ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಕೋರ್ಟ್ ಗೆ ಯಾಕೆ ಹೋಗುವುದಿಲ್ಲ?

3 years ago

ವಾಟ್ಸಾಪ್ ಯುನಿವರ್ಸಿಟಿಯ ಅಂಧಭಕ್ತರಿಗೆ ಕೊಟ್ಟ ಸಣ್ಣ ಡೋಸ್…

ಬಿಜೆಪಿ ವಿರುದ್ಧ ಕಾಂಗ್ರೆಸ್ ಪರವಾಗಿ ಏನಾದರೂ ಬರೆದರೆ ಕೆಲವರಿಗೆ ಸಿಟ್ಟು ಬರುತ್ತದೆ. ಕಾಂಗ್ರೆಸ್ ದೇಶವನ್ನು ಲೂಟಿ ಮಾಡಿತು, ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಬೊಬ್ಬೆ ಹಾಕುತ್ತಾರೆ. ಎಪ್ಪತ್ತು ವರ್ಷಗಳಿಂದ ಈ ನಾಯಕರು ಮತ್ತು ಅವರ ಹಿಂಬಾಲಕರು ಕಾಂಗ್ರೆಸ್ ಲೂಟಿ ಮಾಡಿದೆ ಎಂದು ಲೀಸ್ಟ್ ಹಿಡಿದುಕೊಂಡು ತಿರುಗುತ್ತಾರೆ. ಅದನ್ನೇ ಬೆಂಬಲಿಗರು ಹೇಳುತ್ತಾರೆ. ಆದರೆ ಈ ಅಂಧಭಕ್ತರ ಮೆದುಳು ಇರಬೇಕಾದ ಜಾಗದಲ್ಲಿ ಇದ್ದಿದ್ದರೆ ಇವರುಗಳು ತಮಗೆ ತಾವೇ ಒಂದು ಪ್ರಶ್ನೆ ಕೇಳಿಕೊಳ್ಳಬೇಕು. ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಕೋರ್ಟ್ ಗೆ ಯಾಕೆ ಹೋಗುವುದಿಲ್ಲ?

ಈಗ ಬಿಜೆಪಿಯ ಸಂಪೂರ್ಣ ಬಹುಮತ ಪಡೆದ ಸರ್ಕಾರ ಇದೆ. ರಾಜಕೀಯ ಭ್ರಷ್ಟಾಚಾರ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಿ ಭ್ರಷ್ಟಾಚಾರ ಮಾಡಿದವರಿಗೆ ಶಿಕ್ಷೆ ವಿಧಿಸಲು ಮೋದಿ ವಿಶೇಷ ನ್ಯಾಯಾಲಯ ಯಾಕೆ ಸ್ಥಾಪನೆ ಮಾಡುವುದಿಲ್ಲ?

ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಬಿಜೆಪಿ ತನ್ನ ಪಕ್ಷದ ಪ್ರಚಾರಕ್ಕಾಗಿ ಕೋಟಿ ಕೋಟಿ ಹಣ ನೀರಿನಂತೆ ಖರ್ಚು ಮಾಡುತ್ತದೆ. ಆ ಹಣದ ಮೂಲ ಯಾವುದು? ಪ್ರಾಮಾಣಿಕ ಮೋದಿ ಬಿಜೆಪಿ ಇದನ್ನು ಯಾಕೆ ಬಹಿರಂಗಪಡಿಸುವುದಿಲ್ಲ?
ಅದಾನಿ ಪ್ರಧಾನಿ ಸಂಬಂಧದ ಬಗ್ಗೆ ಇಡೀ ವಿಶ್ವವೇ ಪ್ರಶ್ನೆ ಮಾಡುತ್ತಿದೆ. ಒಂಬತ್ತು ವರ್ಷಗಳ ಹಿಂದೆ 600 ನಂಬರ್ ನಲ್ಲಿ ಇದ್ದ ಅದಾನಿ ರಾತ್ರಿ ಬೆಳಗಾಗುವುದರೊಳಗೆ ನಂಬರ್ ಟೂ ಆಗಿದ್ದು ಹೇಗೆ?

