ಮರಣಾನಂತರವೂ ವಿರೋಧಗಳನ್ನು ಎದುರಿಸುತ್ತಿರುವ ಜಗತ್ತಿನ ಏಕೈಕ ಜೀವವೆಂದರೆ ಗಾಂಧೀಜಿ

3 years ago

ಇದೀಗ ಮಹಾತ್ಮನ ಪುತ್ರ ಹಾಗೂ ಗಾಂಧಿಗಿರಿಯ ಫಸಲುಗಳು ಈ ಎರಡೂ ಕೃತಿಗಳು ಸಪ್ನ ಬುಕ್ ಹೌಸ್ ಮೂಲಕ ನಾಲ್ಕನೆಯ ಮುದ್ರಣ ಕಂಡಿವೆ.

ಗಾಂಧಿಯವರ ಕುರಿತಾಗಿ ವಿಷ ಉಗುಳುವುದೇ ತಮ್ಮ ಚಿಂತನೆಯ ಮುಖ್ಯ ಗುರಿ ಎಂದು ನಂಬಿರುವ ಅರೆಬೆಂದ ಮಡಕೆಗಳಿಗಾಗಿ ಬರೆದ ಮಹತ್ವದ ಕೃತಿಗಳಿವು. ( 250 ರೂ.ಗೆ ಎರಡೂ ಕೃತಿಗಳು ದೊರೆಯುತ್ತವೆ)

ಮಹಾತ್ಮನ ಹಿರಿಯ ಪುತ್ರ ಹರಿಲಾಲ್ ಗಾಂಧಿಯೆಂಬ ಅತ್ಯಂತ ಬುದ್ದಿವಂತನ ದಾಂಪತ್ಯ ಬದುಕಿನ ದುರಂತ ಮತ್ತು ಆತನು ವ್ಯವಹಾರದಲ್ಲಿ ಅನುಭವಿಸಿದ ಸೋಲಿನಿಂದ ದಾರಿ ತಪ್ಪಿದಾಗ ಓರ್ವ ತಂದೆಯಾಗಿ ಬಾಪೂಜಿ ಅನುಭವಿಸಿದ ಮಾನಸಿಕ ಯಾತನೆಗಳನ್ನು ಕೃತಿಯಲ್ಲಿ ದಾಖಲಿಸಲಾಗಿದೆ.

ಸ್ವಾತಂತ್ರ್ಯ ದ ಸಮಯದಲ್ಲಿ ಹಿಂದೂ ವಿರೋಧಿ, ಮುಸ್ಲಿಂ ಪರವಾಗಿ ಇರುವ ದೇಶದ್ರೋಹಿ ಎಂಬ ಪಟ್ಟ ಹಾಗೂ ಸ್ವಾತಂತ್ರ್ಯಾ ನಂತರದಲ್ಲಿ ಪೂನಾ ಒಪ್ಪಂದದ ನೆಪದಲ್ಲಿ ದಲಿತರ ವಿರೋಧಿ ಎಂದು ಮರಣಾನಂತರವೂ ವಿರೋಧಗಳನ್ನು ಎದುರಿಸುತ್ತಿರುವ ಜಗತ್ತಿನ ಏಕೈಕ ಜೀವವೆಂದರೆ ಗಾಂಧೀಜಿ.

ಗಾಂಧಿಗಿರಿಯ ಫಸಲುಗಳು ಕೃತಿಯಲ್ಲಿ ಮೊದಲ ನೋಟಕ್ಕೆ, ಮೊದಲ ಮಾತಿಗೆ ಈ ಮಹಾತ್ಮನಿಂದ ಆಕರ್ಷಿತರಾಗಿ ಇಡೀ ಬದುಕನ್ನು ಗಾಂಧಿವಾದಿಗಳಾಗಿ, ಭಾರತದ ಸ್ವಾತಂತ್ರ್ಯ ಹೋರಾಟಗಾರರಾಗಿ ಬದುಕಿದ ಮಹನೀಯರು ಮತ್ತು ಅವರ ಹಾಗೂ ಗಾಂಧಿಯ ಒಡನಾಟವನ್ನು ದಾಖಲಿಸಿದ್ದೀನಿ.

ಒಬ್ಬ ಲೇಖಕನಾಗಿ ಆತ್ಮ ವಿಶ್ವಾಸದಿಂದ ಹೇಳಬಲ್ಲೆ. ಈ ಎರಡೂ ಕೃತಿಗಳು ಗಾಂಧಿ ಕುರಿತು ವಿಷ ಕಕ್ಕುವವರ ಎದೆಯೊಳಗಿನ ಕಲ್ಮಶವನ್ನು ತೊಡೆದು ಹಾಕಬಲ್ಲವು.

ಸಪ್ನ ಪ್ರಕಾಶನದ ಮಾಲಿಕರಾದ ನಿತಿನ್ ಷಾ ಮತ್ತು ವ್ಯವಸ್ಥಾಪಕರಾದ ಆರ್. ದೊಡ್ಡೇಗೌಡರ ಪ್ರೀತಿ, ವಿಶ್ವಾಸ ದೊಡ್ಡದು. ಕೃತಿಳು ಮರು ಮುದ್ರಣವಾಗುತ್ತಿದ್ದಂತೆ ನನಗೆ ಪತ್ರ ಬರೆದು, ಸಂಭಾವನೆಯನ್ನು ಕಳಿಸಿಕೊಡುತ್ತಾರೆ. ಕಳೆದ ಹತ್ತು ವರ್ಷಗಳಿಂದ ನಾನು ಸಪ್ನ ಬುಕ್ ಹೌಸ್ ನಿಂದ ವಾರ್ಷಿಕವಾಗಿ ಸರಾಸರಿ 60 ಸಾವಿರ ರೂಪಾಯಿನಿಂದ 80 ಸಾವಿರ ಸಂಭಾವನೆ ಪಡೆಯುತ್ತಿದ್ದೀನಿ.

ಲೇಖಕರ ಜೊತೆಗೆ ಸುಮಧರ ಬಾಂಧವ್ಯ ಇಟ್ಟುಕೊಳ್ಳುವಲ್ಲಿ ನನ್ನ ಅನುಭವದ ಪ್ರಕಾರ ಸಪ್ನ ಮತ್ತು ನವಕರ್ನಾಟಕ ಸಂಸ್ಥೆಗಳು ಇತರೆ ಪ್ರಕಾಶನ ಸಂಸ್ಥೆಗಳಿಗೆ ಮಾದರಿಯಾಗಿವೆ.

ಜಗದೀಶ್ ಕೊಪ್ಪ, ‌ಹಿರಿಯ ಪತ್ರಕರ್ತರು

Leave a Reply