ನಿಯಮಬದ್ದವಾಗಿ, ವ್ಯವಸ್ಥಿತವಾಗಿ ಕೆಲಸಗಳು ನಡೆಯಬೇಕು: ದಿನೇಶ್ ಗುಂಡೂರಾವ್

9 months ago

ಸಾರ್ವಜನಿಕರಿಗೆ ತೊಂದರೆಯಾಗದಂತೆ, ನಿಯಮಬದ್ದವಾಗಿ, ವ್ಯವಸ್ಥಿತವಾಗಿ ಕೆಲಸಗಳು ನಡೆಯಬೇಕು: ದಿನೇಶ್ ಗುಂಡೂರಾವ್

ನಮ್ಮ ಗಾಂಧಿನಗರ ಎಂಬ ಅಭಿಮಾನ ಬೆಳೆಸಿಕೊಳ್ಳಿ

ಸುಂದರ ಗಾಂಧಿನಗರಕ್ಕೆ ಕೈಜೋಡಿಸೋಣ

ಬೆಂಗಳೂರು: ಗುಬ್ಬಿ ವೀರಣ್ಣ ರಂಗಮಂದಿರ ಮುಂಭಾಗದಲ್ಲಿ ಸ್ಥಳೀಯ ಶಾಸಕರು, ಕುಟುಂಬ ಮತ್ತು ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ರವರ ನೇತೃತ್ವದಲ್ಲಿ ಬೃಹತ್ ಜನಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಯಿತು.

ಸಚಿವ ದಿನೇಶ್ ಗುಂಡೂರಾವ್, ಪಶ್ಚಿಮ ವಲಯ ಜಂಟಿ ಆಯುಕ್ತ ಸಂಗಪ್ಪ, ಆರೋಗ್ಯಧಿಕಾರಿ ಮನೋರಂಜನ್ ಹೆಗಡೆ, ಬಿಬಿಎಂಪಿ ಅಧಿಕಾರಿಗಳಾದ ಸೋಮಶೇಖರ್, ಶಾಂತಲ, ಸರ್ಣ, ಪೊಲೀಸ್ ಅಧಿಕಾರಿಗಳಾದ ಪುಟ್ಟಮ್ಮ, ಪರಪ್ಪರೆಡ್ಡಿ, ಮಾರುತಿ, ತಬರೇಜ್, ಕೃಷ್ಣಮೂರ್ತಿ,   ಅಧಿಕಾರಿಗಳಾದ ಮಧುಸೂಧನ್, ಶ್ರೀನಿವಾಸ್, ಸೋಮಶೇಖರ್, ಜಲಮಂಡಳಿ ಅಧಿಕಾರಿ ಚನ್ನಪ್ಪರವರು, ಹೆಲ್ತ್ ಸೂಪರ್ ವೈಸರ್ ಸಂತೋಷ್ ಕುಮಾರ್ ನಾಯಕ್, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಉಮೇಶ್ ಬಾಬು, ಮಾಜಿ ಪಾಲಿಕೆ ಸದಸ್ಯ ನವೀನ್ ಕುಮಾರ್ ಬಲೂನ್ ಗಳನ್ನು ಹಾರಿಬಿಡುವ ಮೂಲಕ ಜನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಸಾರ್ವಜನಿಕರು ಎಲ್ಲ ಇಲಾಖೆ ಅಧಿಕಾರಿಗಳ ಜೊತೆಯಲ್ಲಿ ಮುಕ್ತ ಚರ್ಚೆ ಮಾಡಿ ಸಮಸ್ಯೆ ನಿವಾರಣೆಗಾಗಿ ಜನಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ. ಗಾಂಧಿನಗರ ಪ್ರದೇಶ ಕರ್ನಾಟಕದ ಹೃದಯಭಾಗವಾಗಿದೆ. ಇಲ್ಲಿ ಲಕ್ಷಾಂತರ ಜನರು ಬರುತ್ತಾರೆ. ಗಾಂಧಿನಗರ ಪ್ರದೇಶ ನೋಡಿ ಸಂತೋಷವಾಗಬೇಕು ಜನರಿಗೆ
ಸಚಿವನಾಗಿ ನಾನು ಮತ್ತು ಅಧಿಕಾರಿ ಜೊತೆಯಲ್ಲಿ ಸಮನ್ವಯ ಮೂಲಕ ಸಮಸ್ಯೆ ನಿವಾರಣೆ ಮಾಡಲಾಗುವುದು ಎಂದರು.

