ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ನಡೆಯುತ್ತಿರುವ ಕೊಲೆ, ಸುಲಿಗೆ, ದೌರ್ಜನ್ಯ, ದಬ್ಬಾಳಿಕೆಗಳಿಗೆ ಕೊನೆಯೇ ಇಲ್ಲದಂತಾಗಿದೆ. ಮುಸ್ಲಿಂ ಗೂಂಡಾಗಳು ನಡೆಸುವ ದಬ್ಬಾಳಿಕೆ ಮತ್ತು ಹಲ್ಲೆಗೆ ರಕ್ಷಣೆ ನೀಡುವುದೇ ಕಾಂಗ್ರೆಸ್ ಗ್ಯಾರಂಟಿ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಕಾಂಗ್ರೆಸ್ ಪಕ್ಷ ನೀಡಿರುವ ಚೊಂಬು ಜಾಹೀರಾತಿನ ವಿರುದ್ಧ ಸಮರ ಸಾರಿರುವ ಬಿಜೆಪಿ ಇದೀಗ ಮಾಜಿ ಮುಖ್ಯಮಂತ್ರಿಗಳ ಮೂಲಕ ತಿರುಗೇಟು ನೀಡಿದೆ. ಯಡಿಯೂರಪ್ಪ, ಸದಾನಂದ ಗೌಡ, ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ ನಡೆಸಿ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ತುಷ್ಟೀಕರಣದ ನೀತಿಯ ಪರಿಣಾಮವಾಗಿ ಮುಸ್ಲಿಂ ಗೂಂಡಾಗಳಿಗೆ ಸರ್ಕಾರವೇ ರಕ್ಷಣೆ ಗ್ಯಾರಂಟಿ ನೀಡುತ್ತಿದೆ. ಜನರ ನೆಮ್ಮದಿಯ ಬದುಕಿಗೆ ಗ್ಯಾರಂಟಿ ಕೊಡುವವರು ಯಾರು ಎಂದು ಯಡಿಯೂರಪ್ಪ ಪ್ರಶ್ನಿಸಿದರು.
ಸರ್ಕಾರ ಸಂಪೂರ್ಣವಾಗಿ ದಿವಾಳಿಯಾಗಿದೆ. ಒಂದೇ ಒಂದು ಅಭಿವೃದ್ಧಿ ಕೆಲಸಗಳು ಕೂಡ ನಡೆಯುತ್ತಿಲ್ಲ. ಅಧಿಕಾರಕ್ಕೆ ಬಂದ ಮೇಲೆ ಒಂದು ಕಿ.ಮೀ ರಸ್ತೆ ಕೂಡ ಮಾಡಿಲ್ಲ. ನೀರಾವರಿ ಯೋಜನೆಗಳು ಸಂಪೂರ್ಣವಾಗಿ ಕುಸಿದು ಬಿದ್ದಿವೆ. ಜನರು ಎಲ್ಲೆಡೆ ಛೀಮಾರಿ ಹಾಕುತ್ತಿದ್ದಾರೆ. ಒಂದು ರೀತಿ ತುಘಲಕ್ ದರ್ಬಾರ್ ನಡೆಯುತ್ತಿದೆ ಎಂದರು.
ದರೋಡೆಕೋರರು, ಭಯೋತ್ಪಾದಕರು, ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅವರ ಬದುಕಿಗೆ ಗ್ಯಾರಂಟಿ ಇದೆಯಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಕನ್ನಡಿಗರ ಬದುಕಿಗೆ ಗ್ಯಾರಂಟಿ ಇಲ್ಲ ಎಂದರು.
