ಸಾಮಾನ್ಯ ಗೃಹಿಣಿಗೆ ಇರುವ ಜ್ಞಾನ ಭಾರತದ ಮಾಧ್ಯಮಗಳ ಮುಠ್ಠಾಳರಿಗೆ ಇಲ್ಲವಾಗಿದೆ

3 years ago

The media moguls of India lack the knowledge that a common housewife has

ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ ವಿಶ್ವ ಚಾಂಪಿಯನ್ ಆದ ನಮ್ಮ ಹೆಮ್ಮೆಯ  ಕ್ರೀಡಾಪಟು ನೀರಜ್ ಚೋಪ್ರಾ ಈಗ ವಿಶ್ವದ ಗಮನ ಸೆಳೆದಿದ್ದಾನೆ.

ಎರಡನೇ ಸ್ಥಾನವನ್ನು ನೆರೆಯ ಪಾಕಿಸ್ತಾನದ ಅರ್ಷದ್ ನದೀಮ್ ಗಳಿಸುವುದರ ಮೂಲಕ ಕ್ರೀಡೆಯಲ್ಲಿ ಯೂರೋರಪ್ ರಾಷ್ಟ್ರಗಳ  ಪಾರಮ್ಯವನ್ನು ಈ ಇಬ್ಬರೂ ಕ್ರೀಡಾಪಟುಗಳು ಮುರಿದಿದ್ದಾರೆ.

ಇತ್ತ ದೆಹಲಿಯಲ್ಲಿ ನೀರಜ್ ಚೋಪ್ರಾನ ತಂದೆ ತಾಯಿ ಇವರನ್ನು ಭೇಟಿ ಮಾಡಿದ ಮಾಧ್ಯಮಗಳ ಮುಠ್ಠಾಳರು ಅವರಿಗೆ ಕೇಳಿದ ಪ್ರಶ್ನೆಯೆಂದರೆ, ,ನಿಮ್ಮ ಪುತ್ರ ಪಾಕಿಸ್ತಾನದ ಸ್ಪರ್ಧಿ ವಿರುದ್ಧ ಜಯಗಳಿಸಿದ ಬಗ್ಗೆ ನಿಮಗೆ ಏನು ಅನಿಸುತ್ತದೆ ಎಂಬ ಮೂರ್ಖತನದ ಪ್ರಶ್ನೆ.

ಆ ತಾಯಿಯ ಉತ್ತರ ಮಗನ ಸಾಧನೆಗೆ ತಕ್ಕಂತೆ ಇತ್ತು. ನನ್ನ ಪುತ್ರನ ವಿರುದ್ಧ ಸ್ಪರ್ಧಿಸಿದ್ದು ರಾಷ್ಟ್ರಗಳಲ್ಲ, ಕ್ರೀಡಾಪಟುಗಳು. ಅಲ್ಲಿ ಪೈಪೋಟಿ ಇರುವುದು ಕ್ರೀಡಾಪಟುಗಳ ನಡುವೆ ಮಾತ್ರ. ರಾಷ್ಟ್ರಗಳ ನಡುವೆ ಅಲ್ಲ. ಇತ್ತ ದೆಹಲಿಯಲ್ಲಿ ತನ್ನ ತಾಯಿ ಈ ಮಾತುಗಳನ್ನು ಆಡುತ್ತಿದ್ದರೆ, ಅತ್ತ ಬುಡಾಪೆಸ್ಟ್ ನಗರದಲ್ಲಿ ವಿಜಯಗಳಿಸಿದ ನೀರಜ್ ಚೋಪ್ರಾ ತನ್ನ ಪ್ರತಿಸ್ಪರ್ಧಿ ಪಾಕಿಸ್ತಾನದ ಅರ್ಷದ್ ನದೀಂನ ಕೈ ಹಿಡಿದುಕೊಂಡು ಕ್ರೀಡಾಂಗಣದ ಸುತ್ತಾ ಓಡುತ್ತಾ ಭಾವಕ್ಯತೆಯ ಪ್ರದರ್ಶನ ಮಾಡುತ್ತಿದ್ದನು.

