ಬಿಜೆಪಿಯ ಪ್ರತಿಯೊಬ್ಬ ನಾಯಕರು ಕಳೆದ ಹತ್ತು ವರ್ಷದಲ್ಲಿ ದೇಶ ಮೋದಿರವರ ನಾಯಕತ್ವದಲ್ಲಿ ತುಂಬಾ ಅಭಿವೃದ್ಧಿಯಾಗಿದೆ ಎಂಬ ಮಾತನ್ನು ಹೇಳುತ್ತಾ ಅಭಿವೃದ್ಧಿಯ ಕಾರಣಕ್ಕಾಗಿ ಮೋದಿಯವರಿಗೆ ಮತ್ತೆ ಮತವನ್ನು ನೀಡಬೇಕು ಎಂಬ ಸಮರ್ಥನೆಯನ್ನ ನೀಡುತ್ತಿದ್ದಾರೆ ಹಾಗಾದರೆ ಅಭಿವೃದ್ಧಿ ಎಂದರೆ ಏನು ಇದರ ಮಾನದಂಡವಾದರೂ ಯಾವುದು? ಎಂಬ ಬಗ್ಗೆ ಚರ್ಚೆ ನಡೆಯಬೇಕಲ್ಲವೇ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ನೆಹರುರವರು ಕೈಗಾರಿಕಾ ಕ್ರಾಂತಿಯನ್ನ ಆರಂಭಿಸಿ ಹಲವಾರು ಸಾರ್ವಜನಿಕ ಉದ್ದಿಮೆಗಳನ್ನ ಸ್ಥಾಪಿಸಿ ಲಕ್ಷಾಂತರ ಮಂದಿಗೆ ಉದ್ಯೋಗವನ್ನು ಸೃಷ್ಟಿಸಿಕೊಟ್ಟು ಕೈಗಾರಿಕಾ ಬೆಳವಣಿಗೆ ಮೂಲಕ ಅಭಿವೃದ್ಧಿಯನ್ನ ತೋರಿಸಿದರು ಅದೇ ರೀತಿಯಲ್ಲಿ ಅಣೆಕಟ್ಟುಗಳನ್ನ ಕಟ್ಟಿ ಕೃಷಿ ಚಟುವಟಿಕೆಗೆ ಅನುಕೂಲ ಮಾಡಿಕೊಟ್ಟು ರೈತರ ಬದುಕಿಗೆ ನೆರವಾದರೂ ದೇಶದಲ್ಲಿ ಕೃಷಿ ಚಟುವಟಿಕೆ ಹೆಚ್ಚು ನಡೆಯುವುದರ ಮೂಲಕ ಮತ್ತಷ್ಟು ಉದ್ಯೋಗಗಳು ಸೃಷ್ಟಿಯಾಯಿತು
ಸಂಶೋಧನಾ ಸಂಸ್ಥೆಗಳು ಆರಂಭವಾದವು ವಿಶ್ವವಿದ್ಯಾನಿಲಯಗಳು ಸ್ಥಾಪನೆಯಾಯಿತು ಉನ್ನತ ಶಿಕ್ಷಣಕ್ಕೆ ಬೇಕಾದ ಎಲ್ಲ ರೀತಿಯ ಸೌಲಭ್ಯಗಳು ದೇಶದಲ್ಲಿ ದೊರೆಯುವಂತಾಯಿತು. ಈ ಮೂಲಕ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಪೂರಕವಾಯಿತು ಪ್ರತಿಭೆಗಳು ಅರಳಿದವು ದೇಶ ವಿದೇಶಗಳಲ್ಲಿ ಭಾರತದ ಶ್ರೇಷ್ಠ ವ್ಯಕ್ತಿಗಳನ್ನು ಪುರಸ್ಕರಿಸುವಂತಹ ಸಂದರ್ಭಗಳು ಒದಗಿ ಬಂದವು
ವೈಜ್ಞಾನಿಕವಾದ ಆಲೋಚನೆಗಳ ಮೂಲಕ ದೂರದೃಷ್ಟಿತ್ವ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಪಂಚವಾರ್ಷಿಕ ಯೋಜನೆಗಳು ಜಾರಿಯಾದವು ಈ ಮೂಲಕ ದೇಶದ ಸರ್ವಾಂಗಿನ ಪ್ರಗತಿಗೆ ನಾಂದಿ ಆಯ್ತು
