ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಪ್ರಧಾನಿಗಳ ಫೋಟೋ ಬಳಸಿ ಎಲ್ಲರ ಖಾತೆಗೆ ಮೋದಿಯವರ ಕಡೆಯಿಂದ 5 ಸಾವಿರ ರೂ. ಹಾಕುವ ನಕಲಿ ಸಂದೇಶ ನೀಡುವುದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿದೆ.
- ನಕಲಿ ಔಷಧಿ ತಯಾರಕರು, ಮಾರಾಟಗಾರರನ್ನು ಶಿಕ್ಷಿಸಿ
- ಹೈಕಮಾಂಡ್ಗೆ ಕೊಡಲು ಹಣವಿದೆ, ರೈತರಿಗೆ ಕೊಡಲು ಹಣವಿಲ್ಲ: ಆರ್.ಅಶೋಕ
- ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಕುರಿತು ಡಿ ಕೆ ಶಿವಕುಮಾರ್ ಹೇಳಿದ್ದೇನು?
- ಬರ ಘೋಷಣೆಗಿರುವ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಸಲಿ: ಡಾ. ಜಿ. ಪರಮೇಶ್ವರ್
- ಧನುಷ್ ನಟನೆಯ ‘OM’ ಬಿಡುಗಡೆ ದಿನಾಂಕ ಮುಂದೂಡಿಕೆ!
5 ಸಾವಿರ ಪಡೆದಿದ್ದೀರಾ,ಇದನ್ನ ನಿಮ್ಮ ಅಕೌಂಟ್ ಗೆ ಹಾಕಲು ಲಿಂಕ್ ಮಾಡಿ ಎಂಬ ಸಂದೇಶ ಕಳುಹಿಸುತ್ತಾರೆ. ಲಿಂಕ್ ಕ್ಲಿಕ್ ಮಾಡಿದರೆ ಕೂಡಲೇ ಖಾತೆಯಿಂದ ಹಣ ಎಗರಿಸುವಂತೆ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದಾರೆ. ಕೂಡಲೇ ಇದಕ್ಕೆ ಕಡಿವಾಣ ಹಾಕಲು ಕ್ರಮ ತೆಗೆದುಕೊಳ್ಳುವಂತೆ ಚುನಾವಣಾಧಿಕಾರಿಗಳು ಹಾಗೂ ಸೈಬರ್ ಅಪರಾಧ ವಿಭಾಗಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ದೂರು ನೀಡಿ, ಕ್ರಮಕ್ಕೆ ಒತ್ತಾಯಿಸಿದೆ.
ಇನ್ನೂ ಈ ರೀತಿಯ ಮೆಸೇಜ್ ಗಳ ಬಗ್ಗೆ ಸೈಬರ್ ತಜ್ಞರು ಜನರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಕಳ್ಳರು ಸುಲಭವಾಗಿ ತಂತ್ರಜ್ಞಾನವನ್ನ ಬಳಸಿಕೊಂಡು ಸಾಮಾನ್ಯರ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ. ಆದರೆ ಈಗ ಪ್ರಧಾನಿಗಳ ಫೋಟೋ ಬಳಸಿ ವಂಚಿಸಲು ಮುಂದಾಗಿದ್ದಾರೆ. ಈ ರೀತಿಯ ಮೆಸೇಜ್ ಬಂದಾಗ ಯಾರೂ ಸಹ ರೆಸ್ಪಾಂಡ್ ಮಾಡಬೇಡಿ. ವೈಯಕ್ತಿಕ ಒಟಿಪಿಗಳನ್ನ ಶೇರ್ ಮಾಡಬೇಡಿ. ಅನ್ಯ ಸಂದೇಶಗಳಿಂದ ಬರುವ ಲಿಂಕ್ ಗಳನ್ನು ಕ್ಲಿಕ್ ಮಾಡದಂತೆ ತಜ್ಞರು ಸಲಹೆ ನೀಡಿದ್ದಾರೆ.




