ಹುಬ್ಬಳ್ಳಿ: ಹುಬ್ಬಳ್ಳಿ – ಧಾರವಾಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ ಗೌರಿ ಅಧ್ಯಕ್ಷತೆಯಲ್ಲಿ ಹಾಗೂ ಉಣಕಲ್ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ವಾಲಿಕಾರ ನೇತೃತ್ವದಲ್ಲಿ, ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಧಾರಾಕಾರವಾಗಿ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಮಹಿಳಾ ಕಾರ್ಯಕರ್ತೆಯರು ಒಲೆ ಹಚ್ಚಿ ಚಹಾ ಮಾಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತಾಡಿದ ದೀಪಾ ಗೌರಿ, ದಿನನಿತ್ಯ ಬೆಲೆ ಏರಿಕೆಯಿಂದ ಜನರು ಪರದಾಡುತ್ತಿದ್ದಾರೆ. ಇದರ ನಡುವೆ ಹಲವು ಬಾರಿ ಪೆಟ್ರೋಲ್-ಡೀಸೆಲ್ ಬೆಲೆ, ಅಡುಗೆ ಅನಿಲ, ಅಡುಗೆ ಎಣ್ಣೆ, ಹಾಲು, ತುಪ್ಪ ಬೇಳೆ ಹೀಗೆ ದಿನನಿತ್ಯ ಬಳಸುವ ಸಾಮಗ್ರಿಗಳ ಬೆಲೆ ಏರಿಕೆಯಿಂದ ಜನರು ತತ್ತರಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಬೆಲೆ ಏರಿಕೆ ಹಿಂಪಡೆಯಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ನಂತರ ಬ್ಲಾಕ್ ಅಧ್ಯಕ್ಷರಾದ ಜ್ಯೋತಿ ವಾಲಿಕಾರ ಹಾಗೂ ಚೇತನಾ ಲಿಂಗದಾಳ್ ಮಾತನಾಡಿ, ಬೆಲೆ ಏರಿಕೆ ಕ್ರಮ ಖಂಡಿಸಿದರಲ್ಲದೆ, ಬೆಲೆ ಏರಿಕೆ ಹಿಂಪಡೆಯದ್ದಿದರೆ, ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಸರ್ಕಾರಗಳಿಗೆ ಎಚ್ಚರಿಕೆ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ಸುಜನ್ ಕಾಕಿ, ಬಾಳಮ್ಮ ಜಂಗಿನವರ್, ಲಕ್ಷ್ಮಿ ಗುತ್ತೆ, ಅಕ್ಕಮ್ಮ ಕಂಬಳಿ ಹಾಗೂ ವಾರ್ಡ್ ಅಧ್ಯಕ್ಷರಾದ ಶಶಿಕಲಾ ಹಾಳ್ಯಾಳ್, ಸುಧಾ ಕಮದೊಡ್ಡ, ಕಲಾವತಿ ಧಟ್ಟವಡಿ, ಸುಮಾ ಮಾಳಗಿ, ಬಿಬಿಜಾನ್ ನದಾಫ್, ದೀಪಾ. ವಿ ಬಿ, ಲಲಿತಾ, ಮನೀಲಾ ಇತರರು ಭಾಗವಹಿಸಿದ್ದರು.




