ಬೆಂಗಳೂರು: ಹೊಸವರ್ಷದ ಸಂಭ್ರಮಾಚರಣೆಗೆ ಸಿದ್ಧತೆ ನಡೆದಿರುವ ನಡುವೆಯೇ ಮಹಾನಗರ ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಮಾರಾಟ ಸಾಗಾಣಿಕೆ ಮತ್ತು ಸೇವನೆ ನಡೆಯಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.
- 2.50 ಕೋಟಿ ಮೌಲ್ಯದ ಮಾದಕವಸ್ತು ಜಪ್ತಿ
- ಅಹಿತಕರ ಘಟನೆಗಳು ಆಗದಂತೆ ನಿಗಾವಹಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಿ: ಡಾ.ಎಂ.ಎ ಸಲೀಂ
- ರಾಜಕೀಯ ಕಿಡಿ ಹೊತ್ತಿಸಿದ ಕೋಗಿಲು ಅಕ್ರಮ ನಿವಾಸಿಗಳ ತೆರವು
- ಕರ್ನಾಟಕದಲ್ಲಿ ಕನ್ನಡ ವಾತಾವರಣ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ: ಸಿದ್ದರಾಮಯ್ಯ
- ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನ
ಇದರ ನಡುವೆ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಒರ್ವ ವಿದೇಶಿ ಪ್ರಜೆ ಮತ್ತು ಅಮೆಜಾನ್ ಡಿಲವರಿ ಬಾಯ್ ನನ್ನು ಬಂಧಿಸಿ 2.50 ಕೋಟಿ ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಬಂಧಿತರನ್ನು ನೈಜೀರಿಯಾದ ಒಕೇ ಕ್ರಿಸ್ಟೋಫರ್(45) ಹಾಗೂ ತಮಿಳುನಾಡು ಮೂಲದ ಹೆಚ್ ಎಸ್ ಆರ್ ಲೇಔಟ್ ನ ನವೀನ್ ರಾಜ್ (26) ಎಂದು ಗುರುತಿಸಲಾಗಿದೆ.
ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಬಂಧಿತ ಡ್ರಗ್ ಫೆಡ್ಲರ್ ಗಳಿಂದ 2 ಲಕ್ಷ ನಗದು ಹಾಗೂ 2.50 ಕೋಟಿ ಮೌಲ್ಯದ 1 ಕೆ.ಜಿ 70 ಗ್ರಾಂ ಎಂಡಿಎಂಎ ಕ್ರಿಸ್ಟೆಲ್, 60 ಎಕ್ಸ್ ಟೆಸಿ ಪಿಲ್ಸ್ ಗಳು, 100 ಎಲ್ಎಸ್ ಡಿ ಸ್ಟ್ರಿಪ್ಸ್ ಗಳು. 5 ಗ್ರಾಂ ಕೊಕೇನ್, 2 ಮೊಬೈಲ್ ಫೋನ್, 1 ಲ್ಯಾಪ್ಟಾಪ್, ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಬಂಧಿತ ವಿದೇಶಿ ವ್ಯಕ್ತಿಯು ಕಳೆದ ವರ್ಷ ಬಿಸಿನೆಸ್ ವೀಸಾದಡಿ ಭಾರತಕ್ಕೆ ಬಂದು. ದೆಹಲಿ ಮತ್ತು ಮುಂಬೈನಲ್ಲಿ ವಾಸವಿದ್ದ ಈತ ವಿದೇಶಿ ಪ್ರಜೆಗಳಿಂದ ಕಡಿಮೆ ಬೆಲೆಗೆ ಎಂಡಿಎಂಎ ಖರೀದಿಸಿ, ನೂತನ ವರ್ಷಾಚರಣೆಯ ಸಂದರ್ಭದಲ್ಲಿ ಆತನ ಪರಿಚಯಸ್ಥ ಗಿರಾಕಿಗಳಿಗೆ ಸರಬರಾಜು ಮಾಡಲು ತಯಾರಿ ನಡೆಸಿದ್ದ ಎಂದು ತಿಳಿಸಿದರು.
ಬಂಡೇಪಾಳ್ಯದಲ್ಲಿ ತಮಿಳುನಾಡು ಮೂಲದ ನವೀನ್ ರಾಜ್ ನನ್ನು ಬಂಧಿಸಿ ಆತನಿಂದ 25 ಲಕ್ಷ ಮೌಲ್ಯದ 100 ಎಲ್.ಎಸ್.ಡಿ ಸ್ಟ್ರಿಪ್‌ಗಳು, 5 ಗ್ರಾಂ ಕೊಕೇನ್ ಹಾಗೂ ಕೃತ್ಯಕ್ಕೆ ಬಳಸಲಾಗುತ್ತಿದ್ದ 1 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಅಮೆಜಾನ್ ಕಂಪನಿಯಲ್ಲಿ ಡೆಲಿವರಿ ಬಾಯ್ ಕೆಲಸ ಮಾಡಿಕೊಂಡಿದ್ದಾನೆ. ಈತ ಅಪರಿಚಿತ ವ್ಯಕ್ತಿಗಳಿಂದ ಕಡಿಮೆ ಬೆಲೆಗೆ ಎಲ್ ಎಸ್ ಡಿ ಸ್ಟ್ರಿಪ್ ಗಗಳು ಹಾಗೂ ಕೊಕೇನ್ ಖರೀದಿಸಿ, ಪರಿಚಯಸ್ಥ ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂದು ಹೇಳಿದರು.




