ಮಾತು ಮರೆತವರಿಗೆ 10 ವರ್ಷ, ಮಾತು ಉಳಿಸಿಕೊಂಡವರಿಗೆ ವರ್ಷದ ಸಂಭ್ರಮ

2 years ago

ಕಳೆದ ಹತ್ತು ವರ್ಷದಿಂದ ಕೊಟ್ಟಂತಹ ಎಲ್ಲ ಭರವಸೆಗಳನ್ನು ಮರೆತು ಯಾವುದೇ ರೀತಿಯಲ್ಲೂ ತಮ್ಮ ಮಾತುಗಳನ್ನು ಉಳಿಸಿಕೊಳ್ಳದೆ ಮತ್ತೆ ಮತ್ತೆ ಹೊಸ ಹೊಸ ಸುಳ್ಳುಗಳನ್ನು ಹೇಳುತ್ತಾ ಧಾರ್ಮಿಕತೆಯ ಹಿನ್ನೆಲೆಯಲ್ಲಿ ಜನರನ್ನ ಪ್ರಚೋದಿಸುತ್ತ ಚುನಾವಣೆಯ ಅಸ್ತ್ರವನ್ನಾಗಿ ಬಳಸಿಕೊಂಡಿರುವ ಬಿಜೆಪಿಯ ಕೇಂದ್ರ ಸರಕಾರದ ಆಡಳಿತ ಮತ್ತು ಕಳೆದ ಒಂದು ವರ್ಷದ ಹಿಂದೆ ಚುನಾವಣಾ ಪೂರ್ವದಲ್ಲಿ ತಾವು ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿದಂತಹ ಕೊಟ್ಟ ಮಾತನ್ನು ಉಳಿಸಿಕೊಂಡಂತಹ ಕಾಂಗ್ರೆಸ್ ಸರ್ಕಾರದ ಚಿತ್ರಣವು ಜನರ ಮುಂದಿದೆ

ಭಾರತ ದೇಶದಲ್ಲಿ ಯಾವುದೇ ಒಂದು ರಾಜ್ಯ ಸರ್ಕಾರ ಚುನಾವಣೆಯಲ್ಲಿ ತಾನು ಘೋಷಿಸಿದ ಎಲ್ಲಾ ಭರವಸೆಗಳನ್ನು ಕೇವಲ ಆರು ತಿಂಗಳ ಅವಧಿಯಲ್ಲಿ ಈಡೇರಿಸಿದಂತಹ ಉದಾಹರಣೆ ಇಲ್ಲವೇ ಇಲ್ಲ ಅದರಲ್ಲೂ 52 ಸಾವಿರ ಕೋಟಿ ರೂಪಾಯಿಗಳ ಜನಪರ ವಾದಂತಹ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು ಸಾಹಸದ ಕೆಲಸವೇ ಸರಿ

ಹೊಟ್ಟೆ ತುಂಬಿದ ಜನ ಹಸಿವು ಅರಿವಿಲ್ಲದ ಜನ ಕಷ್ಟಗಳ ಪರಿಚಯವಿಲ್ಲದ ಜನ ಶ್ರಮದ ಬದುಕು ಎಂದು ಮಾಡದ ಜನ ಎಲ್ಲ ಸೌಕರ್ಯ ಸೌಲಭ್ಯಗಳನ್ನು ಅನೇಕ ಕಾರಣಗಳಿಂದ ಪಡೆದುಕೊಂಡಿರುವ ಜನ ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಬಗ್ಗೆ ಸದಾ ಕಾಲ ಕುಚೇಷ್ಟೆಯ ಮಾತುಗಳನ್ನು ಆಡುತ್ತಲೇ ಇರುತ್ತಾರೆ ಆದರೆ ಅವರಿಗೆ ಪ್ರತಿ ವರ್ಷ ಪೌಷ್ಟಿಕಾಂಶದ ಕೊರತೆಯಿಂದ ಒಂದು ವರ್ಷವನ್ನು ಪೂರೈಸದೆ ಸಾವಿನ ಮನೆಯನ್ನು ಸೇರುವ ಮಕ್ಕಳ ಸಂಖ್ಯೆಗಳ ಪರಿಚಯವಿಲ್ಲ ಪೌಷ್ಟಿಕಾಂಶದ ಕೊರತೆಯಿಂದ ತಮ್ಮ ಕರುಳಿನ ಕುಡಿಗಳನ್ನ ಕಳೆದುಕೊಳ್ಳುತ್ತಿರುವ ಜೊತೆಗೆ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿರುವ ಲಕ್ಷಾಂತರ ಮಹಿಳೆಯರ ಬದುಕಿನ ಪರಿಚಯವೂ ಇಲ್ಲ

