7 ಹಂತಗಳಲ್ಲಿ ನಡೆಯಲಿದೆ 2024ರ ಲೋಕಸಭೆ ಚುನಾವಣೆ

2 years ago

ದೆಹಲಿ/ಬೆಂಗಳೂರು: ಜಗತ್ತಿನಾದ್ಯಂತ ಕುತೂಹಲ ಕೆರಳಿಸಿರುವ ಭಾರತದ ಲೋಕಸಭಾ ಮಹಾಸಮರಕ್ಕೆ ಅಖಾಡ ಸಜ್ಜಾಗಿದೆ. ಕೇಂದ್ರ ಚುನಾವಣಾ ಆಯೋಗ ಒಟ್ಟು ಏಳು ಹಂತಗಳಲ್ಲಿ ಲೋಕಸಭೆಗೆ ಚುನಾವಣೆ ನಡೆಸಲು ವೇಳಾಪಟ್ಟಿ ಘೋಷಿಸಿದೆ.

ಮುಕ್ತ ಹಾಗೂ ಶಾಂತಿಯುತ ಮತದಾನ ನಡೆಸುವ ದೃಷ್ಟಿಯಿಂದ ರಾಜ್ಯಗಳ ವರದಿ ಮತ್ತು ಕೇಂದ್ರ ಗುಪ್ತದಳದ ವರದಿ ಆಧರಿಸಿ ಏಳು ಹಂತಗಳಲ್ಲಿ ದೇಶಾದ್ಯಂತ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ. ಕರ್ನಾಟಕದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 26ಕ್ಕೆ ಮೊದಲ ಹಂತದ ಮತದಾನ, ಮೇ 7ಕ್ಕೆ ಎರಡನೇ ಹಂತದ ಮತದಾನ ನಡೆಯಲಿದೆ.

ಕರ್ನಾಟಕದಲ್ಲಿ ಏಪ್ರಿಲ್ 26, 2024ರಂದು ಚುನಾವಣೆ ನಡೆಯಲಿರುವ ಲೋಕಸಭೆ ಕ್ಷೇತ್ರಗಳು:

  1. ಬೆಂಗಳೂರು ಗ್ರಾಮಾಂತರ
  2. ಬೆಂಗಳೂರು ಕೇಂದ್ರ
  3. ಬೆಂಗಳೂರು ಉತ್ತರ
  4. ಬೆಂಗಳೂರು ದಕ್ಷಿಣ
  5. ಚಿಕ್ಕಬಳ್ಳಾಪುರ
  6. ಕೋಲಾರ
  7. ಚಾಮರಾಜನಗರ
  8. ಮೈಸೂರು
  9. ಮಂಡ್ಯ
  10. ತುಮಕೂರು
  11. ಚಿತ್ರದುರ್ಗ
  12. ದಕ್ಷಿಣ ಕನ್ನಡ
  13. ಹಾಸನ
  14. ಉಡುಪಿ – ಚಿಕ್ಕಮಗಳೂರು
    ಪ್ರಮುಖ ದಿನಾಂಕಗಳು:
    ಮಾರ್ಚ್ 28ರಂದು ಅಧಿಸೂಚನೆ
    ನಾಮಪತ್ರ ಸಲ್ಲಿಕೆಗೆ ಅವಕಾಶ – ಮಾರ್ಚ್ 28
    ನಾಮಪತ್ರ ಸಲ್ಲಿಸಲು ಕೊನೆಯ ದಿನ – ಏಪ್ರಿಲ್ 4
    ನಾಮಪತ್ರಗಳ ಪರಿಶೀಲನೆ – ಏಪ್ರಿಲ್ 5
    ನಾಮಪತ್ರ ವಾಪಸ್ ಪಡೆಯಲು ಕಡೆಯದಿನ – ಏಪ್ರಿಲ್ 8
    ಮತದಾನ – ಏಪ್ರಿಲ್ 26
    ಫಲಿತಾಂಶ – ಜೂನ್ 4