ಷೇರು ಹೂಡಿಕೆದಾರರ ಕೊಟ್ಯಾಂತರ ರೂಪಾಯಿ ಅದಾನಿಯಿಂದಾಗಿ ಮುಳುಗಿದೆ. ಆದರೂ ಸರ್ಕಾರದ ಅಧೀನದಲ್ಲಿರುವ ಎಲ್ ಐಸಿ, ಎಸ್ ಬಿಐ, ಇನ್ನೂ ಕೆಲವು ಸರಕಾರಿ ಸಂಸ್ಥೆಗಳ ಹಣವನ್ನು ಮೋದಿ ಸರ್ಕಾರ ಅದಾನಿ ಕಂಪನಿಯಲ್ಲಿ ಹೂಡಿಕೆ ಮಾಡುವಂತೆ ಒತ್ತಾಯ ಮಾಡುತ್ತಿದೆ.
ನಾಳೆ ಅದಾನಿ ಕಂಪನಿ ಸಂಪೂರ್ಣ ಮುಳುಗಿದರೆ ನಮ್ಮ ಎಲ್ ಐಸಿ ಹಣ ಕೂಡ ಮುಳುಗಿದಂತೆ. ಈ ಬಗ್ಗೆ ಪ್ರಧಾನಿ ಮೋದಿ ಯಾಕೆ ಮೌನ?

ಕಾಂಗ್ರೆಸ್ ಹಿಂದೂ ವಿರೋಧಿ ಆಗಿದ್ದರೆ ಇವತ್ತು ನಮ್ಮ ದೇಶದಲ್ಲಿ ಸೈನ್ಯ ರಾಜಕೀಯ ಕ್ಷೇತ್ರ ಸಾಮಾಜಿಕ ಕ್ಷೇತ್ರ ಉದ್ಯಮ ಜಗತ್ತಿನಲ್ಲಿ ನಟರು ಬರಹಗಾರರು ಸರ್ಕಾರಿ ನೌಕರರು ಖಾಸಗಿ ವಲಯಗಳಲ್ಲಿ ಎಲ್ಲಾ ಕಡೆ ಮುಂಚೂಣಿಯಲ್ಲಿ ಇರುವವರು ಕೊಟ್ಯಾಂತರ ಹಿಂದೂಗಳು, ಇವರೆಲ್ಲಾ 2014ರ ನಂತರ ಹುಟ್ಟಿದವರೇ ಅಥವಾ 2014ರ ನಂತರ ವಿದೇಶದಿಂದ ಬಂದವರೇ? ಇವರೆಲ್ಲಾ ಕಾಂಗ್ರೆಸ್ ಆಡಳಿತ ಕಾಲದಲ್ಲಿ ಹುಟ್ಟಿ ಬೆಳೆದು ವಿದ್ಯಾಭ್ಯಾಸ ಪಡೆದು ಬದುಕು ಕಟ್ಟಿಕೊಂಡವರು.

ಕಾಂಗ್ರೆಸ್ ಸಾಲ ಮಾಡಿದೆ ಹೌದು ಕಾಂಗ್ರೆಸ್ ಸಾಲ ಮಾಡಿದೆ 65 ವರ್ಷಗಳಲ್ಲಿ ಕಾಂಗ್ರೆಸ್ ಸಹಿತ ವಿವಿಧ ರಾಜಕೀಯ ಪಕ್ಷಗಳ ಸರ್ಕಾರಗಳು ಮಾಡಿದ ಒಟ್ಟು ಸಾಲ 54 ಸಾವಿರ ಕೋಟಿ. ಈಗ ಒಂಬತ್ತು ವರ್ಷಗಳಲ್ಲಿ ಆದ ಸಾಲ 104 ಸಾವಿರ ಕೋಟಿ…!! ಒಟ್ಟು 159 ಸಾವಿರ ಕೋಟಿ..!!

ಇದಲ್ಲದೆ ವಿವಿಧ ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಸಾವಿರಾರು ಕೋಟಿ ರೂಪಾಯಿಗೆ ಸರ್ಕಾರ ಮಾರಾಟ ಮಾಡಿದೆ. ಎಲ್ಲಾ ರೀತಿಯ ಸಬ್ಸಿಡಿ ರದ್ದು ಮಾಡಿ ಕೋಟಿ ಕೋಟಿ ರೂಪಾಯಿ ಬಾಚಿದೆ. ಎಲ್ಲಾ ರೀತಿಯ ತೆರಿಗೆ ನಾಲ್ಕು ಪಟ್ಟು ಹೆಚ್ಚಳ ಆಗಿದೆ. ವಿದ್ಯುತ್ ದರ ಅಡುಗೆ ಅನಿಲ ಪೆಟ್ರೋಲ್ ಡಿಸೆಲ್ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ. ರೈಲ್ವೆ ಪ್ಲಾಟ್ ಫಾರಂ ಟಿಕೆಟ್ ಬೆಲೆ ಹೆಚ್ಚಳ. ಆರ್ ಬಿಐ ನಲ್ಲಿ ಆಪತ್ಕಾಲಕ್ಕೆ ಎಂದು ಇಟ್ಟ ಹಣವನ್ನು ಬಿಡದೇ ಸರ್ಕಾರ ದೋಚಿದೆ. ಪಿಎಂ ಕೇರ್ ಫಂಡ್ ಸ್ಥಾಪನೆ ಮಾಡಿ ಸಾವಿರಾರು ಕೋಟಿ ಹಣ ಒಟ್ಟು ಮಾಡಲಾಯಿತು,
ಒಂಬತ್ತು ವರ್ಷಗಳಲ್ಲಿ ಸಾವಿರಾರು ಕೋಟಿ ಹಣ ಮೋದಿ ಸರ್ಕಾರ ಒಟ್ಟು ಮಾಡಿದೆ ಎಲ್ಲಿ ಹೋಯಿತು ಅ ಹಣ.?
ಯಾವತ್ತಾದರೂ ಯೋಚನೆ ಮಾಡಿದ್ದೀರಾ.?