ನಮ್ಮ ದೃಷ್ಟಿಯಲ್ಲಿ ಇವುಗಳು ಅಭಿವೃದ್ಧಿಯ ಮಾನದಂಡ ಎಂದು ಹೇಳಬಹುದು ಆದರೆ ಮೋದಿಯವರ ಕಾಲದಲ್ಲಿ ಇಂತಹ ಯಾವ ಅಭಿವೃದ್ಧಿಯ ಯೋಜನೆಗಳು ಅನುಷ್ಠಾನವಾಗಿಲ್ಲ ಜೊತೆಗೆ ಹಲವಾರು ಸಂಸ್ಥೆಗಳನ್ನ ಮಾರಾಟ ಮಾಡಿ ನಮ್ಮ ದೇಶದ ಸಂಸ್ಥೆಗಳ ಮೇಲೆ ನಮ್ಮ ಹಿಡಿತವನ್ನು ಕಳೆದುಕೊಂಡು ಅವುಗಳು ಸಾರ್ವಜನಿಕ ಸಂಸ್ಥೆಗಳಿಂದ ವ್ಯಕ್ತಿಗತ ಸಂಸ್ಥೆಗಳಾಗಿ ಬದಲಾಯಿತು
ಲಾಲ್ ಬಹುದ್ದೂರ್ ಶಾಸ್ತ್ರಿ ರವರು ಅಧಿಕಾರದಲ್ಲಿ ಇದ್ದದ್ದು ಸ್ವಲ್ಪ ದಿನವಾದರೂ ಸಹ ಹಸಿರು ಕ್ರಾಂತಿಗೆ ಮತ್ತು ಕ್ಷೀರ ಕ್ರಾಂತಿಗೆ ಅವರು ಬುನಾದಿಯನ್ನ ಹಾಕಿದರು ವೈಯಕ್ತಿಕವಾಗಿ ಪ್ರತಿ ಸೋಮವಾರ ಒಂದು ಹೊತ್ತು ಉಪವಾಸ ಇರುವುದರಿಂದ ದೇಶದ ಜನರಿಗೆ ಮಾದರಿಯಾದರು
ಕಳೆದ ಹತ್ತು ವರ್ಷದಲ್ಲಿ ದೇಶದ ಜನರಿಗೆ ಮಾದರಿಯಾಗಿರಬಹುದಾದ ಯಾವುದಾದರೂ ಒಂದು ನಡವಳಿಕೆಯನ್ನು ನಾವು ಹಾಲಿ ಪ್ರಧಾನಿಗಳಿಂದ ಪಡೆದಿರುವುದಿಲ್ಲ
1965 ರಲ್ಲಿ ಲಾಲ್ ಬಹುದ್ದೂರ್ ಶಾಸ್ತ್ರಿರವರು ಪಾಕಿಸ್ತಾನದ ಮೇಲೆ ಯುದ್ಧವನ್ನ ನಡೆಸಿದ ಸಂದರ್ಭದಲ್ಲಿ ಎದುರಿಸಿದಂತಹ ಕಠಿಣ ವಾದಂತಹ ಪರಿಸ್ಥಿತಿ ಅಂತರಾಷ್ಟ್ರೀಯ ಮಟ್ಟದಲ್ಲಿ ಇದ್ದಂತಹ ಒತ್ತಡ ಇವುಗಳ ನಡುವೆಯೂ ಅವರು ಗಟ್ಟಿಯಾಗಿ ನಿಂತು ಜನರ ಗೌರವಕ್ಕೆ ಪಾತ್ರರಾಗಿದ್ದಾರೆ ಜೊತೆಗೆ ಸರಳತೆ ಮತ್ತು ಪ್ರಾಮಾಣಿಕತೆಗೆ ಮತ್ತೊಂದು ಹೆಸರಾಗಿದ್ದಾರೆ
ಶ್ರೀಮತಿ ಇಂದಿರಾ ಗಾಂಧಿ ರವರು ಬಾಹ್ಯಾಕಾಶ ಸಂಸ್ಥೆಗಳ ಸ್ಥಾಪನೆಗೆ ಕಾರಣಕರ್ತರಾಗಿ ಮತ್ತಷ್ಟು ಕೈಗಾರಿಕೆಗಳನ್ನ ಸಂಸ್ಥೆಗಳನ್ನ ಸ್ಥಾಪಿಸಿದರು ಜೊತೆಗೆ 1971ರಲ್ಲಿ ಪಾಕಿಸ್ತಾನದ ಮೇಲೆ ಯುದ್ಧವನ್ನ ಸಾರಿ ಬಾಂಗ್ಲಾದೇಶದ ವಿಮೋಚನೆಗೆ ಕಾರಣಕರ್ತರಾದರು ಈ ಸಂದರ್ಭದಲ್ಲಿ ಇವರು ತೋರಿದ ದಿಟ್ಟತನ ಅಮೆರಿಕಾದ ವಿರುದ್ಧ ಇವರು ನಡೆದುಕೊಂಡ ಸ್ವಾಭಿಮಾನದ ನಡವಳಿಕೆ ಇವುಗಳನ್ನು ಭಾರತದ ಜನತೆ ಅಭಿಮಾನದಿಂದ ಗುರುತಿಸುತ್ತಾರೆ
