ಬಿಜೆಪಿ ಜನವಿರೋಧಿ, ಸುಳ್ಳು ಹೇಳುವ ಪಕ್ಷ ಎಂದು ದೇಶದ ಜನರಿಗೆ ಅರಿವಾಗಿದೆ: ಜಿ.ಆರ್.ದಿನೇಶ್

3 years ago

#people #country #know #BJP #antipeople #lying #party #GRDinesh

ಬೆಂಗಳೂರು: ಬಿಜೆಪಿ ಜನವಿರೋಧಿ, ಸುಳ್ಳು ಹೇಳುವ ಪಕ್ಷ ಎಂದು ದೇಶದ ಜನರಿಗೆ ಅರಿವಿಗೆ ಬಂದಿದೆ ಇಂಡಿಯನ್ ನ್ಯಾಷನಲ್ ಬಿಲ್ಡಿಂಗ್ ಕನ್ಸ್ ಷ್ಟ್ರಕ್ಷನ್ ಅಂಡ್ ವುಡ್ ವರ್ಕಸ್ ಫೆಡರೇಷನ್ ಕರ್ನಾಟಕದ ರಾಜ್ಯಾಧ್ಯಕ್ಷ ಜಿ.ಆರ್.ದಿನೇಶ್ ಹೇಳಿದರು.

ಬೆಂಗಳೂರು ನಗರ, ಕಾಂಗ್ರೆಸ್ ಭವನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಂಗಸಂಸ್ಥೆಯಾದ ಇಂಡಿಯನ್ ನ್ಯಾಷನಲ್ ಬಿಲ್ಡಿಂಗ್ ಕನ್ಸ್ ಷ್ಟ್ರಕ್ಷನ್ ಅಂಡ್ ವುಡ್ ವರ್ಕಸ್ ಫೆಡರೇಷನ್ ಕರ್ನಾಟಕದ ರಾಜ್ಯಾಧ್ಯಕ್ಷ ಜಿ.ಆರ್.ದಿನೇಶ್ ನೂತನವಾಗಿ ಗಾಂಧಿನಗರ ವಿಧಾನಸಭಾ ಬ್ಲಾಕ್ ಅಧ್ಯಕ್ಷರಾಗಿ ಸುರೇಶ್ ಪಿ. ಮತ್ತು ಜಯನಗರ ವಿಧಾನಸಭಾ ಬ್ಲಾಕ್ ಅಧ್ಯಕ್ಷರಾಗಿ ಶೈಕ್ ಮೌಲ, ಹಾಗೂ ಬಿಟಿಎಂ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಆಸೀಫ್ ಖಾನ್ ರವರನ್ನು ನೇಮಕ ಮಾಡಿ, ಆದೇಶ ಪತ್ರ ವಿತರಿಸಿದರು.

ಇದೇ ಸಂದರ್ಭದಲ್ಲಿ ಜಿ.ಆರ್.ದಿನೇಶ್ ಮಾತನಾಡಿ, ಕಾಂಗ್ರೆಸ್ ಪಕ್ಷ ಜನಪರ ಆಡಳಿತ ನೀಡಿ ಯಶ್ವಸ್ಸಿನತ್ತ ಸಾಗುತ್ತಿದೆ. ಶಕ್ತಿ ಯೋಜನೆಯಿಂದ 16 ಕೋಟಿ ಮಹಿಳೆಯರು ಬಸ್ ನಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಅನ್ನ ಭಾಗ್ಯ ಯೋಜನೆಯ ಲಾಭ 4 ಕೋಟಿಗಿಂತ ಹೆಚ್ಚು ಜನರಿಗೆ ತಲುಪಿದೆ, 200 ಯೂನಿಟ್ ಉಚಿತ ವಿದ್ಯುತ್, ಮನೆಯ ಯಾಜಮಾನಿಗೆ 2000 ಸಹಾಯಧನ, ನಿರುದ್ಯೋಗ ಭತ್ಯೆ ಯೋಜನೆಗಳು ಸಮರ್ಪಕವಾಗಿ ಜಾರಿಯಾಗಿದೆ ಎಂದು ಹೇಳಿದರು.

ಮುಂಬರುವ ಲೋಕಸಭಾ ಚುನಾವಣೆ ಮತ್ತು ಬಿಬಿಎಂಪಿ ಚುನಾವಣೆ ಕೆ.ಪಿ.ಸಿ.ಸಿ.ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಬಹುಮತ ಪಡೆಯಲಿದೆ ಎಂದು ಹೇಳಿದರು.

Leave a Reply