ಇದು ಮನುಷ್ಯತ್ವ, ಮಾನವೀಯತೆ ಇಲ್ಲದ ಸರ್ಕಾರ. ಕಲ್ಲುಬಂಡೆಯ ಸರ್ಕಾರ. ಅಭಿವೃದ್ಧಿಯನ್ನೇ ಸಂಪೂರ್ಣವಾಗಿ ಮರೆತು ಜನವಿರೋಧಿ ಆಡಳಿತ ನಡೆಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ನೀಡುತ್ತಿರುವ ಜಾಹಿರಾತುಗಳಿಗೆ ಕವಡೆಕಾಸಿನ ಕಿಮ್ಮತ್ತಿನ ಬೆಲೆಯೂ ಇಲ್ಲ. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲಲಿದೆ ಎಂಬುದು ಕಾಂಗ್ರೆಸ್ ನಾಯಕರಿಗೆ ಗೊತ್ತಿದೆ. ಹೀಗಾಗಿ ಜನರನ್ನು ದಿಕ್ಕು ತಪ್ಪಿಸುವ ಜಾಹೀರಾತುಗಳನ್ನು ನೀಡುತ್ತಿದ್ದಾರೆ. ಇದಕ್ಕೆಲ್ಲ ಮತದಾರರು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು 20 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ನಾನು ಅವರಿಗೆ ಒಂದು ಬಹಿರಂಗ ಸವಾಲು ಹಾಕುತ್ತೇನೆ. 28 ಕ್ಷೇತ್ರಗಳಲ್ಲಿ ನೀವು ಗೆಲ್ಲಬಹುದಾದ ಕನಿಷ್ಠ 4ರಿಂದ 5 ಲೋಕಸಭಾ ಕ್ಷೇತ್ರಗಳ ಹೆಸರು ಹೇಳಿ ನೋಡೋಣ ಎಂದು ಸವಾಲು ಹಾಕಿದರು.
ನೀವು ಗ್ಯಾರಂಟಿಯಲ್ಲಿ ಗೆದ್ದೇಬಿಡುತ್ತೀರಿ ಎಂಬ ಭ್ರಮೆಯಲ್ಲಿದ್ದೀರಿ. ಆದರೆ ವಾಸ್ತವ ಚಿತ್ರಣವೇ ಬೇರೆ. ನಿಮ್ಮ ಸುಳ್ಳು ಪ್ರಚಾರಕ್ಕೆ ಜನತೆ ಮನ್ನಣೆ ನೀಡುವುದಿಲ್ಲ ಎಂದರು.
ದರೋಡೆಕೋರರು, ಭಯೋತ್ಪಾದಕರಿಗೆ ಸರ್ಕಾರವೇ ಕುಮ್ಮಕ್ಕು ನೀಡುತ್ತಿದೆ. ಸರ್ವಜನಾಂಗದ ಶಾಂತಿಯ ತೋಟವಾದ ಕರ್ನಾಟಕ ಒಂದೇ ವರ್ಷದಲ್ಲಿ ಮತಾಂಧರ ಯುದ್ಧಭೂಮಿಯಾಗಿ ಪರಿವರ್ತನೆಯಾಗಿದೆ. ಸಿದ್ದರಾಮಯ್ಯ ಸರ್ಕಾರ ಮತಾಂಧ ಶಕ್ತಿಯನ್ನು ತಮ್ಮ ಆಡಳಿತದ ಭಾಗವಾಗಿ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಸದಾನಂದಗೌಡ ಮಾತನಾಡಿ, ನಾವು ವಿಶೇಷ ಕಾಲಘಟ್ಟದಲ್ಲಿ ಇದ್ದೇವೆ. ಈ ಚುನಾವಣೆ ಭಯೋತ್ಪಾದಕ ವಿರುದ್ಧ ಮತ್ತು ಹಿಂದೂ ಧಾರ್ಮಿಕ ವಿಧಿವಿಧಾನ ವಿರುದ್ಧ ನಡೆಯುತ್ತಿದೆ. ಹಿಂದೂಗಳನ್ನು ತೃತೀಯ ದರ್ಜೆ ನಾಗರೀಕರ ತರ ನೋಡಲಾಗುತ್ತಿದೆ. ಮುಸ್ಲಿಂ ಮತಾಂಧರನ್ನು, ಭಯೋತ್ಪಾದಕರನ್ನು ಅವರ ಕಾರ್ಯವೈಖರಿ ರೀತಿ ಮಾಡಿಕೊಂಡಿದ್ದಾರೆ ಎಂದರು.