ಬ್ಯಾಂಕುಗಳ ರಾಷ್ಟ್ರೀಕರಣ ಮಾಡುವುದರ ಮೂಲಕ ಬ್ಯಾಂಕುಗಳ ಆಸ್ತಿಯನ್ನು ದೇಶದ ಸಂಪತ್ತನಾಗಿ ಪರಿವರ್ತಿಸಿದರು ಸಾಮಾನ್ಯ ಜನರು ಬ್ಯಾಂಕುಗಳ ಸೌಲಭ್ಯವನ್ನ ಪಡೆದುಕೊಳ್ಳುವಂತೆ ವ್ಯವಸ್ಥೆಯನ್ನು ಮಾಡಿದರು ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡಿದರು ವಿಶೇಷವಾಗಿ ಉಳುವವನಿಗೆ ಭೂಮಿ ಎಂಬ ಅತ್ಯಂತ ಎದೆಗಾರಿಕೆಯ ಕಾರ್ಯಕ್ರಮವನ್ನು ತಂದು ಭಾರತ ದೇಶದ ಕೋಟಿ ಕೋಟಿ ಸಣ್ಣ ರೈತರಿಗೆ ಭೂಮಿಯ ಮಾಲೀಕತ್ವವನ್ನು ನೀಡಿದರು 20 ಅಂಶದ ಕಾರ್ಯಕ್ರಮಗಳ ಮೂಲಕ ಬಡವ ಮತ್ತು ಬಲ್ಲಿದರ ನಡುವೆ ಇರುವ ಅಂತರವನ್ನು ಹೋಗಲಾಡಿಸುವ ಪ್ರಯತ್ನವನ್ನು ನಡೆಸಿದರು
ಅಮೃತ್ಸರದ ಗೋಲ್ಡನ್ ಟೆಂಪಲ್ ಇಲ್ಲಿ ಅಡಗಿದ್ದ ಬಿಂದ್ರನ್ವಾಲಾ ಎಂಬ ದೇಶದ್ರೋಹಿಯನ್ನು ಮುಗಿಸುವುದರ ಜೊತೆಗೆ ದೇಶದ್ರೋಹ ಚಟುವಟಿಕೆಗೆ ಕಡಿವಾಣ ಹಾಕಲು ಬ್ಲೂ ಸ್ಟಾರ್ ಆಪರೇಷನ್ ಮಾಡಿದರು ಇದರಿಂದ ಇವರ ಜೀವಕ್ಕೆ ಅಪಾಯವಾಯಿತು ಇವರು ಪ್ರಾಣವನ್ನು ಕಳೆದುಕೊಳ್ಳಬೇಕಾಯಿತು
ಕಳೆದ ಹತ್ತು ವರ್ಷದಲ್ಲಿ ಬ್ಯಾಂಕುಗಳನ್ನ ವಿಲೀನ ಮಾಡಿದ್ದು ಬಿಟ್ಟರೆ ಬೇರೆ ಏನು ಮಾಡಿಲ್ಲ ಸಾರ್ವಜನಿಕರು ಬ್ಯಾಂಕುಗಳಲ್ಲಿ ವ್ಯವಹರಿಸಿದಾಗ ತಮ್ಮ ಖಾತೆಗಳಿಂದ ಹಣ ಪಡೆದು ಕೊಂಡಾಗ ತಮ್ಮ ಖಾತೆಗಳಲ್ಲಿ ನಿರ್ದಿಷ್ಟ ಪ್ರಮಾಣದ ಮೊತ್ತ ಇಲ್ಲದಿರುವ ಸಂದರ್ಭದಲ್ಲಿ ದಂಡವಾಗಿ 35 ಸಾವಿರ ಕೋಟಿ ರೂಪಾಯಿಗಳನ್ನು ಪಾವತಿಸಬೇಕಾಗಿದೆ ಬಂದು ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ ಇನ್ನು ಶತ್ರು ರಾಷ್ಟ್ರಗಳ ಮೇಲೆ ಯಾವುದೇ ಕಠಿಣವಾದ ನಿರ್ಧಾರವನ್ನು ಕೈಗೊಳ್ಳದೆ ಕೇವಲ ಮಾತುಗಳಿಗೆ ಮಾತ್ರ ತಮ್ಮ ನಿರ್ಧಾರಗಳನ್ನು ಸೀಮಿತಗೊಳಿಸಿಕೊಂಡಿದ್ದಾರೆ ಚೈನಾದ ವಿಚಾರದಲ್ಲಿ ಇವರು ಗಟ್ಟಿತನದ ನಿರ್ಧಾರಗಳು ಬಂದಿರುವುದಿಲ್ಲ ಕ್ರಾಂತಿಕಾರಿ ಎನ್ನುವ ಯಾವ ನಿರ್ಧಾರಗಳು ಆಗಿಲ್ಲ ಇವರ ಕೆಲವು ಮಸೂದೆಗಳು ಕೇವಲ ಭಾವನಾತ್ಮಕವಾದ ವಿಚಾರಗಳೆ ಹೊರತು ಬದುಕಿಗೆ ಸಂಬಂಧಪಟ್ಟಂತಹ ಯಾವ ಸಂಗತಿಗಳು ಇದರಲ್ಲಿ ಇಲ್ಲ ಇಂತಹ ಮಸೂದೆಗಳಿಂದ ಯಾರಿಗೂ ಉದ್ಯೋಗ ದೊರೆಯಲಿಲ್ಲ ಹೊಟ್ಟೆ ತುಂಬಲಿಲ್ಲ
