ನಿರಂತರ ಅಪಪ್ರಚಾರ ಸುಳ್ಳು ಆರೋಪಗಳಿಗೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ: ಸಿದ್ದರಾಮಯ್ಯ

1 year ago

ಬೆಂಗಳೂರು: ತಮ್ಮ ಹಾಗೂ ತಮ್ಮ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮಾಡಿದ ನಿರಂತರ ಅಪಪ್ರಚಾರ ಸುಳ್ಳು ಆರೋಪಗಳಿಗೆ ಮತದಾರ ತಕ್ಕ ಉತ್ತರ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಫಲಿತಾಂಶ ಹೊರಬಿದ್ದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿರಂತರ ಅಪಪ್ರಚಾರ, ಸುಳ್ಳು ಆರೋಪಗಳನ್ನು ಮೆಟ್ಟಿನಿಂತು ನಾವು ಸಾಧಿಸಿರುವ ಈ ಗೆಲುವು ದಿಗ್ವಿಜಯವಾಗಿ ಕಾಣುತ್ತಿದೆ ಗೆಲುವು ನಮ್ಮ ಸರ್ಕಾರದ ಮೇಲಿನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಜನರಿಗಾಗಿ ದುಡಿಯುವ ನಮ್ಮ ಸಂಕಲ್ಪಕ್ಕೆ ಚುನಾವಣಾ ಫಲಿತಾಂಶ ಇನ್ನಷ್ಟು ಬಲ ತುಂಬಿದೆ ಎಂದರು.

ಬಿಜೆಪಿಯವರು ಮೂರು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಅಂತಿದ್ದರು. ಅವರು ನಮ್ಮ ಸರ್ಕಾರದ ಮೇಲೆ ಸುಳ್ಳು ಆರೋಪ, ಪಂಚ ಗ್ಯಾರಂಟಿ ಬಗ್ಗೆ ಅಪಪ್ರಚಾರ ಮಾಡಿದ್ದರು. ವಾಲ್ಮೀಕಿ ಹಗರಣ, ಮುಡಾ ಸೈಟ್ ಹಂಚಿಕೆ ಹಗರಣ ವಿಚಾರವಾಗಿ ಸಿದ್ದರಾಮಯ್ಯ ಮೇಲೆ ಆರೋಪ ಮಾಡಿದ್ದರು. ಪಾತ್ರ ಏನೂ ಇಲ್ಲವೆಂದರೂ ನನ್ನ ಮೇಲೆ ಆರೋಪ ಮಾಡಿದ್ದರು. ವಕ್ಫ್ ಆಸ್ತಿ ವಿಚಾರದಲ್ಲಿ ಕೋಮುವಾದ ಸೃಷ್ಟಿಸಲು ಯತ್ನಿಸಿದರು ಎಂದರು.

ಗ್ಯಾರಂಟಿ ಯೋಜನೆ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಮೋದಿಯವರು ಗ್ಯಾರಂಟಿಗಳನ್ನು ತಪ್ಪು ಹಣಕಾಸು ಕಾರ್ಯಕ್ರಮ ಅಂದರು. ಅದನ್ನು ಅವರು ಮಹಾರಾಷ್ಟ್ರದಲ್ಲಿ ಘೋಷಣೆ ಮಾಡಿದರು. ನಮ್ಮ ವಿರುದ್ಧ ಮಹಾರಾಷ್ಟ್ರದಲ್ಲಿ ಜಾಹೀರಾತು ನೀಡಿದರು. ಜಾರಿಯೇ ಮಾಡಿಲ್ಲ ಅಂತ ಸುಳ್ಳು ಜಾಹೀರಾತು ನೀಡಿದ್ದರು. 700 ಕೋಟಿ ರೂ. ಅಬಕಾರಿ ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು. ಹಾಗಾಗಿದ್ದರೆ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಅಂದಿದ್ದೆ. ದ್ವೇಷದ ರಾಜಕಾರಣ ಮಾಡಬಾರದು. ಸುಳ್ಳು ಆರೋಪ, ಅಪಪ್ರಚಾರ ಮಾಡಬಾರದು. ಇದಕ್ಕೆಲ್ಲ ರಾಜ್ಯದ ಜನರು ತಕ್ಕ ಉತ್ತರ ಕೊಟ್ಟಿದ್ದಾರೆ ಎಂದರು.