ಕೆಲವೇ ಕೆಲವು ಸಾವಿರ ರೂಪಾಯಿಗಳ ಸಂಬಳದ ದುಡಿಮೆಯನ್ನು ಮಾಡುತ್ತ ಪ್ರತಿ ತಿಂಗಳು ತಮ್ಮ ದುಡಿಯುವ ಸ್ಥಳಕ್ಕೆ ಹೋಗುವ ಬರುವ ಸಲುವಾಗಿ ಸಾವಿರಾರುಪಾಯಿಗಳನ್ನ ಬಸ್ ಚಾರ್ಜ್ಗಳಿಗಾಗಿ ಕೊಡುತ್ತಿದ್ದ ದುಡಿಯುವ ಮಹಿಳೆಯರಿಗೆ ಶಕ್ತಿ ಯೋಜನೆಯ ಅಡಿಯಲ್ಲಿ ಆಗುತ್ತಿರುವ ಅನುಕೂಲತೆಯ ಬಗ್ಗೆ ಇವರುಗಳಿಗೆ ಮಾಹಿತಿಗೆ ಇರುವುದಿಲ್ಲ

ವಿದ್ಯುತ್ ಬಿಲ್ ಪಾವತಿಸದೆ ಇಲಾಖೆಯವರು ಮನೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದಾಗ ಅವಮಾನಗೊಂಡ ಸಾವಿರಾರು ಮಂದಿಯ ಮುಖದಲ್ಲಿ ಇಂದು ಆತಂಕವಿಲ್ಲ ಗೃಹಜ್ಯೋತಿ ಯೋಜನೆ ಅಡಿಯಲ್ಲಿ 200 ಯೂನಿಟ್ ತನಕ ವಿದ್ಯುತ್ ಉಚಿತವಾಗಿ ಲಭ್ಯವಾಗುತ್ತಿರುವ ಕಾರಣದಿಂದ ಇವರುಗಳು ನೆಮ್ಮದಿಯಿಂದ ಇದ್ದಾರೆ

ತಮ್ಮ ಮಕ್ಕಳ ಪಠ್ಯಪುಸ್ತಕಗಳಿಗೆ ತಮ್ಮ ಮನೆಯ ಹಿರಿಯರ ಔಷಧಿಗಳಿಗೆ ಕೈಯಲ್ಲಿ ಕಾಸಿಲ್ಲದೆ ಪರಿತಪಿಸುತ್ತಿದ್ದ ಬಡ ಜನರು ಇಂದು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ಮನೆಯ ಯಜಮಾನಿ ಎರಡು ಸಾವಿರ ರೂಪಾಯಿಗಳನ್ನು ಪ್ರತಿ ತಿಂಗಳು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಸಮಸ್ಯೆಗಳಿಂದ ಹೊರಬಂದಿದ್ದಾರೆ ಆರ್ಥಿಕವಾಗಿ ಚೇತರಿಸಿಕೊಂಡಿದ್ದಾರೆ ಇಂತಹ ಕಷ್ಟ ಪಡುವ ಜನರ ಮನೆಯ ಪರಿಸ್ಥಿತಿ ಟೀಕಿಸುವವರಿಗೆ ಹೇಗೆ ತಾನೇ ಅರ್ಥವಾದೀತು

ಅನ್ನಭಾಗ್ಯ ಯೋಜನೆಯಡಿಯಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ 2013ರಲ್ಲಿ ಘೋಷಿಸಿದಂತಹ ಉಚಿತ ಅಕ್ಕಿ ನೀಡುವ ಕಾರ್ಯಕ್ರಮದಿಂದ ಲಕ್ಷಾಂತರ ಮನೆಯ ಮಂದಿ ಪ್ರತಿದಿನವೂ ಅನ್ನವನ್ನು ತಿನ್ನುವಂತಹ ಸ್ಥಿತಿಗೆ ಬಂದು ತಲುಪಿದ್ದಾರೆ ದುಡ್ಡು ಕೊಡುತ್ತೇವೆ ಎಂದರು ಕೇಂದ್ರದ ಸರ್ಕಾರ ಅಕ್ಕಿಕೊಡದೆ ತೊಂದರೆ ಕೊಟ್ಟಿದೆ ಆದರೆ ಅಕ್ಕಿಯ ಬದಲಿಗೆ ಪ್ರತಿಯೊಬ್ಬ ಯುನಿಟ್ ಸದಸ್ಯರಿಗೆ 5 ಕೆಜಿ ಅಕ್ಕಿಯ ಮೌಲ್ಯವಾದ 170ಗಳನ್ನ ಪ್ರತಿ ತಿಂಗಳು ಕೊಡುವುದರ ಮೂಲಕ ಕೇಂದ್ರದ ಕುತಂತ್ರದ ನಡವಳಿಕೆಗೆ ಸೆಡ್ಡು ಹೊಡೆದಿದೆ ಕಾಂಗ್ರೆಸ್ ಸರ್ಕಾರ