ಕಾಂಗ್ರೆಸ್ ಆಡಳಿತದ ಆರಂಭದಲ್ಲಿ ನಮ್ಮ ದೇಶದಲ್ಲಿ ದೊಡ್ಡ ಮೊತ್ತದ ತೆರಿಗೆ ಕಟ್ಟುವ ದೊಡ್ಡ ದೊಡ್ಡ ಕಾರ್ಪೋರೇಟ್ ಕಂಪೆನಿಗಳು ಇರಲಿಲ್ಲ‌. ಕೃಷಿ ಪ್ರಧಾನ ಬಡ ದೇಶ ಆಗಿದ್ದ ನಮ್ಮ ದೇಶವನ್ನು ಅಭಿವೃದ್ಧಿ ಮಾಡಲು ಸಾಲದ ಆವಶ್ಯಕತೆ ಇತ್ತು. ಈಗ ಕೋಟಿ ಕೋಟಿ ತೆರಿಗೆ ಕಟ್ಟುವ ಸಾವಿರಾರು ಕಾರ್ಪೋರೇಟ್ ಕಂಪೆನಿಗಳು ನಮ್ಮ ದೇಶದಲ್ಲಿ ಇವೆ. ಆದರೂ ಅಷ್ಟೊಂದು ದೊಡ್ಡ ಮೊತ್ತದ ಸಾಲ ಯಾಕೆ ಮಾಡಿದರು. ಎಲ್ಲಿ ಹೋಯಿತು ಹಣ.

ಕಾಂಗ್ರೆಸ್ ಆಡಳಿತ ಕಾಲದಲ್ಲಿ ರೇಷನ್ ಕಾರ್ಡ್ ಮೂಲಕ ದೇಶಾದ್ಯಂತ ರಿಯಾಯಿತಿ ದರದಲ್ಲಿ ಸಾಮಗ್ರಿ ಕೊಟ್ಟರು. ದೇಶಾದ್ಯಂತ ಶಾಲೆ ಕಾಲೇಜು ಆಸ್ಪತ್ರೆ ವಿದ್ಯುತ್ ಸ್ಥಾವರ ಅಣೆಕಟ್ಟು ರೈಲ್ವೆ ವಿಮಾನಯಾನ ಸಂಸ್ಥೆ ಎಲ್ಲವನ್ನೂ ಮಾಡಿದರು. ಹಲವಾರು ರೀತಿಯ ಸಾಲಮನ್ನಾ ಮಾಡಿದರು
ಬಿಜೆಪಿ ಒಂಬತ್ತು ವರ್ಷಗಳಲ್ಲಿ ಕ್ರೋಢೀಕರಣ ಮಾಡಿದ ಅಷ್ಟೋಂದು ಹಣ ಏನಾಯಿತು? ಒಂಬತ್ತು ವರ್ಷಗಳಲ್ಲಿ ಬಿಜೆಪಿ ಎಷ್ಟು ಆಸ್ಪತ್ರೆ ಶಾಲೆ ಕಾಲೇಜು ವಿದ್ಯುತ್ ಸ್ಥಾವರ ಅಣೆಕಟ್ಟು ನಿರ್ಮಾಣ ಮಾಡಿತು? ಕೇಳಿದರೆ ಯಾರ ಬಳಿಯೂ ನಿಖರ ಮಾಹಿತಿ ಇಲ್ಲ. ಹೇಳುತ್ತಾರೆ ರಸ್ತೆ ಮಾಡಿದ್ದೇವೆ. ರಸ್ತೆಗೆ ಟೋಲ್ ಕೂಡ ವಸೂಲಿ ಮಾಡುತ್ತಾರೆ ಅನ್ನುವುದು ಮರೆಯಬೇಡಿ.