ರಾಜೀವ್ ಗಾಂಧಿ ಇವರು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಅಡಿಪಾಯ ಹಾಕಿದರು ಸಿ ಡಾಟ್ ಸಿಸ್ಟಮ್ ಮೂಲಕ ಟೆಲಿಫೋನ್ ಕ್ರಾಂತಿಯನ್ನ ಮಾಡಿದರು ಅಧಿಕಾರ ವಿಕೇಂದ್ರೀಕರಣಕ್ಕಾಗಿ ಸಂವಿಧಾನ ತಿದ್ದುಪಡಿ ತಂದರು ಪಕ್ಷಾಂತರ ನಿಷೇಧ ಕಾಯ್ದೆಯನ್ನು ಮಂಡಿಸಿದರು 18 ವರ್ಷದ ಯುವಕರಿಗೆ ಮತದಾನದ ಹಕ್ಕನ್ನು ನೀಡಿದರು ಈ ರೀತಿಯಲ್ಲಿ ಹತ್ತು ಹಲವಾರು ಕಾರ್ಯಕ್ರಮಗಳ ಮೂಲಕ ಅಭಿವೃದ್ಧಿಗೆ ಚಾಲನೆ ನೀಡಿದರು
ಪಿ ವಿ ನರಸಿಂಹರಾಯರು ಮತ್ತು ಡಾಕ್ಟರ್ ಮನಮೋಹನ್ ಸಿಂಗ್ ರವರು ಈ ದೇಶದ ಆರ್ಥಿಕ ಕ್ರಾಂತಿಯನ್ನು ಮಾಡಿದರು ದೇಶದಲ್ಲಿ ಹೊಸದಾಗ ಆರ್ಥಿಕ ನೀತಿಯ ಮೂಲಕ ದೇಶದ ಆರ್ಥಿಕ ಸದೃಢತೆಗೆ ಕಾರಣಕರ್ತರಾದರು ವಿದೇಶಿ ಬಂಡವಾಳ ಹರಿದು ಬಂದಿತು ಕಂಪನಿಗಳು ಸ್ಥಾಪನೆಯಾಯಿತು ಉದ್ಯೋಗಿಗಳು ಅವಕಾಶವನ್ನು ಪಡೆದರು ವಿಶೇಷವಾಗಿ ಡಾಕ್ಟರ್ ಮನಮೋಹನ್ ಸಿಂಗ್ ರವರು ಸಾವಿರದ ಒಂಬೈನೂರ ತೊಂಬತ್ತೊಂದರಲ್ಲಿ ಮಂಡಿಸಿದಂತಹ ಮುಂಗಡಪತ್ರ ಭಾರತದ ಆರ್ಥಿಕ ಪ್ರಗತಿಗೆ ಅಡಿಪಾಯವಾಯಿತು
ಇವರು ಸಹ ಉಚಿತವಾದ ಶಿಕ್ಷಣ ಎಂಬ ಸಂವಿಧಾನದ ಆಶಯವನ್ನು ಅನುಷ್ಠಾನಗೊಳಿಸಿ ಒಂದರಿಂದ ಹತ್ತನೇ ತರಗತಿ ತನಕ ಮಕ್ಕಳಿಗೆ ಉಚಿತ ಶಿಕ್ಷಣದ ವ್ಯವಸ್ಥೆಯನ್ನು ಮಾಡಿದರು ಮಾಹಿತಿ ಹಕ್ಕು ಕಾಯ್ದೆಯನ್ನು ತಂದರು ಹಾಗು ಅಣು ಒಪಂ ದವನ್ನು ಮಾಡಿದರು , ಆಧಾರ್ ಕಾರ್ಡಿನ ಮೂಲಕ ನಾಗರಿಕರಿಗೆ ಗುರುತಿನ ಚೀಟಿ ನೀಡಿದರು ಆಹಾರ ಭದ್ರತೆ ಮತ್ತು ಆರೋಗ್ಯಭದ್ರತೆ ಕಾಯ್ದೆಗಳನ್ನ ತಂದರು ವಿಶೇಷವಾಗಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ದೇಶದ ಲಕ್ಷಾಂತರ ಜನರಿಗೆ ಉದ್ಯೋಗದ ಅವಕಾಶಗಳನ್ನು ಒದಗಿಸಿಕೊಟ್ಟರು ಅವರಿಗೆ ಭದ್ರತೆಯನ್ನು ನೀಡಿದರು ಇವುಗಳು ಅಭಿವೃದ್ಧಿಯ ಸಂಗತಿಗಳಾಗಿರುತ್ತದೆ ಆದರೆ ಕಳೆದ ಹತ್ತು ವರ್ಷದಲ್ಲಿ ಉದ್ಯೋಗವನ್ನು ಕೊಡಲಿಲ್ಲ ಕೈಗಾರಿಕೆಯನ್ನು ಸ್ಥಾಪಿಸಲಿಲ್ಲ ಆದರೂ ಸಹ ಅಭಿವೃದ್ಧಿ ಅಭಿವೃದ್ಧಿ ಎಂದು ಜಪಿಸುತ್ತಾ ಜನರ ಬಳಿಗೆ ಮತ್ತೆ ಬರುತ್ತಿರುವುದು ನೋಡಿದರೆ ಅಭಿವೃದ್ಧಿ ಎಂದರೇನು ಎಂಬ ಅನುಮಾನ ಬರುತ್ತದೆ
