ಬೆಂಗಳೂರು: ವಿಜಯಪುರ ಜಿಲ್ಲೆಯ ಚಡಚಣದ ಎಸ್‌ಬಿಐ ಬ್ಯಾಂಕ್ ದರೋಡೆ ಮಾಡಿದ ದರೋಡೆಕೋರರು ಹಣವಿದ್ದ ಬ್ಯಾಗ್ ಮತ್ತು ಚಿನ್ನಾಭರಣವನ್ನು ಮಹಾರಾಷ್ಟ್ರದಲ್ಲಿನ ಗ್ರಾಮವೊಂದರ ಮನೆಯ ಮೇಲೆ ಎಸೆದು ಪರಾರಿಯಾಗಿದ್ದಾರೆ.
- ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಪದಚ್ಯುತಗೊಳಿಸಿ: ಸಿದ್ದರಾಮಯ್ಯ
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
ಬ್ಯಾಂಕ್ ದರೋಡೆ ಮಾಡಿದ ತಂಡ ಮಾರುತಿ ಇಕೋ ಕಾರಿನಲ್ಲಿ ಹಣದೊಂದಿಗೆ ಪರಾರಿಯಾಗಿತ್ತು. ಈ ವೇಳೆ ಈ ತಂಡ ಸೋಲಾಪುರ ಜಿಲ್ಲೆಯ ಮಂಗಳವೇಡ ಸಮೀಪದ ಹುಲಜಂತಿ ಗ್ರಾಮದ ಸಮೀಪ ಅಪಘಾತಕ್ಕೀಡಾಗಿದೆ. ತಕ್ಷಣವೇ ಗ್ರಾಮಸ್ಥರು ಕಾರನ್ನು ಸುತ್ತುವರಿದು ಅದರಲ್ಲಿದ್ದವರನ್ನು ಹಿಡಿದುಕೊಳ್ಳಲು ಯತ್ನಿಸಿದ್ದಾರೆ.
ಈ ದುಷ್ಕರ್ಮಿಗಳು ಗಾಳಿಯಲ್ಲಿ ಗುಂಡು ಹಾರಿಸಿ ಗ್ರಾಮಸ್ಥರನ್ನು ಚದುರಿಸಿದ್ದಾರೆ. ಅಲ್ಲದೆ ತಮ್ಮ ಬಳಿಯಲ್ಲಿದ್ದ ಬ್ಯಾಗ್ ಒಂದನ್ನು ಮನೆಯ ಮೇಲೆ ಎಸದಿದ್ದಾರೆ. ಗ್ರಾಮಸ್ಥರು ಅದನ್ನು ಪರಿಶೀಲಿಸಿದಾಗ ಅದರಲ್ಲಿ ಹಣ ಮತ್ತು ಒಡವೆ ಇರುವುದು ಪತ್ತೆಯಾಗಿದೆ. ತಕ್ಷಣವೇ ಅವರು ಈ ಬಗ್ಗೆ ಮಂಗಳವೇಡೆ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಂಗಳವೇಡೆ ಪೊಲೀಸರು, ಇದು ಚಡಚಣದಲ್ಲಿ ನಡೆದ ಬ್ಯಾಂಕ್ ದರೋಡೆಯ ಹಣ ಎಂಬುದನ್ನು ಪತ್ತೆ ಮಾಡಿ ವಿಜಯಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗಾರರಿಗೆ ವಿವರ ನೀಡಿರುವ ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣನಿಂಬರಗಿ, ಚಡಚಣದಲ್ಲಿ ನಡೆದ ಬ್ಯಾಂಕ್ ದರೋಡೆಯ ಹಣ ಸೊಲ್ಲಾಪುರದ ಹುಲಜಂತಿ ಗ್ರಾಮದ ಮನೆ ಮೇಲೆ ಲಭಿಸಿದ ಬ್ಯಾಗ್ ನಲ್ಲಿ 41 ಲಕ್ಷ, 4 ಸಾವಿರ ನಗದು, 36 ಪ್ಯಾಕೇಟ್ಸನ್ 6.54 ಕೆಜಿ ಚಿನ್ನ ಪತ್ತೆಯಾಗಿದೆ. ಒಟ್ಟು 1.4 ಕೋಟಿ ಚಿನ್ನ, 20 ಕೆಜಿ ಚಿನ್ನಾಭರಣ ದರೋಡೆಯಾಗಿತ್ತು. ಪತ್ತೆಯಾದ ಬ್ಯಾಗ್ ನಲ್ಲಿ 1.30 ಲಕ್ಷ ನಗದು ಸಿಕ್ಕಿದೆ. ಮಹಾರಾಷ್ಟ್ರದ ಸೋಲಾಪುರ ಜಿಲ್ಲೆ ಮಂಗಳವೇಡ ತಾಲೂಕಿನ ಹುಲಜಂತಿ ಗ್ರಾಮದಲ್ಲಿ ಚಿನ್ನಾಭರಣದ ಬ್ಯಾಗ್ ಹಾಗೂ ದರೋಡೆಕೋರರ ಕೃತ್ಯಕ್ಕೆ ಬಳಸಿದ್ದ ಇಕೋ ವಾಹನ ಪತ್ತೆಯಾಗಿದೆ. ಗ್ರಾಮಕ್ಕೆ ನುಗ್ಗಿದ್ದ ಇಕೋ ವಾಹನಕ್ಕೆ ಬೈಕ್ ಡಿಕ್ಕಿಯಾಗಿತ್ತು. ಇದನ್ನು ಪ್ರಶ್ನಿಸಿದ್ದಕ್ಕೆ ಪಿಸ್ತೂಲ್ ತೋರಿಸಿ ದರೋಡೆಕೋರರು ಪರಾರಿಯಾಗಿದ್ದರು. ಇದೇ ವೇಳೆ ಚಿನ್ನಾಭರಣ, ನಗದು ಇದ್ದ ಬ್ಯಾಗ್ ಎಸೆದು ಹೋಗಿದ್ದಾರೆ. ಮನೆ ಮೇಲ್ಛಾವಣಿಯಲ್ಲಿ ಬ್ಯಾಗ್ ಇಟ್ಟು ದರೋಡೆಕೋರರು ಹೋಗಿದ್ದರೂ. ಪ್ರಕರಣ ತನಿಖೆ ನಡೆಯುತ್ತಿದೆ. ಶೀಘ್ರವೇ ದರೋಡೆಕೋರರನ್ನು ಬಂಧಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.