ದೇವೇಗೌಡರು ಸಿದ್ದರಾಮಯ್ಯರ ಸೊಕ್ಕು, ಗರ್ವ ಭಂಗ ಮಾಡಬೇಕು ಅಂದಿದ್ದರು. ಕಾಂಗ್ರೆಸ್ ಅನ್ನು ಕಿತ್ತು ಒಗೆಯಿರಿ ಅಂದಿದ್ದರು. ಮಾಜಿ ಪ್ರಧಾನಿಯಾಗಿದ್ದವರು ಈ ತರ ಆರೋಪ ಮಾಡಿದರು ಅಂತ ನನಗೆ ಬೇಸರವಾಗಿದೆ. ಅವರ ಜೊತೆ ನಾನು ಬಹಳ ದಿನ ಇದ್ದೆ. ಗೊತ್ತಿದ್ದು ಈ ರೀತಿ ಮಾತನಾಡಿದ್ದಾರೆ. ನಾನು ಅಧಿಕಾರದಲ್ಲಿದ್ದಾಗಲೂ ಒಂದೇ ತರ ಇರುತ್ತೇನೆ. ಇಲ್ಲದಿದ್ದಾಗಲೂ ಒಂದೇ ತರ ಇರುತ್ತೇನೆ. ನಾನು ಎರಡು ಬಾರಿ ಸಿಎಂ ಆಗಿದ್ದೆ. 40 ವರ್ಷಕ್ಕೂ ಅಧಿಕ ಕಾಳ ರಾಜಕಾರಣದಲ್ಲಿದ್ದೇನೆ. ಯಾವತ್ತೂ ಕೂಡ ದುರಂಹಕಾರ ಮಾಡಿಲ್ಲ. ಗರ್ವದಿಂದ ವರ್ತಿಸಿಲ್ಲ ಎಂದರು.

ಗ್ಯಾರಂಟಿ ಯೋಜನೆ ಕೈ ಹಿಡಿದಿದ್ದಕ್ಕೆ ನಾವು ಗೆದ್ದಿದ್ದೇವೆ. ಜನತಾ ನ್ಯಾಯಾಲಯ ನ್ಯಾಯ ನೀಡಿದೆ. ಕಾಂಗ್ರೆಸ್ ಸಿದ್ದಾಂತಕ್ಕೆ ಎಲ್ಲ ಜಾತಿ, ಬಡವರು ಮತ ಹಾಕಿದ್ದಾರೆ. ಇದು ಸಿದ್ದರಾಮಯ್ಯರ ಗೆಲುವಲ್ಲ. ಇದು ಕಾಂಗ್ರೆಸ್ ಸರ್ಕಾರದ ಗೆಲುವು. ಬೊಮ್ಮಾಯಿ ಸೋತುಬಿಟ್ಟು, ಈಗ ಕಾಂಗ್ರೆಸ್ ದುಡ್ಡು ಖರ್ಚು ಮಾಡಿದರು ಅಂದರೆ ಹೇಗೆ? ಅಪಪ್ರಚಾರ ಮತ್ತು ಅವರ ಸುಳ್ಳು ಆರೋಪಕ್ಕೆ ಜನ ಉತ್ತರ ನೀಡಿದ್ದಾರೆ. ಜನ ನಮ್ಮ ಅಭಿವೃದ್ಧಿ ಕೆಲಸಕ್ಕೆ, ಸಿದ್ದಾಂತಕ್ಕೆ, ಕೋಮುವಾದದ ವಿರುದ್ಧ ಜನ ಮತ ಹಾಕಿದ್ದಾರೆ. ಈ ಫಲಿತಾಂಶ ಕಾಂಗ್ರೆಸ್ ಸರ್ಕಾರಕ್ಕೆ ಬಲ ನೀಡಿದೆ. ಇದು ಸಾಮೂಹಿಕವಾದ ಪ್ರಯತ್ನ ಎಂದರು.

Leave a Reply