ಬೆಂಗಳೂರು: ಸರ್ಕಾರದ ಯಾವ ಮೂರ್ಖ KSRTCಯ ನೂತನ ಸೇವೆಗೆ #ಅಶ್ವಮೇಧ ಎಂದು ಹೆಸರಿಟ್ಟದ್ದು? Idiots. Idiotic. Insensitive. ಅಶ್ವಮೇಧ ಎಂದರೆ ಸರಳ ಕನ್ನಡದಲ್ಲಿ #ಕುದುರೆಬಲಿ ಎಂದು ಅರ್ಥ. ಹಾಗಾಗಿ, ಪ್ರಯಾಣದ ಕೊನೆಯಲ್ಲಿ ಬಲಿಯಾಗುವುದು ಬಸ್ಸೋ, ಪ್ರಯಾಣಿಕರೋ? ಎಂತಹ ಅಸೂಕ್ಷ್ಮ ಹೆಸರು! ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿನ್ನೆ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಅಶ್ವಮೇಧ ಹೆಸರಿನ ಕೆ.ಎಸ್.ಆರ್.ಟಿ.ಸಿ ಬಸ್ ಗಳಿಗೆ ಚಾಲನೆ ನೀಡಿದ್ದರು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ರವಿಕೃಷ್ಣಾರೆಡ್ಡಿ, ಕನ್ನಡ ಅಥವ ಸಂಸ್ಕೃತ ಗೊತ್ತಿಲ್ಲದ ಯಾರೋ #ಮೂರ್ಖಶಿಖಾಮಣಿ ಈ ಹೆಸರನ್ನು ಪ್ರಸ್ತಾಪಿಸಿ ಇನ್ಯಾವುದೋ ಮೂರ್ಖಶಿಖಾಮಣಿ ಒಪ್ಪಿಗೆ ಕೊಟ್ಟಿರಬೇಕು. ಸರ್ಕಾರದಲ್ಲಿ ಇನ್ನೆಂತೆಂತಹ ಅಜ್ಞಾನಿ ಮತ್ತು ಅವಿವೇಕಿಗಳು ಇದ್ದಾರೋ! ಎಂದು ಕಿಡಿಕಾರಿದ್ದಾರೆ.
ಈ ಸೇವೆಗೆ ಚಾಲನೆ ಕೊಡುವಾಗ ನಮ್ಮ ಕನ್ನಡ ವ್ಯಾಕರಣದ ಪ್ರಕಾಂಡ ಪಂಡಿತ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಯಾವ ರೀತಿಯ ಮಾನಸಿಕ ಆಘಾತವಾಗಿರಹುದು? ಈ ಕೂಡಲೇ KSRTC ಅಧಿಕಾರಿಗಳು ಈ ಅನರ್ಥಕಾರಿ ಹೆಸರನ್ನು ಬದಲಾಯಿಸಬೇಕು. ಬೇಕಾದರೆ #ಕುದುರೆಸಾರೋಟು ಎಂದೋ, ಅಥವ ಸಂಸ್ಕೃತ ಮೂಲದ್ದೇ ಆಗಬೇಕು ಎಂದರೆ #ಅಶ್ವಸಂಚಾರ ಎಂದೋ ಬದಲಾಯಿಸಿ ಎಂದು ಅಭಿಪ್ರಾಯಪಟ್ಟಿದ್ದಾರೆ.




