರಿಯ ಚಿತ್ರಕಲಾವಿದರು ಹಾಗೂ ಮಾಜಿ ಅಧ್ಯಕ್ಷರು ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು
ಅಧ್ಯಕ್ಷತೆ: ಅರ್.ಪಿ.ಮೋಹನ್, ಪ್ರಧಾನ ವ್ಯವಸ್ಥಾಪಕರು, ಮಾನವ ಸಂಪನ್ಮೂಲಗಳು, ಬಿ.ಇ.ಎಲ್., ಬೆಂಗಳೂರು
ಅತಿಥಿಗಳು:
ಸಿ.ಎಂ.ನರಸಿಂಹಮೂರ್ತಿ, ರಂಗಭೂಮಿ ಹಾಗೂ ಜಾನಪದ ಕಲಾವಿದರು
ಕೃಷ್ಣ ರಾಯಚೂರು, 2020 ಸಾಲಿನ ಸಿಜಿಕೆ ರಂಗಪುರಸ್ಕಾರ ಪುರಸ್ಕೃತರು
ಉಪಸ್ಥಿತಿ: ಸಿಜಿಕೆ ಪ್ರಶಸ್ತಿ ಪುರಸ್ಕಾರ ಪುರಸ್ಕೃತರು
ಕೆ ಎಸ್ ಡಿ ಎಲ್ ಚಂದ್ರು – 2021
ಕೃಷ್ಣಮೂರ್ತಿ ಕವತ್ತಾರ್ – 2022
ಡಾ ಶಂಕರಪ್ಪ ಕೆ ಜೆ – 2023
ಕುಸುಮಬಾಲೆ ಹಾಡುಗಳು
ಡಾ.ಶಂಕರಪ್ಪ ಕೆ.ಜೆ.ಹಾಗೂ ಸಂಗಡಿಗರು



