ವರ್ಣ ಮತ್ತು ಜಾತಿಪದ್ಧತಿಯನ್ನು ತಿರಸ್ಕರಿಸಬೇಕು: ಮೋಹನ್ ಭಾಗವತ್

4 years ago

ಮುಂಬೈ: ವರ್ಣ ಮತ್ತು ಜಾತಿಯಂತಹ ಪದ್ಧತಿಗಳನ್ನು ತಿರಸ್ಕರಿಸಬೇಕು ಎಂದು ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.

ನಾಗಪುರದಲ್ಲಿ ನಡೆದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ಜಾತಿಪದ್ಧತಿ ಇಂದು ಪ್ರಸ್ತುತ ಅಗತ್ಯವಿಲ್ಲ ಎಂದರು.

ಮೂಲದಲ್ಲಿ ವರ್ಣ ಮತ್ತು ಜಾತಿ ವ್ಯವಸ್ಥೆಯಲ್ಲಿ ತಾರತಮ್ಯವಿರಲಿಲ್ಲ. ಈಗ ಇದರ ಕುರಿತು ಯಾರಾದರೂ ಕೇಳಿದರೆ, ಇದು ಭೂತಕಾಲದ್ದು, ಅದನ್ನು ಮರೆತುಬಿಡಿ. ಯಾವುದೆಲ್ಲ ತಾರತಮ್ಯಕ್ಕೆ ಕಾರಣವಾಗುತ್ತದೆಯೋ ಅವನ್ನು ತೊರೆಯಬೇಕು ಎಂದರು.

ಹಿಂದಿನ ತಲೆಮಾರುಗಳು ಎಲ್ಲೆಡೆ ಕೆಲವು ತಪ್ಪುಗಳನ್ನು ಮಾಡಿವೆ. ಭಾರತ ಕೂಡ ಇದರಿಂದ ಹೊರತಲ್ಲ. ತಪ್ಪುಗಳನ್ನು ಒಪ್ಪಿಕೊಳ್ಳುವುದರಲ್ಲಿ ಸಮಸ್ಯೆ ಇಲ್ಲ. ತಪ್ಪು ಒಪ್ಪಿಕೊಳ್ಳುವುದರಿಂದ ನಮ್ಮ ಪೂರ್ವಜರಿಗೆ ಕುಂದುಂಟಾಗುವುದಿಲ್ಲ ಎಂದರು.

Leave a Reply