ನಿಮ್ಮ ದುಡಿಮೆ ಹಣ ಆಸ್ತಿ ಸಂಪತ್ತಿಗೆ ಕಾರಣ ವರಮಹಾಲಕ್ಷ್ಮಿಯೋ ಬಾಬಾ ಸಾಹೇಬ್ ಅಂಬೇಡ್ಕರರೋ?

3 years ago

#Varamahalakshmi #BabaSaheb #Ambedkar #reason #work #money #property #wealth #haramahesh

ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುತ್ತಿರುವ OBC, SC, ST ಬಾಂಧವರೇ ಹಾಗೂ ಹಿಂದೂ ಎಂದುಕೊಂಡಿರುವ (ಬ್ರಾಹ್ಮಣ) ಮಹಿಳಾ ಬಂಧುಗಳೇ… ಇಂದಿನ ನಿಮ್ಮ ಶಿಕ್ಷಣ, ಉದ್ಯೋಗ, (Govt or Private or Business) Salary Income ಹಣ, Bank Balance, ಮನೆ, ಒಡವೆ , ಸೈಟು,ಜಮೀನು ಸ್ಕೂಟರ್, ಕಾರು, ಅಧಿಕಾರ, ಗೌರವ ,ಸ್ವಾತಂತ್ರ್ಯ ಸ್ವಾಭಿಮಾನ, ಹಕ್ಕು, ಇವುಗಳೆಲ್ಲವೂ ಯಾರಿಂದ ಯಾರ ಹೋರಾಟದಿಂದ ಲಭಿಸಿದ್ದು..!!?

ಈಗ ನೀವು ವರುಷ ವರುಷವೂ ಪೂಜೆ ಮಾಡಲೊರಟಿರುವ ಫೋಟೋದಲ್ಲಿರುವ ಅಥವಾ ವಿಗ್ರಹರೂಪದಲ್ಲಿರುವ ಆ ವರಮಹಾಲಕ್ಷ್ಮಿಯಿಂದಲೋ ಅಥವಾ ನೀವು ಒಂದು ದಿನವೂ ಪೂಜೆ ಮಾಡಿ ಬೇಡದಿದ್ದರೂ ನಿಮಗಾಗಿ ಎಡಬಿಡದೆ ಅನ್ನ ನೀರು ಆರೋಗ್ಯ ತೊರೆದು ಹಗಲಿರುಳು ಹೋರಾಡಿ ಸಂವಿಧಾನಾತ್ಮಕವಾಗಿ ಕಾನೂನಾತ್ಮಕವಾಗಿ ಎಲ್ಲವನ್ನೂ ಗಳಿಸಿಕೊಟ್ಟಿರುವ ಪರಮಪೂಜ್ಯ ಬಹುಜನ ವಿಮೋಚಕ ಬಾಬಾಸಾಹೇಬ್ ಅಂಬೇಡ್ಕರರಿಂದಲೋ…!!?

OBC, SC, ST ಹಾಗೂ ಮಹಿಳೆಯರೇ, ಶಿಕ್ಷಣ ಗೌರವಯುತ ಉದ್ಯೊಗಗಳಿಲ್ಲದೆ ಭೂಮಿ ಸಂಪತ್ತು ಆಸ್ತಿಹೊಂದುವ ಹಕ್ಕಿಲ್ಲದೆ ಪುಡಿಗಾಸಿಗೂ ಗತಿಯಿಲ್ಲದೆ ಹಂದಿ ನಾಯಿಗಳಿಂತ ಕೀಳಾಗಿ ಗುಲಾಮರಾಗಿ ಶತಶತಮಾನಗಳಿಂದ ನರಳುತ್ತಿದ್ದ ನಮಗೆ 1818ರಲ್ಲಿ ಯುದ್ಧ ಗೆದ್ದು ಮಹರ್ ಸೈನಿಕರು ಬ್ರಿಟಿಷರಿಗೆ ಶಿಫಾರಸು ಮಾಡಿ ನಮಗೆ ಶಿಕ್ಷಣ ಕೊಡಿಸಿರದಿದ್ದರೆ, ಇದಕ್ಕೆ ಮಣಿದು ಗೌರವಿಸಿ ಒಪ್ಪಿ ಬ್ರಿಟಿಷರು 1837ರಲ್ಲಿ ಲಾರ್ಡ್ ಮೆಕಾಲೆಯು ಭಾರತೀಯರೆಲ್ಲರಿಗೂ ಸಾರ್ವತ್ರಿಕ ಶಿಕ್ಷಣ ಪದ್ಧತಿ ಘೋಷಿಸದಿದ್ದರೆ, ಇದರ ಲಾಭ ಪಡೆದು ಮೊಟ್ಟಮೊದಲು 1848 ರಲ್ಲಿ OBC ಸಮುದಾಯದ (ಹೂಗಾರ) ಜ್ಯೋತಿ ಬಾಫುಲೆ, ಸಾವಿತ್ರಿಫುಲೆ. ಈ ದಂಪತಿ ಶಿಕ್ಷಣ ಕಲಿತು ಕಲಿಸದಿದ್ದರೆ.., 1902ರಲ್ಲಿ OBC ಸಮುದಾಯದ ಶಾಹುಮಹಾರಾಜರು (ಕುರುಬ) ಮತ್ತು 1920 ರಲ್ಲಿ OBC ಸಮುದಾಯದ ನಾಲ್ವಡಿ ಕೃಷ್ಣರಾಜ ಒಡೆಯರು OBC, SC, ST ಹಾಗೂ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿರದಿದ್ದರೆ, ಈ ಎಲ್ಲಾ ಬಹುಜನ ಪೂರ್ವಿಕರ ಹೋರಾಟದ ರಥವನ್ನು ರಾಷ್ಟ್ರಮಟ್ಟದಲ್ಲಿ ಸಮರ್ಥವಾಗಿ ಏಕಾಂಗಿ ಎಳೆದು ತಂದು 1916 ರಿಂದ 1956 ರ ವರೆಗೆ ಸತತ 40 ವರ್ಷಗಳು ಎಂಥೆಂಥ ಆರೋಪ ಅವಮಾನ ವಿರೋಧ ಅಡೆತಡೆಗಳು ಬಂದರೂ ಹೆದರದೆ ಎದೆಗುಂದದೆ ಎಲ್ಲ ಹಕ್ಕು ಅಧಿಕಾರಗಳನ್ನು ಸಂವಿಧಾನದಲ್ಲಿ ಅಡಕಗೊಳಿಸಿ ಭೂಮಿ ಇರುವವರೆಗೂ ಅದನ್ನು ನಾವೆಲ್ಲಾ ಅನುಭವಿಸುವಂತೆ ಮಾಡಿದ ಬಾಬಾಸಾಹೇಬರು ಸಂವಿಧಾನ ಬರೆಯದೇ ಹೋಗಿದ್ದರೆ ನಾವು ನೀವು ಇಂದು ಈ ಸ್ಥಿತಿಯಲ್ಲಿರುತ್ತಿರುತ್ತಿದ್ದೆವೇ…!?

