ಕೊರೋನ ವಾರಿಯರ್ಸ್ ಗಳಿಗೆ ಆಹಾರ ಕಿಟ್ ವಿತರಣೆ
ಬೆಂಗಳೂರು: ಕೊವಿಡ್ ವಿರುದ್ದ ತಮ್ಮ ಪ್ರಾಣದ ಹಂಗು ತೊರೆದು ಜನರ ಜೀವ ರಕ್ಷಣೆಗಾಗಿ ಹಗಲಿರುಳು ಶ್ರಮಿಸಿದ ಕೊರೋನ ವಾರಿಯರ್ಸ್ ಗಳಾದ ವೈದ್ಯರು, ನರ್ಸ್ ಮತ್ತು ಆಶಾ ಕಾರ್ಯಕರ್ತೆರು, ಆಂಬುಲೆನ್ಸ್ ಚಾಲಕರು, ಲಿಂಕ್ ವರ್ಕರ್ಸ್, ಅಂಗನವಾಡಿ ಶಿಕ್ಷಕಿಯರ ಸೇವೆ ಆನನ್ಯ, ಸ್ಮರಣೀಯ. ಅವರು ಮಾನವೀಯತೆ ಸಹಕಾರ ಮೂರ್ತಿಗಳು ಎಂದು ವಸತಿ ಸಚಿವ ವಿ.ಸೋಮಣ್ಣ ಶ್ಲಾಘಿಸಿದರು.
ಗೋವಿಂದರಾಜನಗರ ವಿಧಾನಸಭಾ ಸಭಾ ಕ್ಷೇತ್ರ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ ಕೊರೋನ ವಾರಿಯರ್ಸ್ ಗಳಾದ ವೈದ್ಯರು, ನರ್ಸ್ ಮತ್ತು ಆಶಾ ಕಾರ್ಯಕರ್ತೆರು, ಲಿಂಕ್ ವರ್ಕರ್ಸ್ ಗಳಿಗೆ ದಿನಸಿ ಸಾಮಗ್ರಿಗಳ ಆಹಾರ ಕಿಟ್ ಗಳನ್ನು ವಿತರಿಸಿ ಮಾತಾಡಿದ ಅವರು, ಒಂದೂವರೆ ವರ್ಷದಿಂದ ಕೊವಿಡ್ ನಿಂದ ಲಕ್ಷಾಂತರ ಕುಟುಂಬಗಳು ಸಂಕಷ್ಟ ಎದುರಿಸಬೇಕಾಯಿತು. ಇಂತಹ ಸಂದರ್ಭದಲ್ಲಿ ಜನರ ಜೀವ ರಕ್ಷಣೆಗಾಗಿ ವೈದ್ಯೋ ನಾರಾಯಣೋ ಹರಿಃ ಎಂಬಂತೆ ವೈದ್ಯರು ರೋಗಿಗಳ ಪಾಲಿಗೆ ದೇವರಂತೆ ಚಿಕಿತ್ಸೆ ನೀಡಿದರು ಎಂದರು.
ರಾಜ್ಯ ಸರ್ಕಾರದಿಂದ ಕೊವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತಿದೆ. ಕೊರೋನ ಮೂರನೇ ಅಲೆ ಬಗ್ಗೆ ಮುಂಜಾಗ್ರತೆ ವಹಿಸಲಾಗಿದೆ. ಎಂ.ಸಿ.ಲೇಔಟ್ ನಲ್ಲಿ 200ಬೆಡ್, ಪಂತರಪಾಳ್ಯದಲ್ಲಿ 150 ಬೆಡ್ ಮತ್ತು ನಾಗರಬಾವಿಯಲ್ಲಿ 100 ಬೆಡ್ ಕೊವಿಡ್ ಸೋಂಕಿತರಿಗೆ ಚಿಕಿತ್ರೆಗಾಗಿ ಆಸ್ಪತ್ರೆ ಆರಂಭಿಸಲಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಬಡವರ ಸಂಕಷ್ಟಕ್ಕೆ ನೆರವಾಗಲು 1 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ನವಂಬರ್ ವರೆಗೆ ಉಚಿತವಾಗಿ ಅಕ್ಕಿ ವಿತರಿಸಲಾಗುತ್ತಿದೆ. ಸಾರ್ವಜನಿಕರು ಕೊವಿಡ್-19 ಲಸಿಕೆ ಪಡೆದುಕೊಳ್ಳಿ. ಕೊವಿಡ್ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲರು ಸಹಕಾರಿಸಬೇಕು ಎಂದರು.
ರಾಜ್ಯ ಬಿ.ಜೆ.ಪಿ. ಯುವ ಮೋರ್ಚಾ ಮುಖಂಡ ಡಾ. ಅರುಣ್ ಸೋಮಣ್ಣ ಮತ್ತು ನಿಕಟಪೂರ್ವ ಬಿ.ಬಿ.ಎಂ.ಪಿ. ಸದಸ್ಯರಾದ ಕೆ.ಉಮೇಶ್ ಶೆಟ್ಟಿ, ಮೋಹನ್ ಕುಮಾರ್, ವಾಗೀಶ್, ರಾಮಪ್ಪ ದಾಸೇಗೌಡ, ಶಂಕುತಲ ದೊಡ್ಡಲಕ್ಕಪ್ಪ ಹಾಗೂ ಗೋವಿಂದರಾಜನಗರ ಬಿ.ಜೆ.ಪಿ. ಮಂಡಲದ ಅಧ್ಯಕ್ಷ ವಿಶ್ವನಾಥಗೌಡ ಹಾಗೂ ಬಿ.ಜೆ.ಪಿ. ಮುಖಂಡ ಉಮಾಶಂಕರ್, ಕೊಳಚೆ ನಿರ್ಮೂಲನ ಮಂಡಳಿ ನಿರ್ದೇಶಕ ಕ್ರಾಂತಿರಾಜು ಪಾಲ್ಗೊಂಡಿದ್ದರು.



