ಸೇವಾದಳದಲ್ಲಿ ಸೇವೆ ಸಲ್ಲಿಸಿದವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ: ರಾಮಚಂದ್ರ

5 years ago

ಬೆಂಗಳೂರು: ಸೇವಾದಳದಲ್ಲಿ ಸೇವೆ ಸಲ್ಲಿಸಿದವರಿಗೆ ಮುಂಬರುವ ದಿನಗಳಲ್ಲಿ ಜಿಲ್ಲಾ ಪಂಚಾಯತಿ, ನಗರಸಭೆ ಮತ್ತು ಪಾಲಿಕೆ, ವಿಧಾನಸಭೆ, ವಿಧಾನಪರಿಷತ್ ನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗಲಿದೆ. ಸೇವಾ ಮನೋಭಾವನೆ ಮುಖ್ಯ. ಪ್ರತಿ ಮನೆಯಲ್ಲು ಸೇವಾದಳದ ಕಾರ್ಯಕರ್ತರು ಕೆಲಸ ಮಾಡುವಂತೆ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ ಮಾಡಬೇಕು ಎಂದು ಕಾಂಗ್ರೆಸ್ ಸೇವಾದಳದ ರಾಜ್ಯಾಧ್ಯಕ್ಷ ರಾಮಚಂದ್ರ ಹೇಳಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನ ಮತ್ತು ಕಾಂಗ್ರೆಸ್ ಸೇವಾದಳದ ಸಂಘಟನೆ ಬಗ್ಗೆ ಕಾರ್ಯಕಾರಿಣಿ ಸಭೆಯನ್ನು ಹೊಸಪೇಟೆ ಕಾಂಗ್ರೆಸ್ ಭವನದಲ್ಲಿ ಬೆಂಗಳೂರು ನಗರ, ಬಳ್ಳಾರಿ ಮತ್ತು ಹೊಸಪೇಟೆ ವಿಭಾಗದ ಕಾಂಗ್ರೆಸ್ ಸೇವಾದಳ ಸಭೆ ಆಯೋಜಿಸಲಾಗಿತ್ತು.

ಸಭೆಯಲ್ಲಿ ಮಾತಾಡಿದ ಅವರು, ಕಾಂಗ್ರೆಸ್ ಸೇವಾದಳದ ಅಧ್ಯಕ್ಷರು, ಪದಾಧಿಕಾರಿಗಳ ಉತ್ತಮ ಸೇವೆಯನ್ನ ಪಕ್ಷ ಗಮನಿಸುತ್ತದೆ. ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸಲು ಸರ್ಕಾರದಲ್ಲಿ ಅವಕಾಶ ಮಾಡಿಕೊಡುತ್ತದೆ. ಈಗಾಗಲೇ ಸೇವಾದಳದಿಂದ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಸೇವೆ ಮಾಡಿದವರು ಇದ್ದಾರೆ ಎಂದರು.

ಸೇವಾ ಮನೋಭಾವನೆ, ಜಾತ್ಯತೀತ ನಿಲುವು ಮತ್ತು ಸಾಮರಸ್ಯದ ಸಂಕೇತವೇ ಕಾಂಗ್ರೆಸ್ ಸೇವಾದಳದ ಉದ್ದೇಶ. 1923ರಲ್ಲಿ ಆರಂಭವಾದ ಸೇವಾದಳ ಕಾಂಗ್ರೆಸ್ ಪಕ್ಷದಲ್ಲಿ ವಿಶಿಷ್ಟವಾದ ಸ್ಥಾನಮಾನ ಹೊಂದಿದೆ. ಇಂದು ರಾಷ್ಟದಲ್ಲಿ ಹಲವಾರು ಸಮಸ್ಯೆಗಳನ್ನು ದೇಶದ ಜನ ಎದುರಿಸುತ್ತಿದ್ದಾರೆ. ಕೋಮುವಾದ, ಬೆಲೆ ಏರಿಕೆ ಮತ್ತು ರಾಷ್ಟ ವಿಭಜನೆ ಸಂಚು ನಡೆಯುತ್ತಿದೆ. ದೇಶದ ಐಕ್ಯತೆ, ಸಮಗ್ರತೆ ದೃಷ್ಟಿಯಿಂದ ಸೇವಾದಳದ ಕಾರ್ಯಕರ್ತರು ಸೈನಿಕರಂತೆ ರಾಷ್ಟ್ರಸೇವೆಗೆ ನಿಲ್ಲಬೇಕು ಎಂದು ಕರೆ ನೀಡಿದರು.

ಹಿರಿಯ ಕಾಂಗ್ರೆಸ್ ಮುಖಂಡರು, ಬಳ್ಳಾರಿ ಗ್ರಾಮೀಣ ಕಾಂಗ್ರೆಸ್ ಉಸ್ತುವಾರಿಗಳಾದ ಜಿಲ್ಲಾಧ್ಯಕ್ಷ  ಬಿ.ವಿ.ಶಿವಯೋಗಿ ಮತ್ತು ಹೊಸಪೇಟೆ ಬ್ಲಾಕ್ ಅಧ್ಯಕ್ಷ ವಿನಯ್ ಶೆಟ್ಟರ್ ಹಾಗೂ ಬಳ್ಳಾರಿ ಗ್ರಾಮೀಣ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಬಿ.ಮಾರಣ್ಣ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

Leave a Reply