ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಹೆಣ್ಣುಮಕ್ಕಳ ನಾಪತ್ತೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ 12 ವರ್ಷಗಳಲ್ಲಿ ನಾಪತ್ತೆಯಾಗಿರುವ 485 ಮಹಿಳೆಯರು, ಬಾಲಕಿಯರು ಇದುವರೆಗೂ ಪತ್ತೆಯಾಗಿಲ್ಲ.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಪ್ರೇಮ ಪ್ರಕರಣಗಳು, ಕೌಟುಂಬಿಕ ಕಲಹ, ಮನಸ್ತಾಪ, ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಜಾಲತಾಣದಲ್ಲಿ ಪರಿಚಿತರ ಪ್ರಭಾವ, ಅಪಹರಣ, ಕಳ್ಳಸಾಗಣೆ ಮತ್ತಿತರ ಕಾರಣದಿಂದ ಬಾಲಕಿಯರು, ಮಹಿಳೆಯರು ನಾಪತ್ತೆಯಾಗುತ್ತಿದ್ದಾರೆ.
ವರದಿಯ ಪ್ರಕಾರ 19 ರಿಂದ 21 ವರ್ಷ ವಯಸ್ಸಿನ 173 ಹುಡುಗಿಯರು ಇನ್ನೂ ಪತ್ತೆಯಾಗಿಲ್ಲ. 16 ವರ್ಷದೊಳಗಿನ 162 ಹುಡುಗಿಯರು ಕಾಣೆಯಾಗಿದ್ದಾರೆ. 17 ರಿಂದ 18 ವರ್ಷ ವಯಸ್ಸಿನ 92 ಹುಡುಗಿಯರು ಮತ್ತು 22 ವರ್ಷ ಮೇಲ್ಪಟ್ಟ ವಯಸ್ಸಿನ 58 ಮಹಿಳೆಯರು ಸಹ ಪತ್ತೆಯಾಗಿಲ್ಲ. ಕಾಣೆಯಾದವರಲ್ಲಿ ಶೆ. 70 ರಷ್ಟು ಮಹಿಳೆಯರು ಮತ್ತು ಹುಡುಗಿಯರು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೇರಿದವರು ಎಂದು ಅಂಕಿಅಂಶಗಳ ಮೂಲಕ ತಿಳಿದುಬಂದಿದೆ.
ಕೆಲ ಪ್ರಕರಣಗಳಲ್ಲಿ ತಮ್ಮ ಮನೆಯವರು ನಾಪತ್ತೆಯಾಗಿದ್ದಾರೆ ಎಂಬ ಗಂಭೀರ ಅಂಶವನ್ನು ಮರೆಮಾಚುವ ಕುಟುಂಬಸ್ಥರು ಅವರನ್ನು ಪತ್ತೆಹಚ್ಚಲು ತಮ್ಮದೆ ಮಾರ್ಗಗಳನ್ನು ಹುಡುಕಿಕೊಂಡು ಹೊರಡುತ್ತಾರೆ. ಅಂತಿಮವಾಗಿ ನಾಪತ್ತೆಯಾದವರನ್ನು ಪತ್ತೆಹಚ್ಚಿಕೊಳ್ಳುತ್ತಾರೆ. ಕಾಣೆಯಾದ ವ್ಯಕ್ತಿಯನ್ನು ಪತ್ತೆಹಚ್ಚಲು ಈ ಕುಟುಂಬಗಳು ಪೊಲೀಸ್ ತನಿಖೆಗಳನ್ನೂ ಮೀರಿದ ವಿಧಾನಗಳು, ಮಾರ್ಗಗಳನ್ನು ಬಳಸುತ್ತವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪರಿಸ್ಥಿತಿಯ ಸೂಕ್ಷ್ಮತೆ ಮತ್ತು ಗಂಭೀರತೆಯನ್ನು ಬಿಚ್ಚಿಟ್ಟಿದ್ದಾರೆ.
ಇನ್ನು ಕೆಲ ಕುಟುಂಬಗಳಲ್ಲಿ ಕಾಣೆಯಾದ ಯುವತಿ ಹಿಂದಿರುಗಿ ಮನೆಗೆ ಬಂದರೆ ನೆರೆಹೊರೆಯವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಅವಮಾನ ಮಾಡುತ್ತಾರೆ ಎಂದು ಹೆದರಿ ಕುಟುಂಬಸ್ಥರು ಪ್ರಕರಣದ ತನಿಖೆಗೆ ಸರಿಯಾಗಿ ಸ್ಪಂದಿಸುವುದಿಲ್ಲ. ಹಾಗೂ ತನಿಖೆಯ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನಗಳನ್ನೂ ಮಾಡುವುದಿಲ್ಲ. ಅಂತಿಮವಾಗಿ ತನಿಖಾಧಿಕಾರಿಗಳಿಗೆ ಪ್ರತಿಕ್ರಿಯಿಸುವುದನ್ನೂ ನಿಲ್ಲಿಸುತ್ತಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.
ಪೊಲೀಸರು ನಿರಂತರವಾಗಿ ದೂರುದಾರರನ್ನು ಸಂಪರ್ಕಿಸುತ್ತಾರೆ, ಆದರೆ ಅವರಿಂದಲೇ ಸ್ಪಂದನೆ ಸಿಗಲ್ಲ. ಆಗ ಪ್ರಕರಣಗಳನ್ನು ಕೈಬಿಡಲಾಗುತ್ತೆ. ಅಪ್ರಾಪ್ತ ಬಾಲಕಿಯು ಓಡಿಹೋಗಿ ಮದುವೆಯಾಗಿ ಹಿಂದಿರುಗಿದಾಗ, ದೂರುದಾರರು ಹುಡುಗನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗುವುದನ್ನು ತಡೆಯಲು ಪೊಲೀಸರಿಗೆ ಮಾಹಿತಿ ನೀಡುವುದನ್ನೇ ತಪ್ಪಿಸುತ್ತಾರೆ. ಇದರಿಂದಾಗಿ ಅನೇಕ ನಾಪತ್ತೆ ಪ್ರಕರಣಗಳು ಕ್ಲೋಸ್ ಆಗುವುದಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.




