ಟ್ರಾನ್ಸ್‌ಪೋರ್ಟ್‌ ಉದ್ಯಮಿ ಸುಬ್ರಮಣಿಯನ್ ಶಂಕಾಸ್ಪದ ರೀತಿಯಲ್ಲಿ ಸಾವು

3 years ago

ಬೆಂಗಳೂರು: ಜೆಪಿ ನಗರದ 6ನೇ ಹಂತದ ಸಮೀಪದ ರೋಸ್ ಗಾರ್ಡನ್‌ ಬಳಿ  ಚೀಲ ಮತ್ತು ಬೆಡ್‍ಶೀಟ್‍ನಲ್ಲಿ ಸುತ್ತಿದ್ದ ರೀತಿಯಲ್ಲಿ ಶಂಕಾಸ್ಪದವಾಗಿ ಪತ್ತೆಯಾಗಿದ್ದ ಉದ್ಯಮಿಯ ಶವದ ಗುರುತನ್ನು ಪತ್ತೆಹಚ್ಚಿರುವ ಪುಟ್ಟೇನಹಳ್ಳಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಟ್ರಾನ್ಸ್‌ಪೋರ್ಟ್‌ ಉದ್ಯಮಿ ಸುಬ್ರಮಣಿಯನ್ (67) ಮೃತಪಟ್ಟವರು. ಕಳೆದ ನ.16ರಂದು ಮೊಮ್ಮಗನನ್ನು ಸಂಜೆ ಬ್ಯಾಡ್ಮಿಂಟನ್ ಕ್ಲಾಸ್ಗೆ ಕರೆದುಕೊಂಡು ಹೋಗಿದ್ದ ಬಾಲಸುಬ್ರಮಣ್ಯನ್ ಮನೆಗೆ ವಾಪಸಾಗದೇ ನಾಪತ್ತೆಯಾಗಿದ್ದರು.ಮರುದಿನ ಬೆಳಿಗ್ಗೆ  ಬಾಲ ಸುಬ್ರಮಣಿಯನ್ ಅವರ ಮೃತ ದೇಹ ಪತ್ತೆಯಾಗಿದ್ದು, ಈ ಸಾವಿನ ಬಗ್ಗೆ ಹಲವು ಅನುಮಾನ ಮೂಡಿತ್ತು.

ಮೊಮ್ಮಗನನ್ನು ಬ್ಯಾಡ್ಮಿಂಟನ್ ಕ್ಲಾಸ್ಗೆ ಕರೆದುಕೊಂಡು ಹೋಗಿದ್ದ ಬಾಲ ಸುಬ್ರಮಣಿಯನ್, ಅಂದೇ ಸಂಜೆ 4-55 ಕ್ಕೆ ತನ್ನ ಸೊಸೆಗೆ ಕರೆ ಮಾಡಿ ಹೊರಗಡೆ ಕೆಲಸವಿದೆ ಎಂದು ತಿಳಿಸಿದ್ದರು. ಅನಂತರ ಕರೆ ಮಾಡಿದರೆ ಅವರ ನಂಬರ್ ಸ್ವಿಚ್ ಆಫ್ ಬಂದಿದೆ. ಇದರಿಂದ ಆತಂಕಗೊಂಡಿದ್ದ ಸುಬ್ರಮಣಿಯನ್ ಅವರ ಪುತ್ರ ಸೋಮಸುಂದರ್‌ ತಕ್ಷಣವೇ ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ದೂರು ದಾಖಲಿಸಿದ್ದರು. ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ಸಿಡಿಆರ್ ಪರಿಶೀಲನೆ: ದೇಹದ ಮೇಲೆ ಯಾವುದೇ ಗಾಯಗಳು ಕಂಡುಬಂದಿಲ್ಲ. ಸಿಡಿಆರ್ ಪರಿಶೀಲಿಸಿದಾಗ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ. ಮೃತ ವೃದ್ಧರ ಕಾಲ್ ಹಿಸ್ಟರಿ ಜಾಲಾಡಿದಾಗ ನಿರಂತರವಾಗಿ ಮಹಿಳೆಯೊಬ್ಬರ ಜೊತೆಗೆ ಸಂಪರ್ಕ ಇರುವುದು ಬಯಲಾಗಿದೆ. ಸಾರಕ್ಕಿ ಸಿಗ್ನಲ್ ಬಳಿ ಲಾಸ್ಟ್ ಲೊಕೇಶನ್  ಕನಕಪುರ ರಸ್ತೆಯ ಸಾರಕ್ಕಿ ಸಿಗ್ನಲ್ ಬಳಿ ಕೊನೆಯ ಲೊಕೇಷನ್ ತೋರಿಸುತ್ತಿದೆ.

ಹೀಗಾಗಿ ಬಾಲಸುಬ್ರಮಣ್ಯನ್ ಸಂಪರ್ಕದಲ್ಲಿದ್ದ ಆ ಮಹಿಳೆ ಯಾರು ಎನ್ನುವ ಬಗ್ಗೆ ಪೊಲೀಸರಿಂದ ತನಿಖೆ ಆರಂಭಗೊಂಡಿದೆ ಎಂದು ಡಿಸಿಪಿ ಕೃಷ್ಣಕಾಂತ್ ತಿಳಿಸಿದ್ದಾರೆ.

Leave a Reply