ಮೋದಿ ರವರು ಬ್ಯಾಂಕಿನ ಖಾತೆಗಳನ್ನು ಆರಂಭಿಸಿ ಜನರಿಗೆ ಸಹಾಯ ಮಾಡಿದೆ ಎನ್ನುತ್ತಾರೆ ಆದರೆ ಕರ್ನಾಟಕದ ಸರ್ಕಾರ ಮಾನ್ಯ ಸಿದ್ದರಾಮಯ್ಯನವರು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 2000 ಗಳು ಪ್ರತಿ ತಿಂಗಳು ನೀಡಿ ಆ ಖಾತೆಗಳಿಗೆ ಹಣದ ಹರಿವನ್ನ ಹರಿಸಿದರು
ಮೋದಿರವರು ಪ್ರಧಾನಿಯಾಗಿ ಬರುವ ಮುನ್ನ ದೇಶದ ಆರು ಲಕ್ಷಕ್ಕೂ ಹೆಚ್ಚು ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವಿತ್ತು ಕೇವಲ 18000 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವನ್ನು ನೀಡಿ ದೇಶದಲ್ಲಿ ಎಲ್ಲಾ ಹಳ್ಳಿಗೆ ನಾನೇ ವಿದ್ಯುತ್ ನೀಡಿದೆ ಎಂಬ ಪ್ರಚಾರವನ್ನು ಪಡೆಯುತ್ತಿದ್ದಾರೆ
ಡಾಕ್ಟರ್ ಮನಮೋಹನ್ ಸಿಂಗ್ ರವರ ಕಾಲದಲ್ಲಿ ಆರಂಭವಾದ ಜನರಿಕ್ ಮೆಡಿಸನ್ ಇದರ ಹೆಸರನ್ನು ಜನ ಔಷಧಿ ಎಂದು ಬದಲಾಯಿಸಿ ಪ್ರಧಾನ ಮಂತ್ರಿಗಳು ತಮ್ಮ ಭಾವಚಿತ್ರವನ್ನು ಹಾಕಿಕೊಂಡು ಇದು ತಮ್ಮ ಯೋಜನೆ ಎಂದು ಪ್ರಚಾರ ಪಡೆಯುತ್ತಿದ್ದಾರೆ
ಮೋದಿರವರು ಪ್ರಧಾನಿಯಾಗಿ ಬರುವ ಮುನ್ನವೇ ದೇಶದ ತುಂಬಾ ಎಲ್ಲ ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆಗಳು ರೂಪಿಸಲಾಗಿತ್ತು ಮಿನಿ ವಾಟರ್ ಸ್ಕೀಮ್ ಮತ್ತು ಕಾಲುವೆಗಳ ಮೂಲಕ ನೀರು ನೀಡಲಾಗುತ್ತಿತ್ತು ಬೋರ್ವೆಲ್ ಗಳ ಮೂಲಕ ನೀರು ಹರಿಸಲಾಗುತ್ತಿತ್ತು ಇನ್ನು ಸಾರ್ವಜನಿಕನಲ್ಲಿ ಇಂದಿರಾಗಾಂಧಿ ಕಾಲದಲ್ಲಿ ಆರಂಭವಾಗಿತ್ತು. ಕರ್ನಾಟಕದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಎಂಬ ಯೋಜನೆ ಅಡಿಯಲ್ಲಿ ಹಿಂದೆ ಸಿದ್ದರಾಮಯ್ಯನವರ ಸರ್ಕಾರ 