140 ಕೋಟಿ ಜನ ಸಂಖ್ಯೆ ಇರುವ ಭಾರತದಲ್ಲಿ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಓಟ, ಹೈಜಂಪ್, ಲಾಂಗ್ ಜಂಪ್ ಹೀಗೆ ವಿವಿಧ ಕ್ರೀಡೆಗಲ್ಲಿ ಹದಿನಾಲ್ಕು ಮಂದಿ ಕ್ರೀಡಾಪಟುಗಳನ್ನು ಏಕೆ ತಯಾರು ಮಾಡಿಲ್ಲ ಎಂಬ ಪ್ರಶ್ನೆಗಳನ್ನು ಎತ್ತಬೇಕಾದ ಈ ದಂಡಪಿಂಡಗಳಿಗೆ ಕ್ರೀಡೆ ಎಂದರೆ ಕ್ರಿಕೆಟ್ ಎಂಬ ‌ನಂಬಿಕೆ ತಲೆಯೊಳಗೆ ‌ಬಲವಾಗಿ ಬೇರೂರಿದೆ.

ಉತ್ತರ ಭಾರತದ ಧಾರ್ಮಿಕ ಮುಖಂಡ ಎಂಬ ಸನ್ಯಾಸಿಯೊಬ್ಬ ಚಂದ್ರನನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕು ಎಂದು ನೀಡಿರುವ ಹೇಳಿಕೆಯನ್ನು ಮಾಧ್ಯಮಗಳಲ್ಲಿ ಪ್ರಕಟಿಸಿವೆ. ಈ ಮುನ್ನ ಅಯೋಗ್ಯರು ಆ ತಿರುಬೋಕಿ ಸನ್ಯಾಸಿಗೆ ಮಗನೇ 1969 ರ ಜುಲೈ 19ರಂದು ಅಮೇರಿಕಾದ ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿರಿಸಿದಾಗ ನೀನು ಹುಟ್ಟಿರಲಿಲ್ಲ ಅಕಸ್ಮಾತ್ ನೀನು ಹುಟ್ಟಿದ್ದರೆ ನಿನ್ನ ಸೊಂಟದ ಮೇಲೆ ಪುಟಗೋಸಿ ಇರಲಿಲ್ಲ ಎಂದು ಹೇಳಬೇಕಿತ್ತು.

ಗ್ರಹಗಳು ಎಂದರೆ ಏನು, ಭೂಮಿ, ಚಂದ್ರರ ಬಗ್ಗೆ ತಿಳಿದು ಮಾತನಾಡು ಮುಠ್ಠಾಳ ಎಂದು ಆತನಿಗೆ ಉಗಿದಿದ್ದರೆ ಅವನು ಈ ಜನ್ಮದಲ್ಲಿ ಮಾಧ್ಯಮಗಳ ಮುಂದೆ ಬರುತ್ತಿರಲಿಲ್ಲ. ಅವನ ಮೂರ್ಖತನದ ಈ ಹೇಳಿಕೆಯನ್ನು ರಾಷ್ಟ್ರೀಯ ಸುದ್ದಿ ಎಂದು ಪ್ರಕಟಿಸಿದ ಇವರನ್ನೆಲ್ಲಾ ಗಮನಿಸಿದರೆ ಈ ಪತರುಕರುತ ಮುತನ ರತುನಗಳು ವಾಟ್ಸ್ ಆಪ್ ಯೂನಿವರ್ಸಿಟಿಯಲ್ಲಿ ಪತ್ರಿಕೋದ್ಯಮ ಪದವಿ ಪಡೆದ ಗಿರಾಕಿಗಳು ಎಂದು ಕಾಣುತ್ತದೆ.

– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply