ಬೆಂಗಳೂರು: ಆಡಳಿತ ಯಂತ್ರ ದುರುಪಯೋಗ ಹಣ ಮತ್ತು ಆಮಿಷಗಳ ಮೂಲಕ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ ಎಂದು ಹೇಳಿರುವ ಬಿಜೆಪಿ ಈ ಚುನಾವಣೆಯ ಫಲಿತಾಂಶ ನಮಗೆ ನಿರಾಸೆ ತಂದಿದೆ ಎಂದು ವ್ಯಾಖ್ಯಾನಿಸಿದೆ.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಫಲಿತಾಂಶ ಹೊರ ಬಿದ್ದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆಯ ವಿಪಕ್ಷ ನಾಯಕ ಆರ್ ಅಶೋಕ್, ಜನರ ತೀರ್ಪಿಗೆ ತಲೆಬಾಗುತ್ತೇವೆ. ಗೆಲ್ಲುವುದಕ್ಕೆ ಕಾರಣವಿದ್ದಂತೆ ಸೋಲಿಗೂ ಕಾರಣವಿದೆ. ಉಪ ಚುನಾವಣೆ ಫಲಿತಾಂಶ ನಮ್ಮ ನಿರೀಕ್ಷೆಗೆ ತಕ್ಕಂತೆ ಬಂದಿಲ್ಲ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಹಣದ ಹೊಳೆಯನ್ನೇ ಹರಿಸಿದೆ ಎಂದರು.
ಅಭ್ಯರ್ಥಿಯನ್ನು ಕೊನೆಗಳಿಗೆಯಲ್ಲಿ ತೀರ್ಮಾನ ಮಾಡಿದ್ದೆವು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಹೆಚ್. ಡಿ ಕುಮಾರಸ್ವಾಮಿ ಇಬ್ಬರೂ ತಮ್ಮ ಮಕ್ಕಳನ್ನು ಚುನಾವಣೆಗೆ ನಿಲ್ಲಿಸುವುದಿಲ್ಲ ಎಂದಿದ್ದರು. ಅದೂ ಕೂಡ ಮೈನಸ್ ಪಾಯಿಂಟ್ ಆಯಿತು. ಸಂಡೂರಿನಲ್ಲಿ ಉತ್ತಮ ಫೈಟ್ ಕೊಟ್ಟಿದ್ದಾರೆ ಎಂದರು.
ಭ್ರಷ್ಟಾಚಾರ, ಗ್ಯಾರಂಟಿ ವೈಫಲ್ಯ ಆರೋಪ ಇದ್ದರೂ ಜನ ಬೆಂಬಲ ಅವರಿಗೆ ಸಿಕ್ಕಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ನ ಪಾಪದ ಕೊಡ ತುಂಬಿಲ್ಲ. ಪಾಪದ ಕೊಡ ತುಂಬಲಿ, ಅವನತಿಗೆ ಹೋಗುತ್ತದೆ. ಇದು ಸಿಎಂ ಸಿದ್ದರಾಮಯ್ಯ ಅವರ ಗೆಲುವೂ ಅಲ್ಲ, ಡಿಸಿಎಂ ಡಿ. ಕೆ ಶಿವಕುಮಾರ್ ಗೆಲುವೂ ಅಲ್ಲ. ಇದು ಕಾಂಚಾಣದ ಗೆಲುವು ಎಂದರು.
ಕಾಂಗ್ರೆಸ್ನ ಭ್ರಷ್ಟಾಚಾರ ಬಯಲಿಗೆ ಎಳೆಯುತ್ತೇವೆ. ಈ ಗೆಲುವಿನಿಂದ ಕಾಂಗ್ರೆಸ್ಗೆ ಕಿರೀಟ ಬಂದಿಲ್ಲ. ಹಣ, ಅಧಿಕಾರ ದುರ್ಬಳಕೆ ಮಾಡಿ ಗೆದ್ದಿದ್ದಾರೆ. ಇದರಲ್ಲಿ ಕಾಂಗ್ರೆಸ್ನ ಚಮತ್ಕಾರ ಏನೂ ಇಲ್ಲ. ಚುನಾವಣಾ ತಯಾರಿಯನ್ನ ನಾವು ಇನ್ನಷ್ಟು ಬೇಗ ಮಾಡಬೇಕಿತ್ತು. ಎಲ್ಲವನ್ನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಎದೆಗುಂದುವುದು ಬೇಡ. ಸೋಲನ್ನೇ ಗೆಲುವಾಗಿಸುವ ಶಕ್ತಿ ನಮಗಿದೆ ಎಂದರು.