10 ಸಾವಿರಕ್ಕೂ ಹೆಚ್ಚು ಇಂತಹ ಘಟಕಗಳನ್ನು ಸ್ಥಾಪಿಸಿ ಹಳ್ಳಿಹಳ್ಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿದ್ದರು ಆದರೆ ಮೋದಿಯವರು ಒಂದಷ್ಟು ನಲ್ಲಿಗಳನ್ನು ಇರುವ ಜಾಗಕ್ಕೆ ಹಾಕಿಸಿ ಇಡೀ ದೇಶದ ಜನರಿಗೆ ನಾನೇ ನೀರು ಕೊಟ್ಟಿದ್ದು ಎಂದು ಪ್ರಚಾರವನ್ನು ಪಡೆಯುತ್ತಿದ್ದಾರೆ
ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ರೋಜ್ಗಾರ್ ಯೋಜನೆ ಎಂಬ ಕಾರ್ಯಕ್ರಮ ದಾಳಿಯಲ್ಲಿ ವಿದ್ಯಾವಂತ ಯುವ ಜನರಿಗೆ ಒಂದು ಲಕ್ಷ ರೂಪಾಯಿಗಳ ಸಾಲವನ್ನು ನೀಡಲಾಗುತ್ತಿತ್ತು ಇದರ ಜೊತೆಗೆ ಇವರಿಗೆ ಒಂದು ತಿಂಗಳ ತರಬೇತಿ ಶಿಬಿರವನ್ನು ನೈಪುಣ್ಯತೆಯನ್ನು ಪಡೆದುಕೊಳ್ಳಲು ನೀಡಲಾಗುತ್ತಿತ್ತು. ಈಗ ಇದೇ ಕಾರ್ಯಕ್ರಮವನ್ನು ಮುದ್ರಾ ಯೋಜನೆ ಎಂಬ ಹೆಸರಿನಲ್ಲಿ ಮಾಡಿ 55 ಕೋಟಿ ಜನರಿಗೆ 5 ಲಕ್ಷಕ್ಕೂ ಹೆಚ್ಚು ಸಾಲವನ್ನು ನೀಡಿದ್ದೇನೆ ಎಂದು ಪ್ರಚಾರ ಪಡೆಯುತ್ತಾರೆ ವಾಸ್ತವವಾಗಿ 55 ಕೋಟಿ ಯುವ ಜನರಿಗೆ 5 ಲಕ್ಷ ಸಾಲ ಎಂದರೆ ದೇಶದ ಮುಂಗಡಪತ್ರದ ಲೆಕ್ಕ ಎಷ್ಟಿರಬೇಕು 55 ಕೋಟಿ ಜನರು ಈ ಸಾಲದ ಯೋಜನೆ ಪಡೆದಿದ್ದರೆ ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಏಕೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿದೆ ಎಂಬ ಪ್ರಶ್ನೆಗೂ ಉತ್ತರ ನೀಡಬೇಕಲ್ಲವೇ
ಇನ್ನು ಪ್ರಧಾನಮಂತ್ರಿಗಳು ನಾಲ್ಕು ಕೋಟಿಗೂ ಹೆಚ್ಚು ಮನೆಗಳನ್ನು ಪ್ರಧಾನ ಮಂತ್ರಿ ಅವಾಜ್ ಯೋಜನೆ ಅಡಿಯಲ್ಲಿ ಕಟ್ಟಿಕೊಟ್ಟಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ ಇದು ಸತ್ಯವಾದರೆ ನಾಲ್ಕು ಕೋಟಿ ಮನೆಗಳಿಗೆ ಎಷ್ಟು ಲಕ್ಷ ಕೋಟಿಗಳು ನೀಡಿದ್ದಾರೆ ಎಂಬ ಮಾಹಿತಿ ಬೇಕು. ಜೊತೆಗೆ ಪ್ರಧಾನಮಂತ್ರಿಗಳು ನೀಡುವುದು ಕೇವಲ ಒಂದುವರೆ ಲಕ್ಷ ರೂಪಾಯಿಗಳು ರಾಜ್ಯ ಸರ್ಕಾರ ಒಂದುವರೆ ಲಕ್ಷ ರೂಪಾಯಿಗಳನ್ನು ನೀಡುತ್ತದೆ ಉಳಿದ 5 ಲಕ್ಷ ಹಣ ಫಲಾನುಭವಿಗಳು ಸಾಲದ ರೂಪದಲ್ಲಿ ಪಡೆಯಬೇಕು ಆದರೂ ಪ್ರಧಾನಮಂತ್ರಿಗಳು ನಾಲ್ಕು ಕೋಟಿ ಮನೆ ನಿರ್ಮಿಸಿದ್ದೇನೆ ಎಂದು ಹೇಳುತ್ತಾರೆ ಹಾಗಾದರೆ ರಾಜ್ಯದ ಪಾಲಿನ ವಿಚಾರವನ್ನು ಏಕೆ ಮಾತನಾಡುವುದಿಲ್ಲ