ಕುಕ್ಕರ್ ಬ್ಲಾಸ್ಟ್ ಇಂದ ಹಿಡಿದು, ಎಲ್ಲವೂ ಅವರೇ ಇದ್ದಾರೆ. ಅವರ ಪರವಾಗಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇದ್ದಾರೆ. ವಿಶ್ವಮಾನವನ ಸಂದೇಶ ನೀಡಿದ ನಾಡು ಕರ್ನಾಟಕ. ಆದರೆ ಚುನಾವಣೆ ನಡೆಸುವುದೇ ಗೂಂಡಾ ವರ್ತನೆ ರೀತಿ ಇದೆ. ಕರ್ನಾಟಕದಲ್ಲಿ ಯಾರೂ ಮಹಿಳೆಯರು ವೋಟ್ ಹಾಕಲು ಬಾರದ ರೀತಿ ವಾತಾವರಣ ಸೃಷ್ಟಿಯಾಗುತ್ತಿದೆ. ಗ್ಯಾರಂಟಿ ಯಾರಿಗೆ ಗೂಂಡಾಗಳಿಗೆ? ಹಿಂದೂಗಳ ಮೇಲೆ ಸವಾರಿ ಮಾಡುವವರಿಗಾ? ಎಂದು ಪ್ರಶ್ನಿಸಿದರು.
ನಿನ್ನೆ ಮೋದಿ ಅವರು ಬಂದಾಗ ಒಂದು ಮಾತು ಹೇಳಿದ್ದರು. ಜೀವನದ ಭರವಸೆ ನೀಡುವುದೇ ನಮ್ಮ ಗುರಿ. ಈ ಚುನಾವಣೆ ಅತ್ಯಂತ ದೊಡ್ಡ ಸಂದೇಶ ಕಳಿಸುವಂತಾಗಿರಬೇಕು. ಕರ್ನಾಟಕದ ಹಿಡಿತ ತರುವಂತೆ ಆಗ್ರಹ ಮಾಡುತ್ತೇನೆ ಎಂದರು.
ಬಸವರಾಜ ಬೊಮ್ಮಾಯಿ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಅತಿ ಹೆಚ್ಚು ಬಾರಿ ಆಡಳಿತ ನಡೆಸಿದ ಕಾಂಗ್ರೆಸ್ಗೆ ರಾಜ್ಯದ ಜನತೆಗೆ ಚೆಂಬು ಕೊಟ್ಟ ಕೀರ್ತಿ ಸಲ್ಲುತ್ತದೆ ಎಂದರು.
ಪ್ರಧಾನಮಂತ್ರಿ ಕಿಸಾನ್ ಕಲ್ಯಾಣ್ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ವರ್ಷಕ್ಕೆ ರೈತರಿಗೆ 10 ಸಾವಿರ ರೂ. ನೀಡಲಾಗುತ್ತಿತ್ತು. ಅದನ್ನು ನಿಲ್ಲಿಸಿ ಅವರ ಕೈಗೆ ಚೆಂಬು ಕೊಟ್ಟಿದ್ದು ನೀವಲ್ಲವೇ? ಎಂದು ಪ್ರಶ್ನಿಸಿದರು.
ರೈತ ವಿದ್ಯಾನಿಧಿ ನಿಲ್ಲಿಸಿರುವುದು, ಹೆಣ್ಣು ಮಕ್ಕಳಿಗೆ ಕನಿಷ್ಠಪಕ್ಷ ಶೌಚಾಲಯ ಕಟ್ಟಿಸಿಕೊಡದಿರುವುದು, ವಿವೇಕಾನಂದ ಶಾಲೆ, ಆಸ್ಪತ್ರೆ, ರಸ್ತೆ ಎಲ್ಲವನ್ನೂ ಸ್ಥಗಿತಗೊಳಿಸಿ ಕರ್ನಾಟಕ ಮತ್ತು ಕನ್ನಡಿಗರಿಗೆ ಚೆಂಬು ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ ಎಂದರು.
