ತಾರಕಕ್ಕೇರಿದ ವಿಜಯೇಂದ್ರ ಪರ ಮತ್ತು ವಿರೋಧಿ ಬಣಗಳ ನಡುವಿನ ವಾಕ್ಸಮರ

2 years ago

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಪಕ್ಷದ ಅಧ್ಯಕ್ಷ ವಿಜಯೇಂದ್ರ ಪರ ಮತ್ತು ವಿರೋಧಿ ಬಣಗಳ ನಡುವಿನ ವಾಕ್ಸಮರ ತಾರಕಕ್ಕೇರಿದೆ.

ಒಂದೆಡೆ ತಮ್ಮ ನಾಯಕತ್ವದ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿರುವವರ ವಿರುದ್ಧ ವಿಜಯೇಂದ್ರ ಬೆಂಬಲಿಗರು ಕ್ರಮಕ್ಕೆ ಆಗ್ರಹಿಸಿದರೆ, ಇನ್ನೊಂದೆಡೆ ವಿಜಯೇಂದ್ರ ಪದಚ್ಯುತಿಗೆ ಒತ್ತಾಯಿಸುತ್ತಿರುವ ಬಣ‌ ಸಭೆ ನಡೆಸಲು ಸಿದ್ಧತೆ ನಡೆಸಿದ್ದಾರೆ.

ಜೊತೆಗೆ ಪಕ್ಷದ ಅಧ್ಯಕ್ಷ ವಿಜಯೇಂದ್ರ ವಿರುದ್ಧ ಸಮರ ಘೋಷಿಸುವುದಾಗಿ ಹೇಳಿರುವ ಸಂಸದ ಡಾ. ಸುಧಾಕರ್ ವಿರುದ್ಧ ವಿಜಯೇಂದ್ರ ಬಣದ ನಾಯಕರು ಮುಗಿಬಿದ್ದಿದ್ದಾರೆ. 

ಕೋವಿಡ್  ಸಮಯದಲ್ಲಿ ಸಚಿವರಾಗಿದ್ದ ಡಾ.ಕೆ.ಸುಧಾಕರ್ ನಡೆಸಿದ ಬ್ರಹ್ಮಾಂಡ ಭ್ರಷ್ಟಾಚಾರದ ಪರಿಣಾಮವಾಗಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ದಯನೀಯವಾಗಿ ಸೋಲು ಅನುಭವಿಸುವಂತಾಯಿತು ಎಂದು ಶಾಸಕ ಎಸ್. ಆರ್ ವಿಶ್ವನಾಥ್ ಗಂಭೀರ ಆರೋಪ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನೀವು ಸಚಿವರಾಗಿದ್ದಾಗ ದುರಂಹಕಾರಿ ಆಗಿರಲಿಲ್ವಾ? ಎಂದು ಸುಧಾಕರ್ ಅವರನ್ನು ಪ್ರಶ್ನಿಸಿದರು.

ಮಂತ್ರಿಯಾಗಿದ್ದ ಸಮಯದಲ್ಲಿ ಚಿಕ್ಕಬಳ್ಳಾಪುರ ‌ಜನರಿಗೆ ಸಿಗುತ್ತಿರಲಿಲ್ಲ. ನಮ್ಮ ಶಾಸಕರ ಫೋನ್ ತೆಗೀತಿರಲಿಲ್ಲ. ನಿಮಗೆ ತಾಕತ್ತಿದ್ದರೆ ಬೇರೆ ಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸಿ ಆಯ್ಕೆಯಾಗಿ ಎಂದು ಸವಾಲೆಸೆದರು.

Leave a Reply