ಜಿಲ್ಲಾಧಿಕಾರಿಗಳಿಗೆ ನ್ಯಾಯಾಂಗ ಅಧಿಕಾರ ನೀಡುವುದು ಅನ್ಯಾಯ

1 year ago

ಹುಬ್ಬಳ್ಳಿ: ಫೆಬ್ರವರಿ 13ನೇ ತಾರೀಖಿನಂದು ಸಂಸತ್ತಿನ ಉಭಯ ಸದನಗಳಲ್ಲಿ ವಕ್ಫ್ ತಿದ್ದುಪಡಿ ಮಸೂದೆ 2024 ಯ ಮಂಡನೆಯನ್ನು ವಿರೋಧಿಸಿ ಸೋಷಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕರ್ನಾಟಕ ರಾಜ್ಯ ಸಮಿತಿಯ ವತಿಯಿಂದ ದಿನಾಂಕ ಫೆಬ್ರವರಿ 25, 2025 ರಂದು ಹುಬ್ಬಳ್ಳಿಯ ಸಯ್ಯದ್ ಫತೇ ಷಾ ವಲಿ ದರ್ಗಾ ಮಾರುತಿ ನಗರ ರಸ್ತೆ ಹೆಗ್ಗೇರಿಯಲ್ಲಿ ವಕ್ಫ್ ಸಂರಕ್ಷಣಾ ಸಮಾವೇಶ ವನ್ನು ಆಯೋಜಿಸಲಾಗಿದೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಸ್ ಡಿ ಪಿ ಐ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ, ಈ ಮಸೂದೆಗೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿ ಈ ಮಸೂದೆ ಅಸಾಂವಿಧಾನಿಕ ಮಾತ್ರವಲ್ಲದೇ ವಕ್ಫ್ ಸಂಪತ್ತನ್ನು ಕಳಿಸುವ ಕೋಮುವಾದಿ ಸರ್ಕಾರದ ಹುನ್ನಾರ. ಜಿಲ್ಲಾಧಿಕಾರಿಗಳಿಗೆ ನ್ಯಾಯಾಂಗ ಅಧಿಕಾರ ನೀಡುವುದು – ಇದು ಸಂಪೂರ್ಣವಾಗಿ ಅನ್ಯಾಯಕರ ಮತ್ತು ಸಂವಿಧಾನ ವಿರೋಧಿ ಎಂದು ಹೇಳಿದರು.

ಜಂಟಿ ಸದನ ಸಮಿತಿಯ ಮುಂದೆ ವಿರೋಧ ಪಕ್ಷದ ಸದಸ್ಯರು ಮಂದಿಟ್ಟ 44 ತಿದ್ದುಪಡಿಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿ ಆಡಳಿತ( NDA) ಸದಸ್ಯರು ಮುಂದಿಟ್ಟ 14 ತಿದ್ದುಪಡಿಗಳನ್ನು ಮಾತ್ರ ಅಂಗೀಕರಿಸಿ 13ನೇ ಲೋಕಸಭೆಯಲ್ಲಿ ಮಂಡಿಸಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ಕಟುವಾಗಿ ವಿರೋಧಿಸುತ್ತದೆ. ಈ ಮಸೂದೆ ಪಕ್ಷಪಾತದಿಂದ ಕೂಡಿದ್ದು, ಅಸಾಂವಿಧಾನಿಕ ಮತ್ತು ಮುಸ್ಲಿಂ ವಿರೋಧಿಯಾಗಿದೆ. ಮುಸ್ಲಿಂ ಸಮುದಾಯದ ಸಂಘಟನೆಗಳ, ಜನ ಪ್ರತಿನಿಧಿಗಳ ಅಭಿಪ್ರಾಯವನ್ನು ಪರಿಗಣಿಸದೇ ಮಂಡಿಸಲು ಉದ್ದೇಶಿಸಿರುವ ಈ ಮಸೂದೆ ಕೇವಲ ವಕ್ಫ್ ಆಸ್ತಿಗಳ ಬಗ್ಗೆ ಅಲ್ಲ; ಇದು ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಗುರುತನ್ನು ಅಳಿಸಲು ನಡೆಸುವ ದಾಳಿಯಾಗಿದೆ ಎಂದರು.