ಇನ್ನು ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಎಂಬ ಯೋಜನೆಗೆ ಕೇಂದ್ರ ಸರ್ಕಾರ ಮೀಸಲಿಟ್ಟಿರುವುದು ಕೇವಲ ಕೆಲವೇ ಕೆಲವು ಸಾವಿರ ಕೋಟಿ ರೂಪಾಯಿಗಳು ಆದರೆ ಈ ಯೋಜನೆಗೆ ರಾಜ್ಯ ಸರ್ಕಾರಗಳು 40% ರಷ್ಟು ಹಣವನ್ನ ಪಾವತಿಸುತ್ತದೆ ಕೇಂದ್ರ ಸರ್ಕಾರ ಸಂಪೂರ್ಣವಾಗಿ ಹಣ ನೀಡುವುದಿಲ್ಲ ರಾಜ್ಯ ಸರ್ಕಾರಗಳಲ್ಲಿ ಬಿಪಿಎಲ್ ಕಾರ್ಡುದಾರರಿಗೆ ಮತ್ತು ಯಶಸ್ವಿನಿ ಕಾಡುದಾರರಿಗೆ ಈ ಯೋಜನೆಯ ಫಲವಿದೆ ಈಗಾಗಲೇ ಯಶಸ್ವಿನಿ ಯೋಜನೆಯಡಿಯಲ್ಲಿ ನಾಗರಿಕರು ಪ್ರತಿ ವರ್ಷ ಒಬ್ಬ ವ್ಯಕ್ತಿಗೆ ಸಾವಿರ ರೂಪಾಯಿಗಳನ್ನು ಪಾವತಿಸುತ್ತಾರೆ ಬಿಪಿಎಲ್ ಕಾರ್ಡಿನಲ್ಲಿ ಚಿಕಿತ್ಸೆ ಪಡೆದವರಿಗೆ ರಾಜ್ಯ ಸರ್ಕಾರ ಹಣವನ್ನು ಪಾವತಿಸುತ್ತದೆ ಆಯುಷ್ಮಾನ್ ಭಾರತ್ ಕಾರ್ಡ್ ಕೇವಲ ಸರ್ಕಾರಿ ಆಸ್ಪತ್ರೆಗಳಿಗೆ ಮಾತ್ರ ಸೀಮಿತವಾಗಿದೆ ಇಲ್ಲಿಯೂ ಸಹ ರಾಜ್ಯ ಸರ್ಕಾರದ ಯೋಜನೆಗಳ ಜೊತೆಯಲ್ಲಿ ಇದು ವಿಲೀನವಾಗಿದೆ ಖಾಸಗಿ ಆಸ್ಪತ್ರೆಗಳಲ್ಲಿ ಅಥವಾ ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಈ ಕಾರ್ಡಿಗೆ ಕಿಮ್ಮತ್ತಿಲ್ಲ ಆದರೂ ಸಹ ಪ್ರಧಾನ ಮಂತ್ರಿಗಳು ಆಯುಷ್ಮಾನ್ ಭಾರತ್ ಕಾರ್ಡ್ ಹೆಸರಿನಲ್ಲಿ ಕೋಟಿ ಕೋಟಿ ಭಾರತೀಯರು ೫ ಲಕ್ಷದ ತನಕ ಚಿಕಿತ್ಸೆ ಪಡೆದಿದ್ದಾರೆಂದು ಅಂತರಾಷ್ಟ್ರೀಯ ವೇದಿಕೆಯಲ್ಲಿ ಹೇಳುತ್ತಾರೆ