ಮಾಜಿ ಪ್ರಧಾನಿ ದೇವೇಗೌಡರು ಆರೂವರೆ ದಶಕದ ತಮ್ಮ ರಾಜಕೀಯ ಅನುಭವದಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. 2014ರಲ್ಲಿ ಕಾಂಗ್ರೆಸ್ ಸರ್ಕಾರ ದೇಶದ ಜನತೆಗೆ ನಿಜವಾಗಿ ಚೆಂಬನ್ನೇ ಕೊಟ್ಟಿತ್ತು. ಈಗ ಮೋದಿಯವರು ಆ ಚೆಂಬನ್ನು ಅಕ್ಷಯಪಾತ್ರೆ ಮಾಡಿದ್ದಾರೆ. ಸತ್ಯ ಹೇಳಿದ್ದಕ್ಕೆ ಕಾಂಗ್ರೆಸ್ ನಾಯಕರು ಹಿರಿಯರಾದ ದೇವೇಗೌಡರ ಬಗ್ಗೆಯೂ ಮಾತನಾಡುತ್ತಾರೆ ಎಂದರು.
ನೇರ ಮತ್ತು ಪ್ರತ್ಯಕ್ಷ ತೆರಿಗೆ ಬಗ್ಗೆ ಪ್ರಸ್ತಾಪಿಸದೆ ಕಾಂಗ್ರೆಸ್ ಸುಳ್ಳು ಜಾಹೀರಾತು ನೀಡಿದೆ. ಡೆವಲ್ಯೂಷನ್ ಫಂಡ್ ಬಗ್ಗೆ ಇದೆ. ಇದು ನೆಹರೂ ಕಾಲದಿಂದಲೂ ಈ ಟ್ಯಾಕ್ಸ್ ಇದೆ. ಈ ಬಗ್ಗೆ ಏಕೆ ಮಾತನಾಡಿಲ್ಲ ಎಂದರು.
ಚುನಾವಣೆಗೂ ಮುನ್ನವೇ ನೀವು 10 ಕೆಜಿ ಅಕ್ಕಿ ಕೊಡುತ್ತೇನೆ ಎಂದು ಹೇಳಿದ್ದೀರಿ. ಈಗ ಎಷ್ಟು ಅಕ್ಕಿ ಕೊಡುತ್ತಿದ್ದೀರಿ. ಚೆಂಬಿನ ಜಾಹೀರಾತು ಕೊಟ್ಟಿದ್ದೀರಿ. ನಿಮಗೆ ಆತ್ಮಸಾಕ್ಷಿ ಇದ್ದಿದ್ದರೆ ನಾಚಿಯಾಗಬೇಕಿತ್ತು ಎಂದರು.
ಆದರೆ ವಾಸ್ತವದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀಡಿರುವ ಚುನಾವಣಾ ಭರವಸೆಯಂತೆ 5 ಕೆಜಿ ಅಕ್ಕಿ ಕೊಡುತ್ತಿದ್ದು, ಉಳಿದ ಮೊತ್ತವನ್ನು ನೇರವಾಗಿ ಪಡಿತರ ಚೀಟಿದಾರರ ಖಾತೆಗೆ ಜಮೆ ಮಾಡುತ್ತಿದೆ. ಮಹತ್ವದ ಸಂಗತಿಯೆಂದರೆ, ರೂ. 34ರಂಗೆ ಒಂದು ಕಿಲೋ ಅಕ್ಕಿ ಖರೀದಿಗೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಿರಸ್ಕರಿಸಿತ್ತು. ಆದರೆ, ರೂ. 29 ಕೆಜಿಯಂತೆ ಭಾರತ್ ರೈಸ್ ಹೆಸರಿನಲ್ಲಿ ಅಕ್ಕಿಯನ್ನು ಮಾರಾಟ ಮಾಡುತ್ತಿತ್ತು. ಇದರ ಕುರಿತು ಭಾರೀ ಪ್ರಚಾರವನ್ನೂ ಬಿಜೆಪಿ ಮತ್ತು ಅದರ ನಾಯಕರು ಮಾಡಿದ್ದರು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಉಲ್ಲೇಖಿಸಿ ಬಿಜೆಪಿ ಮಾಡುತ್ತಿರುವ ತಪ್ಪುಗಳನ್ನು ವ್ಯಾಪಕವಾಗಿ ಖಂಡಿಸಿದ್ದರ ಪರಿಣಾಮದಿಂದಾಗಿ ಈ ವಿಷಯವನ್ನು ಬಿಜೆಪಿ ಕೈಬಿಟ್ಟಿತ್ತು.