ಜನರಿಗೆ ಜವಾಬ್ಬಾರಿ ಇರಬೇಕು. ಎಲ್ಲವು ಸರ್ಕಾರ, ಬಿಬಿಎಂಪಿ ಮಾಡುತ್ತದೆ ಎಂದು ಕೈಚೆಲ್ಲಿ ಕೂರಬಾರದು. ಸರ್ಕಾರದ ಜೊತೆಯಲ್ಲಿ ಸಹಕಾರವಾಗಿ ಜನ ನಿಂತಾಗ ಅಭಿವೃದ್ದಿ ಸಾಧ್ಯ.
ಸಾರ್ವಜನಿಕರು ಹಸಿಕಸ, ಒಣಕಸ ವಿಂಗಡನೆ ಮಾಡಬೇಕು, ಎರಡು ಕಸ ಮರುಬಳಕೆ, ಗೊಬ್ಬರ ತಯಾರಿಕೆಯಾಗಿ ಅನುಕೂಲವಾಗುತ್ತದೆ. ಎಲ್ಲೆಂದರಲ್ಲಿ ಕಸ ಬಿಸಾಡಬೇಡಿ. ಸ್ವಚ್ಚತೆ ಕಾಪಾಡಬೇಕು ಎಂದು ಮನವಿ ಮಾಡಿದರು.

ನಮ್ಮ ಬದುಕು, ಉದ್ಯೋಗ ವ್ಯಾಪಾರ ಮಾಡುವ ಸ್ಥಳ ಸ್ವಚ್ಚತೆಯನ್ನ ನಾವು ಕಾಪಾಡಿಕೊಳ್ಳಬೇಕು. ಜನರಿಗೆ ಒಳ್ಳೆಯದಾಗಲಿ ಎಂದು ಅಭಿವೃದ್ದಿ ಕೆಲಸ ಮಾಡಿದ್ದೇವೆ. ಬೀದಿ ಬದಿಯ ವ್ಯಾಪಾರಿಗಳು ಪಾದಚಾರಿಗಳಿಗೆ ಅನುಕೂಲ ಮಾಡಿಕೊಟ್ಟು ವ್ಯಾಪಾರ ಮಾಡಿ,  ಸಾರ್ವಜನಿಕರು ತೊಂದರೆಯಾಗದಂತೆ ವ್ಯಾಪಾರ ಮಾಡಿ. ಟ್ರಾವಲ್ಸ್ ನವರು ಮೆಜೆಸ್ಟಿಕ್ ಪ್ರದೇಶದಲ್ಲಿ ಎಲ್ಲ ಕಡೆ ಪಾರ್ಕಿಂಗ್ ಮಾಡುತ್ತಿದ್ದಾರೆ. ಇದು ತಪ್ಪು, ಹೊರಡುವ ಸಮಯಕ್ಕೆ ಬಂದು ಪ್ರಯಾಣಿಕರನ್ನ ಪಿಕ್ ಅಪ್ ಮಾಡಬೇಕು. ಪೊಲೀಸ್ ಇಲಾಖೆಯವರು ಅನಧಿಕೃತ ಬಸ್ ನಿಲ್ಲಿಸುವವರಮೇಲೆ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದರು. 

ಗಾಂಧಿನಗರ ವಿಧಾನಸಭಾ ಕ್ಷೇತ್ರಕ್ಕೆ ಕಾರ್ಯಯೋಜನೆ ರೂಪಿಸಬೇಕು ಬಸ್ ಪಾರ್ಕಿಂಗ್ ಮತ್ತು ಬೀದಿ ಬದಿಯ ವ್ಯಾಪಾರಿಗಳ ಕುರಿತು ಸಮರ್ಪಕ ಯೋಜನೆ ರೂಪಿಸಿ ನಿಯಂತ್ರಣಕ್ಕೆ ತರಬೇಕು. ಕಾನೂನು ಸುವ್ಯವಸ್ಥೆ ಸಮರ್ಪಕವಾಗಿ ನಡೆಯಬೇಕು, ಅಹಿತಕಾರಿ ಘಟನೆಗಳು ಅಗದಂತೆ ತಡೆಯಬೇಕು. ಹೋಟೆಲ್ ಮಾಲೀಕರು ಒಳಚರಂಡಿ ಕಸಗಳನ್ನು ಹಾಕಬಾರದು. ಸಾರ್ವಜನಿಕರಿಗೆ ತೊಂದರೆಯಾಗದಂತೆ, ನಿಯಮಬದ್ದವಾಗಿ, ವ್ಯವಸ್ಥಿತವಾಗಿ ಕೆಲಸ ಕಾರ್ಯಗಳು ನಡೆಯಬೇಕು. ಇದಕ್ಕೆ ನನ್ನ ಸಹಕಾರ ಇರುತ್ತದೆ ಎಂದರು.

ಸಾವಿರಾರು ಜನರು ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎನ್.ವಿ.ರಾವ್ ಸ್ವಾಗತ ಕೋರಿದರು. ಹೋಮ್ ಸೈನ್ಸ್ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಪೌರ ಕಾರ್ಮಿಕರು ಹಾಜರಿದ್ದರು.

Leave a Reply