ಬೆಂಗಳೂರು: ಬಿಜೆಪಿ ವತಿಯಿಂದ ನಗರದಲ್ಲಿ ನಡೆದ ವಿಜಯಸಂಕಲ್ಪ ಯಾತ್ರೆ ದಯಾನಂದನಗರ ವಾರ್ಡ್ ಬಂಡಿರೆಡ್ಡಿ ಸರ್ಕಲ್ ನಿಂದ ಪ್ರಾರಂಭವಾಗಿ ಪ್ರಕಾಶನಗರ ,ರಾಜಾಜಿನಗರ ಹಳೆ ಪೊಲೀಸ್ ಠಾಣೆ ಸರ್ಕಲ್ ಹಾಗೂ ಶ್ರೀರಾಮಮಂದಿರ ವಾರ್ಡ್ ರಾಜ್ ಕುಮಾರ್ ಪ್ರತಿಮೆ ಬಳಿ ಸಂಕಲ್ಪ ಯಾತ್ರೆ ಮುಕ್ತಾಯವಾಯಿತು. ನೂರಾರು ಮಹಿಳೆಯರು ಕಳಸಹೊತ್ತು ಮತ್ತು ಡೊಳ್ಳು, ಕುಣಿತ ಮತ್ತು ಕೇಸರಿ ರುಮಾಲು ಧರಿಸಿದ ಕಾರ್ಯಕರ್ತರು 1.3ಕಿಲೋ ಮೀಟರ್ ಪಾದಯಾತ್ರೆಯಲ್ಲಿ ಸಾಗಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್, ಕಂದಾಯ ಸಚಿವ ಆರ್.ಅಶೋಕ್, ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ವಿಧಾನಪರಿಷತ್ ಸದಸ್ಯ ಅ.ದೇವೇಗೌಡ, ಮಾಜಿ ಶಾಸಕ ಲಕ್ಯ್ಮೀನಾರಾಯಣ್ ಭಾಗವಹಿಸಿದ್ದರು.
ಆರ್.ಅಶೋಕ್ ಮಾತನಾಡಿ, ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಜೆಡಿಎಸ್ ಕಿತ್ತಾಟದಲ್ಲಿ ಮುಕ್ತಾಯವಾಯಿತು. ಶಾದಿಭಾಗ್ಯ ಮಾಡಿ ಜಾತಿ ಒಲೈಕೆ ಮಾಡಿದ್ದಾರೆ. ಟಿಪ್ಪು ನಂಬಿದವರು ಎಲ್ಲರು ಹಾಳಾಗಿ ಹೋಗಿದ್ದಾರೆ. ವರುಣಾ, ಚಾಮುಂಡೇಶ್ವರಿ, ಬಾದಾಮಿ, ಕೋಲಾರ ಆಯಿತು. ವಿಧಾನಸಭಾ ಕ್ಷೇತ್ರ ಇಲ್ಲದೇ ಅಲೆಮಾರಿಯಂತೆ ಸಿದ್ದರಾಮಯ್ಯ ತಿರುಗುತ್ತಿದ್ದಾರೆ. ಪಾಕಿಸ್ತಾನದವರು ನರೇಂದ್ರ ಮೋದಿರವರು ಪ್ರಧಾನಿ ಆಗಲಿ ಎಂದು ಆ ದೇಶದ ಜನ ಬಯುಸುತ್ತಿದ್ದಾರೆ. ರಾಹುಲ್ ಗಾಂಧಿ ಹೋದ ಕಡೆ ಸೋಲು ಖಚಿತ ಎಂದು ಹೇಳಿದರು.
ಎಸ್.ಸುರೇಶ್ ಕುಮಾರ್ ಮಾತನಾಡಿ, ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಯುತ್ತಿದೆ. ನಮ್ಮ ಕ್ಷೇತ್ರದ ಪಕ್ಷದ ಕಾರ್ಯಕರ್ತರು ವಿಧಾನಸಭಾ ಚುನಾವಣೆಯನ್ನ ಹಬ್ಬದ ರೀತಿಯಲ್ಲಿ ಆಚರಿಸಲು ಸಜ್ಜಾಗಿದ್ದಾರೆ. ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರೂ ಯುದ್ದದ ಸಿಪಾಯಿಯಂತೆ ತಯಾರಾಗಿದ್ದಾರೆ ಎಂದರು.
ಶ್ರೀ ರಾಮಮಂದಿರದ ಬಳಿ ಬಿಜೆಪಿ ವಿಜಯ ಸಂಕಲ್ಪಯಾತ್ರೆ ಮುಗಿದ ತಕ್ಷಣ ಎಸ್.ಸುರೇಶ್ ಕುಮಾರ್ ರವರು ಸ್ವಚ್ಚತಾ ಕಾರ್ಯಕರ್ತರ ಜೊತೆಯಲ್ಲಿ ಸೇರಿ ರಸ್ತೆಯಲ್ಲಿ ಬಿದ್ದ ಹೂವು, ಪೇಪರ್ ಮತ್ತು ನೀರಿನ ಖಾಲಿ ಬಾಟಲ್ ತೆಗೆದು ರಸ್ತೆ ಸ್ವಚ್ಛ ಮಾಡಿದರು.
ರಾಘವೇಂದ್ರರಾವ್, ಸಂಜಯ್ ಕುಮಾರ್, ಎಂ.ಮುನಿರಾಜು, ರಾಜಣ್ಣ, ದೀಪಾ ನಾಗೇಶ್, ಪ್ರತಿಮಾ, ಬಿ.ಎನ್.ಶ್ರೀನಿವಾಸ್, ಮುನ್ನಭಾಯಿ, ಸತೀಶ್ ಭಗವಾನ್, ಕಿರಣ್, ಲಕ್ಷ್ಮೀನಾರಾಯಣ್, ಯಶಸ್ ನಾಯಕ್, ಸುದರ್ಶನ್, ಅಮಿತ್ ಜೈನ್ ಮೊದಲಾದವರು ಹಾಜರಿದ್ದರು.