ಹಿಂದೆ ಕೂಡ ಪ್ಲೇಗ್ ಕಾಲರಾ ಸಿಡುಬು ಕುಷ್ಠರೋಗ ಹಂದಿಜ್ಜರ ಪೋಲಿಯೋ, ಅದರಲ್ಲೂ ಪ್ಲೇಗ್ ಅಂತೂ ಮಹಾಮಾರಿ ರೀತಿ ಹಬ್ಬಿತ್ತು, ಸೀಮಿತ ವೈದ್ಯಕೀಯ ಅನುಕೂಲ ಇದ್ದ ಆ ಸಮಯದಲ್ಲಿ ಕೂಡ ಈ ದೇಶದ ಜನರನ್ನು ಕಾಂಗ್ರೆಸ್ ಕಾಪಾಡಿದೆ. ಹುಟ್ಟುವ ಮಗು ಖಾಯಿಲೆ ಬೀಳಬಾರದು ಎಂದು ಗರ್ಭದಲ್ಲೇ ಇರುವಾಗ ಲಸಿಕೆ, ಹುಟ್ಟಿದ ಐದು ವರ್ಷದವರೆಗೆ ವಿವಿಧ ಲಸಿಕೆ. ಇದನ್ನೆಲ್ಲಾ ಶುರು ಮಾಡಿ 60 ವರ್ಷ ಆಗುತ್ತಾ ಬಂತು.

ಹೌದು ಕಾಂಗ್ರೆಸ್ ತನ್ನ ಸಂಪತ್ತಿನಿಂದ ಏನು ಕೊಟ್ಟಿಲ್ಲ ನಮ್ಮದೇ ತೆರಿಗೆ ಹಣದಿಂದ ಕೊಟ್ಟಿದೆ. ಇದು ಪ್ರತಿಯೊಂದು ಸರ್ಕಾರದ ಕರ್ತವ್ಯ ಕೂಡ. ಅದೇ ಕಳೆದ ಒಂಬತ್ತು ವರ್ಷಗಳಿಂದ ನಮ್ಮಿಂದ ಕಿತ್ತುಕೊಂಡದ್ದು, ಅಲ್ಲದೆ ನಮಗೆ ಏನು ಕೊಟ್ಟಿದಾರೆ? ಬಿಜೆಪಿ ಸರ್ಕಾರ ಕೊಟ್ಟಿದ್ದು ಕೋರೋನಾಕ್ಕೆ ಒಂದು ಲಸಿಕೆ ಅದು ಸೈಡ್ ಎಫೆಕ್ಟ್ಸ್ ಆಗಿ ದೇಶಾದ್ಯಂತ ಸಾವಿರಾರು ಜನರು ಸಾಯುತ್ತಿದ್ದಾರೆ. ಸರ್ಕಾರ ಅದನ್ನು ಮಾಧ್ಯಮಗಳು ವರದಿ ಮಾಡದಂತೆ ತಡೆಯುತ್ತಿದೆ. ನೀವು ಯಾವ ಪಕ್ಷವನ್ನು ಬೇಕಾದರೂ ಬೆಂಬಲಿಸಿ ಅದು ನಿಮ್ಮ ವೈಯಕ್ತಿಕ ನಿಲುವು. ಆದರೆ ನನ್ನ ಆಕ್ಷೇಪ ಇರುವುದು ನಿಮ್ಮ ವಾಟ್ಸಾಪ್ ಯುನಿವರ್ಸಿಟಿಯ ಪ್ರೊಫೆಸರ್ ಬೆಳಿಗ್ಗೆ ಸಂಡಾಸ್ ನಲ್ಲಿ ಕುಳಿತು ನಿಮ್ಮ ವಾಟ್ಸಾಪ್ ನಲ್ಲಿ ಮಾಡುವ ಕಾಂಗ್ರೆಸ್ ಬಗ್ಗೆ ಅಸಭ್ಯ ಅಹಸ್ಯ ಅಪಪ್ರಚಾರ ಎಂಬ ಕಕ್ಕವನ್ನು ನೀವುಗಳು ಮೂರು ಬಿಟ್ಟು ಕಣ್ಣುಮುಚ್ಚಿ ಬೇರೆಯವರಿಗೆ ಫಾವ್ರರ್ಡ್ ಮಾಡುತ್ತೀರಲ್ಲ ನಿಮಗೆ ಏನು ಅನಿಸುವುದಿಲ್ಲವೇ? ನೀವು ಬಿಜೆಪಿ ಬಗ್ಗೆ ಪ್ರಚಾರ ಮಾಡಿ ಮೋದಿ ಸಾಧನೆ ಬಗ್ಗೆ ಪ್ರಚಾರ ಮಾಡಿ, ಅದು ಬಿಟ್ಟು ಮಾನಸಿಕ ರೋಗಿಗಳ ರೀತಿ ಅಪಪ್ರಚಾರ ಮಾಡುವುದು ನಿಮ್ಮ ಮಾನಸಿಕ ಸ್ಥಿಮಿತ ತಪ್ಪಿರುವ ಬಗ್ಗೆ ಸ್ಪಷ್ಟವಾಗಿ ಗೋಚರಿಸುತ್ತದೆ…

– ಹರೀಶ್

Leave a Reply