ಬಡವರಿಗೆ ಸೂರು ಕಲ್ಪಿಸುವ ಪ್ರಧಾನಿ ಆಶಯ ಈಡೇರಿಸುವುದು ನಮ್ಮ ಗುರಿ: ವಿ.ಸೋಮಣ್ಣ

5 years ago

ಬೆಂಗಳೂರು: ಪ್ರಧಾನಿ ನರೇಂದ್ರಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಶಯವಾದ ಬಡವರು ಸೂರು ಇಲ್ಲದೇ ಜೀವನ ಸಾಗಿಸಬಾರದು, ಶಾಶ್ವತ ಸೂರು ಪ್ರತಿಯೊಬ್ಬ ನಾಗರಿಕರಿಗೆ ಕಲ್ಪಿಸಬೇಕು ಎಂಬ ಆಶಯವನ್ನು ಈಡೇರಿಸುವ ಸುಸಮಯ ಬಂದಿದೆ ಎಂದು ವಸತಿ ಸಚಿವ ವಿ ಸೋಮಣ್ಣ ಹೇಳಿದರು.

ಎಲ್ಲ ಧರ್ಮ,ವರ್ಗದ ಜನರಿಗೆ ವಸತಿ ಸೌಲಭ್ಯ ಸಿಗಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದಲ್ಲಿ ವಸತಿ ಇಲಾಖೆ ಶರವೇಗದಲ್ಲಿ ವಸತಿ ನಿರ್ಮಾಣ ಹಂಚಿಕೆ ಮಾಡುತ್ತಿದೆ. ಕಳೆದ 40 ವರ್ಷಗಳಿಂದ ನೆನೆಗುದಿಗೆ ಬಿದ್ದಿದ ಹಕ್ಕುಪತ್ರ ನೀಡುವುದನ್ನು ಇಂದು ಬಡವರಿಗೆ ಕೊಡಮಾಡಲಾಗುತ್ತಿದೆ. ಹಕ್ಕುಪತ್ರ ಫಲಾನುಭವಿಗಳು ನೋಂದಣಿ ಶುಲ್ಕ ಸಾಮಾನ್ಯ ವರ್ಗದವರಿಗೆ 10-4 ಸಾವಿರ ಮತ್ತು ಎಸ್.ಸಿ., ಎಸ್.ಟಿ ಸಮುದಾಯದವರಿಗೆ 4-2 ಸಾವಿರಕ್ಕೆ ಇಳಿಸಲಾಗಿದೆ ಎಂದರು.

ಗೋವಿಂದರಾಜನಗರ ವಿಧಾನಸಭಾ ಬೆಂಗಳೂರಿನ ಹೃದಯಭಾಗದಲ್ಲಿ ಇದೆ. ಹಕ್ಕುಪತ್ರ ಫಲಾನುಭವಿಗಳು ಮನೆ ಮಾರಟ ಮಾಡಬೇಡಿ. ನಿಮಗೆ ಮನೆ ಮಾಲೀಕತ್ವದ ಪತ್ರ ನೀಡಲಾಗಿದೆ. ಸ್ವಂತ ಮನೆ ಇದ್ದರೆ ಸಾಕು ಸುಖ ಜೀವನ ನಡೆಸಬಹುದು ಎಂದರು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರ ಕಛೇರಿಯಲ್ಲಿ ಹಕ್ಕುಪತ್ರ ವಿತರಣೆ ಮತ್ತು ಕೊಳಚೆ ನಿರ್ಮೂಲನ ಮಂಡಳಿ ವತಿಯಿಂದ ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಮನೆ ಕಟ್ಟಲು ಅನುದಾನ ಬಿಡುಗಡೆ ಚೆಕ್ಕುಗಳನ್ನು ವಸತಿ ಸಚಿವ ವಿ.ಸೋಮಣ್ಣರವರು ಅರ್ಹ ಫಲಾನುಭವಿಗಳಿಗೆ ವಿತರಿಸಿದರು. ಈ ವೇಳೆ ಕೆ.ಉಮೇಶ್ ಶೆಟ್ಟಿ, ಗಂಗಭೈರಯ್ಯ, ರೂಪ ಲಿಂಗೇಶ್ವರ್,  ಗೋವಿಂದರಾಜನಗರ ಬಿ.ಜೆ.ಪಿ. ಮಂಡಲದ ಅಧ್ಯಕ್ಷ ವಿಶ್ವನಾಥಗೌಡ, ಸ್ಥಳೀಯ ಬಿ.ಜೆ.ಪಿ.ಮುಖಂಡರು, ಅಧಿಕಾರಿಗಳು ಹಾಜರಿದ್ದರು.

ಗೋವಿಂದರಾಜನಗರ ವಾರ್ಡ್, ದಾಸರಹಳ್ಳಿ ಮತ್ತು ಡಾ.ರಾಜ್ ಕುಮಾರ್ ವಾರ್ಡ್ ನ ನೂರಾರು ಬಡವರಿಗೆ ಹಕ್ಕುಪತ್ರ ಮತ್ತು ಮನೆ ಕಟ್ಟಲು ಚೆಕ್ಕುಗಳನ್ನು ವಿತರಿಸಲಾಯಿತು.

Leave a Reply