ರಾಜ್ಯದಲ್ಲಿ 100 ರಾಮಮಂದಿರಗಳನ್ನು ಪುನರ್ ನಿರ್ಮಾಣ ಮಾಡಲಾಗುವುದು: ರಾಮಲಿಂಗಾರೆಡ್ಡಿ

2 years ago

ಬೆಂಗಳೂರು: ಬಿಜೆಪಿ ಮತ್ತು ಸಂಘ ಪರಿವಾರ ಒಂದು ರಾಮ ಮಂದಿರ ನಿರ್ಮಾಣ ಮಾಡಿ ದೊಡ್ಡ ಸುದ್ದಿ ಮಾಡುತ್ತಿದೆ. ಆದರೆ ರಾಜ್ಯ ಸರ್ಕಾರ ರಾಜ್ಯದಲ್ಲಿನ 100 ರಾಮಮಂದಿರಗಳನ್ನು ಪುನರ್ ನಿರ್ಮಾಣ ಮಾಡಲು ತೀರ್ಮಾನಿಸಿದೆ. ಇದಕ್ಕಾಗಿ ಬಜೆಟ್ ನಲ್ಲಿ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಕೋರಿಕೆ ಸಲ್ಲಿಸಲಾಗಿದೆ ಎಂದರು.

ಸುದ್ದಿಗಾರರೊಂದಿಗೆ ಮಾತಾಡಿದ ಅವರು, ರಾಜ್ಯದಲ್ಲಿ ರಾಮಮಂದಿರ, ಹನುಮಮಂದಿರ, ದುರ್ಗಾ ದೇವಸ್ಥಾನಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಬಜೆಟ್ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಬಿಜೆಪಿಯ ರಾಜಕಾರಣಕ್ಕೆ ತಿರುಗೇಟು ಎಂದು ಭಾವಿಸುವ ಅಗತ್ಯವಿಲ್ಲ. ಆಯಾ ಇಲಾಖೆಗಳು ತಮ್ಮ ಪಾಲಿನ ಜವಾಬ್ದಾರಿಯನ್ನು ಪ್ರತಿ ವರ್ಷವೂ ನಿಭಾಯಿಸುತ್ತವೆ ಎಂದರು.

ರಾಮಮಂದಿರ ಹಾಗೂ ರಾಮನ ಭಕ್ತಿ ಬಿಜೆಪಿಗೆ ಹೊಸದು ಎನ್ನಿಸುತ್ತದೆ. ಆದರೆ ದೇಶದ ಜನರಿಗೆ ಇದು ಹಳೆಯದು. ಅದರಲ್ಲೂ ಕಾಂಗ್ರೆಸ್ ಪಕ್ಷದಿಂದ ಪ್ರಧಾನಿಯಾಗಿದ್ದ ರಾಜೀವ್ಗಾಂಧಿಯವರು 1980ರಲ್ಲಿ ರಾಮಮಂದಿರದ ಬಾಗಿಲು ತೆರೆದು ಪೂಜೆಗೆ ಅವಕಾಶ ಮಾಡಿಕೊಟ್ಟರು. ಆದರೆ ಬಿಜೆಪಿಯವರು ಇದನ್ನು ರಾಜಕೀಯವಾಗಿ ಬಳಸಿಕೊಂಡು ಮತ ಪಡೆಯಲು ಹುನ್ನಾರ ನಡೆಸಿದರು. ಆದರೆ ನಾವು ಧರ್ಮವನ್ನು ರಾಜಕೀಯಕ್ಕೆ ಬಳಸುವುದಿಲ್ಲ. ರಾಮನವಮಿಯಲ್ಲಿ ಮಜ್ಜಿಗೆ, ಪಾನಕ ಹಂಚಿ ನಮ್ಮ ಆಚರಣೆಗಳನ್ನು ನಾವು ಮಾಡಿಕೊಳ್ಳುತ್ತೇವೆ ಎಂದರು.

Leave a Reply