ದಾವಣಗೆರೆ: ಹೊನ್ನಾಳಿ- ನ್ಯಾಮತಿ ಅವಳಿ ಕ್ಷೇತ್ರದಲ್ಲಿ ಅಕ್ರಮವಾಗಿ ವಕ್ಫ್ ಬೋರ್ಡ್ ಗೆ ಸರ್ಕಾರಿ ಜಾಗ ಹಾಗೂ ಗೋಮಾಳ ಜಮೀನನ್ನು ನೀಡಲಾಗಿದೆ ಎಂದು ಆರೋಪಿಸಿ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ನೇತೃತ್ವದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಸುಂಕದಕಟ್ಟೆ ಗ್ರಾಮದ ಸರ್ವೇ ನಂಬರ್ 22 ರಲ್ಲಿರುವ 8 ಎಕರೆ 11 ಗುಂಟೆ ವಕ್ಫ್ ಬೋರ್ಡ್ ಗೆ ನೀಡಿದ್ದು ಗ್ರಾಮಸ್ಥರ ಜೊತೆ ರೇಣುಕಾಚಾರ್ಯ ಪ್ರತಿಭಟನೆ ನಡೆಸಿದರು.
ಇದೇ ರೀತಿ ಒಟ್ಟು ಹೊನ್ನಾಳಿ ತಾಲೂಕಿನಲ್ಲಿ ರಾಘವೇಂದ್ರ ಸ್ವಾಮಿ ಮಠದ ಅಕ್ಕಪಕ್ಕ ಹಾಗೂ ತುಂಗಭದ್ರಾ ಸೇತುವೆ ಪಕ್ಕದಲ್ಲಿ ಮತ್ತು ಸುಂಕದಕಟ್ಟೆ ಗ್ರಾಮದಲ್ಲಿ 70 ಎಕರೆ ವಕ್ಫ್ ಬೋರ್ಡ್ ಹೆಸರಿನಲ್ಲಿ ನಕಲಿ ದಾಖಲೆಯಲ್ಲಿ ಮೂಲಕ ಒತ್ತುವರಿ ಮಾಡಲಾಗಿದೆ ಈ ಕೂಡಲೇ ಈ ಕಾಂಗ್ರೆಸ್ ಸರ್ಕಾರವು ದಾಖಲೆಯನ್ನು ರದ್ದು ಮಾಡಬೇಕೆಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ, ನರೇಂದ್ರ ಮೋದಿ ಅವರಿಗೆ ಈ ಕಪ್ಪು ಚುಕ್ಕೆ ಎಂಬ ವಕ್ಫ್ ಬೋರ್ಡ್ ಈ ಕೂಡಲೇ ರದ್ದು ಮಾಡಬೇಕೆಂದು ವಿನಂತಿಸಿದರು.