ಇನ್ನು ಪ್ರಧಾನ ಮಂತ್ರಿಗಳು ಹೇಳುವ ಉಜ್ವಲ್ ಯೋಜನೆಯ ಅಡಿಯಲ್ಲಿ 6 ಕೋಟಿ ಹೆಚ್ಚು ಜನ ಫಲಾನುಭವಿಗಳಿರುವುದು ಸತ್ಯ ಆದರೆ ಎಲ್ಲಾ ನಾಗರಿಕರು ಪ್ರತಿ ತಿಂಗಳು ತಮಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ದೊರೆಯುತ್ತದೆಂದು ಭಾವಿಸಿದ್ದರು ಪ್ರತಿ ತಿಂಗಳು ಸಿಲೆಂಡರ್ ಗಳಿಗೆ ಹಣ ಪಾವತಿಸಬೇಕೆಂದು ಅರಿವಾಗುತ್ತಿದ್ದಂತೆ ಸರಿ ಸುಮಾರು ನಾಲ್ಕು ಕೋಟಿಗೂ ಹೆಚ್ಚು ಬಂದಿ ಈ ಯೋಜನೆಯಿಂದ ಹೊರ ಬಂದಿದ್ದಾರೆ ಇವರುಗಳು ಮತ್ತೆ ಸೌದೆ ಒಲೆಯನ್ನು ಅವಲಂಬಿಸಿದ್ದಾರೆ ಆದರೂ ಸಹ ಪ್ರಧಾನ ಮಂತ್ರಿಗಳು ಉಜ್ವಲ ಯೋಜನೆ ಹೆಸರನ್ನು ಹೇಳುತ್ತಾರೆ. ಸಾಮಾನ್ಯ ಜನರ ಭಾವನೆ ಏನಿದೆ ಎಂದರೆ ಉಜ್ವಲ್ ಯೋಜನೆಯಡಿಯಲ್ಲಿ ಉಚಿತವಾಗಿ ನಾಗರಿ ಕರೇ ಅಡುಗೆ ಸಿಲಿಂಡರ್ ದೊರೆಯುತ್ತದೆಂಬ ಅಭಿಪ್ರಾಯವಿದೆ
ಈ ಹಿನ್ನಲೆಯಲ್ಲಿ ಅಭಿವೃದ್ಧಿ ಎಂದರೇನು ಎಂಬ ಚರ್ಚೆಯಾಗಬೇಕು ರಾಷ್ಟ್ರೀಯ ಹೆದ್ದಾರಿಗಳು ನಿರ್ಮಾಣವಾಗಿದೆ ಆದರೆ ಇಲ್ಲಿ ಓಡಾಡುವ ನಾಗರಿಕರು ತಮ್ಮ ವಾಹನಗಳ ಸಂಚಾರಕ್ಕೆ ದುಬಾರಿ ಬೆಲೆಯನ್ನು ತರಬೇಕಾಗಿದೆ ಇವೆಲ್ಲವೂ ಟೋಲ್ ರಸ್ತೆಗಳಾಗಿದೆ ನಮ್ಮ ಹಳ್ಳಿಯ ರಸ್ತೆಗಳು ಅಭಿವೃದ್ಧಿಯಾಗಿಲ್ಲ ನಮ್ಮ ರಾಜ್ಯ ಹೆದ್ದಾರಿಗಳು ಅಭಿವೃದ್ಧಿಯಾಗಿಲ್ಲ ಕಾರಣ ಈ ರಸ್ತೆಗಳಲ್ಲಿ ಟೋಲ್ ಸಂಗ್ರಹಣೆ ಆಗುವುದಿಲ್ಲ ಅದಕ್ಕಾಗಿ ಯಾವ ಗುತ್ತಿಗೆದಾರರು ಇದಕ್ಕೆ ಬಂಡವಾಳ ಹಾಕುವುದಿಲ್ಲ ಈ ಎಲ್ಲ ಟೋಲ್ ರಸ್ತೆಗಳು ಕೆಲವೇ ಕೆಲವು ವ್ಯಕ್ತಿಗಳ ಮಾಲೀಕತ್ವದ ಸಂಸ್ಥೆಗಳ ಹಿಡಿತದಲ್ಲಿದೆ
ಈ ರೀತಿಯಲ್ಲಿ ಚರ್ಚೆಗಳ ಮೂಲಕ ಅಭಿವೃದ್ಧಿಯ ವಿಚಾರಗಳು ಬಹಿರಂಗವಾಗಿ ಆಗಲು ಹತ್ತು ವರ್ಷದಲ್ಲಿ ಅಭಿವೃದ್ಧಿಯಾಗಿದೆ ಎಂದು ಸಮರ್ಥನೆ ಮಾಡುವುದಾದರೆ ಬಿಜೆಪಿಯವರು ಮತವನ್ನ ಕೇಳಲಿ ಅಭಿವೃದ್ಧಿಯನ್ನು ಮಾಡದೆ ಕೇವಲ ಪ್ರಚಾರವನ್ನೇ ಅಭಿವೃದ್ಧಿ ಎಂದು ಭಾವಿಸುವುದಾದರೆ ದಯಮಾಡಿ ಭಾರತದ ಜನತೆ ಇವರ ಸುಳ್ಳಿನ ಅಭಿವೃದ್ಧಿಯ ಮಂತ್ರಕ್ಕೆ ತಿರಸ್ಕಾರವನ್ನು ಮಾಡಬೇಕು
ಈ ಚುನಾವಣೆ ಅಭಿವೃದ್ಧಿಯೆಂಬ ಸುಳ್ಳಿನ ಕಂತೆ ಮತ್ತು ಸತ್ಯದ ಅಭಿವೃದ್ಧಿ ಇವುಗಳ ನಡುವೆ ನಡೆಯುವ ಪೈಪೋಟಿಯಾಗಿದೆ
– ಕೆ.ಎಸ್.ನಾಗರಾಜ್, ಬೆಂಗಳೂರು