ಇದರ ವಿರುದ್ಧ ಎಸ್ಡಿಪಿಐ ಈಗಾಗಲೇ ದೇಶದಾದ್ಯಂತ ಪ್ರತಿಭಟನೆಗೆ ಎಸ್ಡಿಪಿಐ ಕರೆ ನೀಡಿದೆ. ಈ ಮಸೂದೆಯನ್ನು ಹಿಂದಕ್ಕೆ ತೆಗೆದುಕೊಳ್ಳದಿದ್ದರೆ, ದೇಶದಾದ್ಯಂತ CAA, NRC ಮಾದರಿಯ ಭಾರಿ ಪ್ರತಿಭಟನೆಗಳು ನಡೆಯಲಿವೆ ಎಂದು ಒಕ್ಕೂಟ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ನಾವು ಇಂದು ಇಲ್ಲಿ ಸೇರಿರುವುದು ಭಾರತದ ಮುಸ್ಲಿಂ ಸಮುದಾಯದ ಸಂವಿಧಾನಿಕ ಹಕ್ಕುಗಳು ಮತ್ತು ವಕ್ಫ್ ಆಸ್ತಿಗಳ ರಕ್ಷಿಸುವ ಬಗ್ಗೆ ಅಲ್ಲ. ಮೋದಿ ಸರ್ಕಾರ ಈ ಮಸೂದೆಯ ಮೂಲಕ ವಕ್ಫ್ ಬೋರ್ಡ್ ಮೇಲೆ ಹಿಂದುತ್ವ ಆದರ್ಶಗಳನ್ನು ಬಲಾತ್ಕಾರವಾಗಿ ಹೇರಲು ಯತ್ನಿಸುತ್ತಿದೆ, ಇದು ಧಾರ್ಮಿಕ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಗೆ ವಿರುದ್ಧವಾದದ್ದು ಎಂದರು.

ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಮಂಡಿಸಿರುವ ವಕ್ಫ್ ತಿದ್ದುಪಡಿ ಮಸೂದೆ 2025 ಭಾರತದ ಸಂವಿಧಾನದ ವಿರುದ್ಧವಿದ್ದು ಮತ್ತು ಕೇಂದ್ರ ಸರ್ಕಾರ ಅಲ್ಪಸಂಖ್ಯಾತ ಮುಸಲ್ಮಾನರ ಅಭಿವೃದ್ಧಿಗೆ ಆ ಸಮಾಜದ ಶ್ರೀಮಂತರು ದಾನವಾಗಿ ನೀಡಿದಂತಹ ಆಸ್ತಿಗಳನ್ನು ಈ ಮಸೂದೆಯ ಮೂಲಕ ಕಬಳಿಸಲು ಹೊರಟಿದೆ. ಈ ಮಸೂದೆಯಲ್ಲಿ ತಂದಿರುವ ತಿದ್ದುಪಡಿಗಳು ಸಂವಿಧಾನ ಬಾಹಿರವಾಗಿವೆ ಮುಸ್ಲಿಮೇತರರಿಗೆ ವಕ್ಫ್ ಮಂಡಳಿಗಳಲ್ಲಿ ಸದಸ್ಯರನ್ನಾಗಿ ಮಾಡುವದು ಧಾರ್ಮಿಕ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಗೆ ವಿರುದ್ಧವಾದ್ದದು ಎಂದರು.

ಕೇಂದ್ರ ಸರ್ಕಾರದ ಈ  ಅಸಂವಿಧಾನಿಕ ನಡೆಯನ್ನು ವಿರೋಧಿಸಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ವಕ್ಫ್  ಸಂರಕ್ಷಣಾ ಸಮಾವೇಶದಲ್ಲಿ ಅಬ್ದುಲ್ ಮಜೀದ್, ಎಸ್ ಡಿ ಪಿ ಐ  ರಾಜ್ಯಾಧ್ಯಕ್ಷ,
ಫ್ರೊ.ಸಯಿದಾ ಸಾದಿಯಾ ರಾಷ್ಟ್ರೀಯ ಸಮಿತಿ ಸದಸ್ಯೆ, ಅಬ್ದುಲ್ ಹನ್ನಾನ, ಉಪಾಧ್ಯಕ್ಷ, ಬಿ.ಆರ್.ಭಾಸ್ಕರಪ್ರಸಾದ, ರಾಜ್ಯ ಪ್ರಧಾನ ಕಾರ್ಯದರ್ಶಿ, ಅಫ್ಸರ ಕೊಡ್ಲಿಪೇಟೇ, ಪ್ರಧಾನ ಕಾರ್ಯದರ್ಶಿ, ರಿಯಾಜ ಕಡಂಬು, ಕಾರ್ಯದರ್ಶಿ, ಶಂಕರ ಅಜಮಾನಿ, ದಲಿತ ಮುಖಂಡರು, ಆಸಿಫ್ ಪಾಶ್ಚಾಪುರ ಸಾಮಾಜಿಕ ಕಾರ್ಯಕರ್ತರು, ಶಫಕತ ಬಡಿಗೇರ ಅಧ್ಯಕ್ಷ ಸಮಾನ ಹಕ್ಕುಗಳು ಸಂಘಟನೆಯ ರಾಜ್ಯಾಧ್ಯಕ್ಷ, ದತ್ತು ಗಾಯಕ್ವಾಡ್, ಡಾ.ಕರಿಮ, ಸಾಮಾಜಿಕ ಕಾರ್ಯಕರ್ತರು ಮತ್ತು ಧಾರ್ಮಿಕ ಮುಖಂಡರು ಹಾಗೂ ಸಮುದಾಯದ ಪ್ರೇಮಿಗಳು ಪಾಲ್ಗೊಳ್ಳುತ್ತಾರೆ. ಸಂವಿಧಾನ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸಮಾವೇಶವನ್ನು ಯಶಸ್ವಿಗೊಳಿಸಲು ಕರೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್ಡಿಪಿಐ ಹುಬ್ಬಳ್ಳಿ ಜಿಲ್ಲಾ ಅಧ್ಯಕ್ಷರು ಸಲೀಂ ಹಳಿಯಾಳ,  ಜಿಲ್ಲಾ ಉಪಾಧ್ಯಕ್ಷರು ಗಫುರ್ ಅಹ್ಮದ್ ಕುರಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮನ್ ಖಾನ ಶಿವಳ್ಳಿ, ಜಿಲ್ಲಾ ಸಮಿತಿ ಸದಸ್ಯರು ರಫೀಕ್ ಲಷ್ಕರ, ಅಬ್ದುಲ್ ಜಬ್ಬಾರ್ ಲಷ್ಕರ, ಹುಬ್ಬಳ್ಳಿ ನಗರ ಸಮಿತಿ ಅಧ್ಯಕ್ಷರು ಮಲಿಕ್ ಕಳಸ, ಪಕ್ಷದ ಮುಖಂಡರು ಸಮೀರ್ ಬೆಟಗೇರಿ, ಹಮಿದ ಬಂಗಾಲಿ ಮತ್ತು ವುಮೇನ್ ಇಂಡಿಯಾ ಮೂವಮೆಂಟನ ಜಿಲ್ಲಾ ಅಧ್ಯಕ್ಷೆ  ಪಮಿದಾ ಮನಿಯಾರ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ತರನ್ನುಮ್ ಸವಣೂರ ಹಾಜರಿದ್ದರು.

Leave a Reply