ಉದ್ಯೋಗವನ್ನು ಕೊಡದ ಕೇಂದ್ರ ಸರ್ಕಾರ ನಿರುದ್ಯೋಗಿಗಳಿಗೆ ಒಂದಷ್ಟು ನೆರವನ್ನ ನೀಡುವ ಯುವನಿಧಿ ಯೋಜನೆಯನ್ನು ಜಾರಿಗೆ ತಂದಿರುವ ಕಾಂಗ್ರೆಸ್ ಸರ್ಕಾರ

ಘೋಷಣೆಗಳು ಹೊಟ್ಟೆ ತುಂಬಿಸುವುದಿಲ್ಲ ಮಾತುಗಳು ಬದುಕು ಕಟ್ಟಿಕೊಡುವುದಿಲ್ಲ ಭಾವನಾತ್ಮಕ ವಿಚಾರಗಳು ನೊಂದವರ ಬದುಕಿಗೆ ಭರವಸೆಯನ್ನು ನೀಡುವುದಿಲ್ಲ

ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟತೆ ಇದೆ ಹಸಿದವರಿಗೆ ಅನ್ನಬೇಕು ನೊಂದವರಿಗೆ ನೆರವು ಬೇಕು. ದುಡಿಯುವ ಕೈಗಳಿಗೆ ಉದ್ಯೋಗ ಬೇಕು ಬಡವರು ಬದುಕು ಸಾಗಿಸಲು ಒಂದಷ್ಟು ಆರ್ಥಿಕ ನೆರವು ಬೇಕು ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕು ಸರ್ಕಾರಿ ಆಸ್ಪತ್ರೆಗಳಲ್ಲಿ ಜನರಿಗೆ ಗುಣಮಟ್ಟದ ಆರೋಗ್ಯ ಚಿಕಿತ್ಸೆ ಸಿಗಬೇಕು ಸಮಾಜದಲ್ಲಿ ಎಲ್ಲರೂ ಸಮಾನತೆಯಿಂದ ಮತ್ತು ಸಮಾಧಾನದಿಂದ ಸಾಮರ್ಥ್ಯದಿಂದ ಬದುಕುವುದು ಮಾತ್ರವೇ ಅಭಿವೃದ್ಧಿಯ ಮಾನದಂಡವೆಂಬ ಸತ್ಯದ ಅರಿವಿದೆ ಈ ದಾರಿಯಲ್ಲಿ ಈಗಾಗಲೇ ಒಂದು ವರ್ಷ ಸಾಗಿದೆ ಮುಂದಿನ ನಾಲ್ಕು ವರ್ಷವೂ ಮತ್ತಷ್ಟು ಯೋಜನೆಗಳೊಂದಿಗೆ ಜನರ ಬದುಕು, ಹಸನಾಗಲಿ ನೋವಿಲ್ಲದ ಹಿಂಸೆ ಇಲ್ಲದ ಕೇಡಿಲ್ಲದ ಅಸಮಾನತೆಯಿಲ್ಲದ ಹಸಿವು ಮುಕ್ತ ಕರ್ನಾಟಕ ನಿರ್ಮಾಣವಾಗಿ ಟೀಕಿಸುವವರಿಗೆ ಬಾಯಿ ಮುಚ್ಚಿಸುವಂತೆ ಆಡಳಿತ ಮುನ್ನುಗ್ಗಲಿ

ಕೊಟ್ಟ ಮಾತನ್ನು ಉಳಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸರ್ಕಾರದ ಸ್ಥಾಪನೆಗೆ ಕಾಲಿಗೆ ಚಕ್ರ ಕಟ್ಟಿಕೊಂಡು ಸಂಘಟನೆಯ ಹಾದಿಯಲ್ಲಿ ಸಾಗಿದ ಡಿಸಿಎಂ ಶ್ರೀ ಡಿಕೆ ಶಿವಕುಮಾರ್ ರವರಿಗೆ ಮತ್ತು ಸರ್ಕಾರದ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಜವಾಬ್ದಾರಿಯನ್ನ ನಿರ್ವಹಿಸುತ್ತಿರುವ ಸಚಿವರುಗಳಿಗೆ ಅಭಿನಂದನೆಗಳು

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply