ಉಮಾಶ್ರೀ, ಎಂ.ಆರ್.ಸೀತಾರಾಮ್, ಸುಧಾಮ್ ದಾಸ್ ವಿಧಾನ ಪರಿಷತ್ ಗೆ ನಾಮಕರಣ

3 years ago

#Umashree #MRSitaram #SudhamDas #Nomination #upperhouse

ಬೆಂಗಳೂರು: ದಲಿತ ಸಮುದಾಯಕ್ಕೆ ಸೇರಿದ ಹಿರಿಯ ಸಚಿವರು ಮತ್ತು ನಾಯಕರು ಹಾಗೂ ಅಲ್ಪಸಂಖ್ಯಾತ ಸಮುದಾಯದ ಪ್ರಮುಖರ ಅಸಮಾಧಾನಕ್ಕೆ ಸೊಪ್ಪು ಹಾಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ನಿರ್ಧರಿಸಿದಂತೆ ವಿಧಾನ ಪರಿಷತ್ತಿನ ಮೂರು ಸ್ಥಾನಗಳ ನಾಮಕರಣ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಕಳುಹಿಸಿದ್ದ ಪ್ರಸ್ತಾವನೆಗೆ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಸಹಿ ಹಾಕಿದ್ದು ಮಾಜಿ ಸಚಿವರಾದ ಉಮಾಶ್ರೀ, ಎಂ.ಆರ್.ಸೀತಾರಾಂ, ಮತ್ತು ನಿವೃತ್ತ ಐ ಆರ್ ಎಸ್ ಅಧಿಕಾರಿ ಸುಧಾಮ್ ದಾಸ್ ಅವರನ್ನು ವಿಧಾನ ಪರಿಷತ್ ನಾಮಕರಣ ಸದಸ್ಯರಾಗಿ ನೇಮಕ ಮಾಡಲಾಗಿದೆ.

ಈ ಮೂವರು ಆರು ವರ್ಷಗಳ ಅಧಿಕಾರ ಅವಧಿಯನ್ನು ಹೊಂದಿದ್ದಾರೆ. ಉಮಾಶ್ರೀ ಅವರನ್ನು ಮಹಿಳೆ ಮತ್ತು ಚಿತ್ರರಂಗದ ಕೋಟಾದಡಿ ನೇಮಕ ಮಾಡಿದರೆ, ಎಂ ಆರ್ ಸೀತಾರಾಮ್ ಅವರನ್ನು ಶಿಕ್ಷಣ ತಜ್ಞ ಹಾಗೂ ಸುಧಾಮ್ ದಾಸ್ ಅವರನ್ನು ಸಾರ್ವಜನಿಕ ಆಡಳಿತ ಕೋಟಾದ ಅಡಿಯಲ್ಲಿ ನೇಮಕ ಮಾಡಲಾಗಿದೆ.

Leave a Reply