200 ವರ್ಷಗಳ ಪ್ರಾಚೀನ ಕಾಲದ ಬುದ್ಧನ ವಿಗ್ರಹ ಕಳವು: ಬಂಧನ

3 years ago

ಬೆಂಗಳೂರು: ಸುಮಾರು 200 ವರ್ಷಗಳ ಪ್ರಾಚೀನ ಕಾಲದ ಬುದ್ಧನ ವಿಗ್ರಹವನ್ನು ಹೊರದೇಶಕ್ಕೆ ರಫ್ತು ಮಾಡಲು ನಗರದಲ್ಲಿ ಮಾರಾಟ ಮಾಡಲು ಬಂದಿದ್ದ‌ ಹೈದರಾಬಾದ್ ನ ಐವರು ಖದೀಮರನ್ನು ಬಂಧಿಸುವಲ್ಲಿ‌ ಸಂಪಂಗಿರಾಮನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಪಂಚಮೂರ್ತಿ ಅಲಿಯಾಸ್ ರಾಮಚೌಧರಿ (48) ಉದಯ್ ಕುಮಾರ್  (37) ಫ್ರೆಂಡಿ ಡಿಸೋಜ (44) ಶರಣ್ ನಾಯರ್ (41) ಪ್ರಸನ್ನ (31) ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತ ಆರೋಪಿಗಳು ‌ಸಂಪಂಗಿರಾಮನಗರದ ವುಡ್‍ಲ್ಯಾಂಡ್ ಹೋಟೆಲ್ ಬಳಿ ಬುದ್ದನ ಪ್ರಾಚೀನ ಕಾಲದ ವಿಗ್ರಹವನ್ನು ಹೊರದೇಶಕ್ಕೆ ರಫ್ತು ಮಾಡಲು ಅಕ್ರಮವಾಗಿ ಯಾವುದೇ ದಾಖಲಾತಿಗಳಿಲ್ಲದೇ ಅಕ್ರಮವಾಗಿ ಮಾಡಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಮಾರಾಟ ಮಾಡಲು ಬಂದಿರುವ ಬಗ್ಗೆ ಬಾತ್ಮಿದಾರರಿಂದಿಗೆ ಬಂದ ಖಚಿತ ಮಾಹಿತಿ ಆಧರಿಸಿ ಬಂಧಿಸಲಾಗಿದೆ.

ಆರೋಪಿಗಳಿಂದ ಬುದ್ಧನ ಪ್ರಾಚೀನ ಕಾಲದ ವಿಗ್ರಹ, 5 ಮೊಬೈಲ್ ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ. ಆರೋಪಿಗಳ ಪೈಕಿ ಪಂಚಮೂರ್ತಿಗೆ ಶ್ರೀಕಾಂತ ಎಂಬುವವನು ಈ ವಿಗ್ರಹವನ್ನು 30 ಲಕ್ಷ ರೂ ಹಣಕ್ಕೆ ಮಾರಾಟ ಮಾಡಿದ್ದು ಈ ವಿಗ್ರಹವನ್ನು ಹೊರ ದೇಶಕ್ಕೆ ರಫ್ತು ಮಾಡಿ ಮಾರಾಟ ಮಾಡಿದರೆ ಕೋಟಿ ರೂ ಗಳಿಗಿಂತಲೂ ಹೆಚ್ಚಿನ ಬೆಲೆ ಸಿಗುತ್ತದೆ ಅದರಲ್ಲಿ ಎಲ್ಲರೂ  ಪಾಲು ತೆಗೆದುಕೊಂಡು ಸುಲಭವಾಗಿ ಹಣ ಸಂಪಾದನೆ ಮಾಡಬಹುದೆಂದು ಇತರ ಆರೋಪಿಗಳ ಜೊತೆ ಸೇರಿ‌‌ ಸಂಚು ಮಾಡಿರುವುದು ವಿಚಾರಣೆಯಿಂದ ತಿಳಿದುಬಂದಿದೆ

ಈ ಪುರಾತನ ವಿಗ್ರಹವನ್ನು ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ಬಂದಿರುವ ಬಗ್ಗೆ ತನಿಖೆಯಲ್ಲಿ ಕಂಡುಬಂದಿದೆ ಎಂದು ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದರು.

Leave a Reply