ಮೇ 31ರಂದು ಚಂದ್ರಚೂಡ್ ನೇತೃತ್ವದ 3 ನ್ಯಾಯಾದೀಶರ ಪೀಠವು ಮೂರು ಕಾರಣಗಳಿಗಾಗಿ ಕೇಂದ್ರ ಸರಕಾರಕ್ಕೆ ಚಾಟಿ ಬೀಸಿತು
- ಲಸಿಕೆಗಾಗಿ 35,000 ಕೋಟಿ ಮೀಸಲಿಟ್ಟ ಹಣದ ಲೆಕ್ಕ ಕೊಡಿ? ಅದು ಎಲ್ಲಿ ಹೋಯಿತು?
- ಲಸಿಕೆ ಖರೀದಿಗೆ ನಿಗದಿ ಮಾಡಿದ ಬೆಲೆಯಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ವಿಪರೀತ ತಾರತಮ್ಯವಿದೆ. ಯಾಕೆ ರಾಜ್ಯಗಳು ಅದಿಕ ಮೊತ್ತ ಕೊಡಬೇಕು? ಉತ್ತರಿಸಿ.
- ಉಚಿತ ಲಸಿಕೆಯ ಬರವಸೆ ಕೊಟ್ಟು ಈಗ ನನಗೆ ಸಂಬಂದಿಸಿಲ್ಲ ಎಂದು ಕೇಂದ್ರ ತಾರಮ್ಮಯ್ಯ ಕೈ ಆಡಿಸುವುದನ್ನು ಒಪ್ಪಲು ಸಾದ್ಯವಿಲ್ಲ. ಅದು ನಿಮ್ಮ ಜವಾಬ್ದಾರಿ.
- ಕೇಂದ್ರದ ‘ಲಸಿಕೆ ನೀತಿ’ (vaccine policy) ಏನು?
ಈ ಕುರಿತು ಜೂನ್ 15ರ ಒಳಗೆ ಅಫಿಡವಿಟ್ ಸಲ್ಲಿಸಲು ಆದೇಶಿಸಿದೆ.
ಮೋದಿ ಸಾಹೇಬರು ಮೇಲಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೂ ಹೋಗದೆ ನಾನು, ನಾನು ಕೊಡುತ್ತೇನೆ ಎನ್ನುವ ನಾರ್ಸಿಸಂ ಪ್ರದರ್ಶಿಸುತ್ತಿದ್ದಾರೆ ಮತ್ತೆ ರಾಜ್ಯಗಳನ್ನು ದೂಶಿಸುವ ತಂತ್ರಗಾರಿಕೆ ಸುರು ಮಾಡಿದ್ದಾರೆ. ಬಿಜೆಪಿ ಐಟಿ ಸೆಲ್, ವಾಟ್ಸಾಪ್ ಯೂನಿವರ್ಸಿಟಿ ಸುಳ್ಳನ್ನು ಹರಡಲು ಮತ್ತೆ 24×7 ಬ್ಯುಸಿಯಾಗಿದ್ದಾರೆ
ಹೋದ ವರ್ಶವೇ ಸೀರಂ ಕಂಪನಿಯ ಮಾಲೀಕ ಆನಂದ ಪೂನವಾಲ ‘ರಾಜ್ಯಗಳಿಗೆ ಲಸಿಕೆ ವಿತರಿಸಲು ಅಗತ್ಯವಾದ 80,000 ಕೋಟಿ ನಿಮ್ಮ ಬಳಿ ಇದೆಯೇ ಎಂದು ಕೇಂದ್ರವನ್ನು ಕೇಳಿದ್ದ. ಆತನ ಖಾಸಗಿ ನೀತಿಗಳು ಒಂದೆಡೆಯಿರಲಿ, ಆತನ ಪ್ರಶ್ನೆ ಮುಖ್ಯವಾಗಿತ್ತು. ಆದರೆ ಅದರ ದುರಂತ ಈಗ ಅನುಬವಿಸುತ್ತಿದ್ದೇವೆ. ಮತ್ತು 200 ಕೋಟಿ ಲಸಿಕೆ ಕೊಡಬೇಕಾಗಿದೆ.
ಕೇಂದ್ರದ ಮಾಹಿತಿಯ ಅನುಸಾರ 23 ಕೋಟಿ ಲಸಿಕೆ ನೀಡಿದ್ದಾರೆ. ಮಿಕ್ಕ 177 ಕೋಟಿ ಲಸಿಕೆ ಎಲ್ಲಿದೆ?
ಇಲ್ಲಿನ ಸೀರಂ ಮತ್ತು ಕೋವಾಕ್ಸಿನ್ ಕಂಪನಿಗಳ ವಾರ್ಶಿಕ ಉತ್ಪಾದನಾ ಸಾಮರ್ಥ್ಯ 30-35 ಕೋಟಿ ಮಾತ್ರ.
ಮಿಕ್ಕ 150 ಕೋಟಿ ಲಸಿಕೆ ಆಮದು ಮಾಡಿಕೊಳ್ಳಬೇಕು???
ಇದನ್ನು ಎಲ್ಲಿಂದ, ಹೇಗೆ ಖರೀದಿಸುತ್ತಾರೆ, ವಿದೇಶಿ ಕಂಪನಿಗಳೊಂದಿಗೆ ಮಾತುಕತೆಯಾಗಿದೆಯೇ? ಈ ಆಮದಿನ ಅವದಿ ಏನು? ಒಂದು ವರ್ಶ? ಎರಡು ವರ್ಶ! ಮೂರು?
ಹಾಗಿದ್ದರೆ 2021ರ ಡಿಸೆಂಬರ್ ಒಳಗೆ ಸಂಪೂರ್ಣ ಲಸಿಕೆ ಕೊಡುತ್ತೇವೆ ಎಂದ ಆರೋಗ್ಯ ಮಂತ್ರಿ ಹರ್ಷವರ್ಧನ್ ಅವರ ಮಾತಿನ ಉತ್ತರದಾಯಿತ್ವ ಏನು? ಅದು ಬೇಜವಾಬ್ದಾರಿ ಹೇಳಿಕೆಯಲ್ಲವೇ?
ಯಾರಿಗೂ ಯಾವುದೂ ಗೊತ್ತಿಲ್ಲ? ಮಾದ್ಯಮಗಳು ಕೇಳುತ್ತಿಲ್ಲ?
ಸಜ್ಜನರು ಎಕೋ ಚೇಂಬರ್ನಲ್ಲಿದ್ದಾರೆ, ಅವರ ಮಾತುಗಳು ಜನರ ಬಳಿ ತಲುಪುತ್ತಿಲ್ಲ, ಅಸಹಾಯಕರಾಗಿದ್ದಾರೆ?
ದುರ್ಜನರು ಆಟ್ಟಹಾಸದಿಂದ ಕ್ರಿಯಾಶೀಲರಾಗಿದ್ದಾರೆ ?
- ಶ್ರೀಪಾದ್ ಭಟ್, ಸಾಮಾಜಿಕ ಹೋರಾಟಗಾರರು