OBC ಒಕ್ಕಲಿಗ ಒಕ್ಕಲಗಿತ್ತಿ ಹೊಲ ಉಳುತ್ತಾ ನಿಂತಿರಬೇಕಿತ್ತು, OBC ಲಿಂಗಾಯತರು ಓದುಬರಹವಿಲ್ಲದೆ ಭೂಮಿ ನಂಬಿ ಬದುಕಬೇಕಿತ್ತು, OBC ಕುರುಬರು ಕುರಿಕಾಯುತ್ತಾ, SC, STಗಳು ತಲೆಮೇಲೆ ಮಲಹೊರುತ್ತಾ ಚರಂಡಿ ಬಳಿಯುತ್ತಾ ನಿಂತಿರಬೇಕಿತ್ತು. ಹೀಗೆ ಆರು ಸಾವಿರ ಜಾತಿಗಳವರಿಗೂ ವಹಿಸಿದ್ದ ಕಸುಬನ್ನು ತಬ್ಬಿಕೊಂಡು ಜೀವಿಸಬೇಕಿತ್ತು. ನಮ್ಮ ಪೂರ್ವಿಕರು ಹೀಗೆ ಶತಮಾನಗಳಿಂದ ನೋವು ಅನುಭವಿಸಿ ಏನೇನೂ ಗತಿ ಇರದೆ ನಿಂತಿದ್ದಾಗ ಈ ವರಮಹಾಲಕ್ಷ್ಮಮ್ಮ ಎಲ್ಲಿ ಹೋಗಿದ್ದರು..!? ನಮ್ಮ ತಾತ ಮುತ್ತಾತ ಮುತ್ತಜ್ಜಿ ಶಿಕ್ಷಣವಿಲ್ಲದೆ ಉದ್ಯೋಗವಿಲ್ಲದೆ ಹಕ್ಕುಅಧಿಕಾರಗಳಿಲ್ಲದೆ ಹುಟ್ಟಿದ ಜಾತಿಯ ಕಸುಬಿಗಂಟಿಕೊಂಡು ಪುಡಿಗಾಸಿಗಾಗಿ ಹಗಲುರಾತ್ರಿ ಕಷ್ಟಪಡುವಾಗ ನಮ್ಮೀ ವರಮಹಾಲಕ್ಷ್ಮಮ್ಮನವರು ಈಗಿರುವಂತೆ ಆಗಲೂ ಮಂದಸ್ಮಿತೆಯಾಗಿ ಸೀರೆ ಉಟ್ಟು ಫೋಟೋದಲ್ಲಿ ಚಿನ್ನಹಣ ಉದುರಿಸುತ್ತಾ ಕೂತಿದ್ದರು..!

ಕೊಂಚ ಯೋಚಿಸಿ ಆಲೋಚಿಸಿ ಮೌಢ್ಯದಿಂದ ಹೊರಬಂದು ಮುಂದಿನ ಪೀಳಿಗೆಗೆ ಸತ್ಯವನ್ನು ಹೇಳಿಕೊಡಿ.. ನಂಬಿಕೆ ಸಂಪ್ರದಾಯದ ಹೆಸರಿನಲ್ಲಿ ನಿಜ ಇತಿಹಾಸವನ್ನು ಕಾಲಲ್ಲೊದೆದು ಈ ವಿಜ್ಞಾನ ತಂತ್ರಜ್ಞಾನ ಯುಗದಲ್ಲಿಯೂ ಇಂಥ ಮೌಢ್ಯವನ್ನೇ ಆರಾಧಿಸುತ್ತಿರುವ ನಮ್ಮ ದೇಶ ಉದ್ಧಾರವಾಗುವುದೇ..? ನಾವು ನಾಗರೀಕರೇ..!? ನಾವು ಕೃತಜ್ಞರೇ.!?

ನಿಮ್ಮ ವಿವೇಚನೆಗೆ ಬಿಟ್ಟಿದ್ದು.

  • ಹ.ರಾ.ಮಹೇಶ್, ಸಾಮಾಜಿಕ ಹೋರಾಟಗಾರರು

Leave a Reply