ಕರ್ನಾಟಕದಲ್ಲಿ ಮೇ 7, 2024ರಂದು ಚುನಾವಣೆ ನಡೆಯಲಿರುವ ಲೋಕಸಭೆ ಕ್ಷೇತ್ರಗಳು:

  1. ಚಿಕ್ಕೋಡಿ
  2. ಬೆಳಗಾವಿ
  3. ಬಾಗಲಕೋಟೆ
  4. ಬಿಜಾಪುರ
  5. ಕಲಬುರಗಿ
  6. ಕೊಪ್ಪಳ
  7. ಬಳ್ಳಾರಿ
  8. ಹಾವೇರಿ
  9. ಧಾರವಾಡ
  10. ಉತ್ತರ ಕನ್ನಡ
  11. ದಾವಣಗೆರೆ
  12. ಶಿವಮೊಗ್ಗ

ಪ್ರಮುಖ ದಿನಾಂಕಗಳು:
ಅಧಿಸೂಚನೆ ಪ್ರಕಟ – ಏಪ್ರಿಲ್ 12
ನಾಮಪತ್ರ ಸಲ್ಲಿಕೆ ಆರಂಭ – ಏಪ್ರಿಲ್ 19
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ – ಏಪ್ರಿಲ್ 20
ನಾಮಪತ್ರಗಳ ಪರಿಶೀಲನೆ – ಏಪ್ರಿಲ್ 22
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ – ಏಪ್ರಿಲ್ 25
ಮತದಾನ – ಮೇ 7
ಫಲಿತಾಂಶ – ಜೂನ್ 4

7 ಹಂತಗಳಲ್ಲಿ ಲೋಕಸಭೆ ಚುನಾವಣೆ:
ಹಂತ ದಿನಾಂಕ ಕ್ಷೇತ್ರಗಳು
ಹಂತ 1 ಏಪ್ರಿಲ್ 19 102
ಹಂತ 2 ಏಪ್ರಿಲ್ 26 89
ಹಂತ 3 ಮೇ 7 94
ಹಂತ 4 ಮೇ 13 96
ಹಂತ 5 ಮೇ 20 49
ಹಂತ 6 ಮೇ 25 57
ಹಂತ 7 ಜೂನ್ 1 57
ಮತ ಎಣಿಕೆ – ಜೂನ್ 4, 2024

ಚುನಾವಣೆಯಲ್ಲಿ ಪಕ್ಷಗಳು ವೈಯಕ್ತಿಕ ದಾಳಿ ನಡೆಸದೇ, ಆರೋಗ್ಯಕರ ಸ್ಪರ್ಧೆಗೆ ಒತ್ತು ನೀಡಬೇಕು. ಚುನಾವಣಾ ಪ್ರಚಾರ ಕಾರ್ಯದಲ್ಲಿ ಮಕ್ಕಳ ಬಳಕೆಗೆ ನಿಷೇಧ. ಉಲ್ಲಂಘಿಸಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.

ಮತದಾರರಿಗೆ ಯಾವುದೇ ರೀತಿಯ ಆಮಿಷಗಳನ್ನು ಒಡ್ಡುವಂತಿಲ್ಲ. ಮತದಾರರನ್ನು ದಿಕ್ಕು ತಪ್ಪಿಸುವಂತೆ ಮಾಡುವ ಹಾಗಿಲ್ಲ. ಹಣಬಲ, ತೋಳ್ಬಲವನ್ನು ಚುನಾವಣಾ ಅಕ್ರಮಗಳಿಗೆ ಬಳಿಸಿದರೆ ಅಂತವರ ವಿರುದ್ಧ ಕಠಿಣ ಕ್ರಮ, ಸಾಮಾಜಿಕ ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿ ಹರಡಿದರೆ ಕಠಿಣ ಕ್ರಮ ಜರಗಿಸುವ ಎಚ್ಚರಿಕೆಯನ್ನು ಕೂಡ ನೀಡಲಾಗಿದೆ.

Leave a Reply