ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಯ ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿರುವ ಸಾರಿಗೆ ಮತ್ತು ಮುಜರಾಯಿ ಇಲಾಖೆ ಖಾತೆ ಸಚಿವರಾದ ಶ್ರೀರಾಮಲಿಂಗಾರೆಡ್ಡಿರವರಿಗೆ ಸಮಸ್ತ ನಾಡಿನ ಜನತೆಯ ಪರವಾಗಿ ಅಭಿನಂದನೆಗಳನ್ನ ಸಲ್ಲಿಸುತ್ತೇವೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆ ಅಡಿಯಲ್ಲಿ ಒಂದು ವರ್ಷದ ಅವಧಿಯಲ್ಲಿ 226 ಕೋಟಿ ಬಾರಿ ರಾಜ್ಯದ ಮಹಿಳೆಯರು ಉಚಿತವಾಗಿ ಪ್ರಯಾಣವನ್ನು ಮಾಡಿದ್ದಾರೆ ಇದೊಂದು ಐತಿಹಾಸಿಕ ದಾಖಲೆಯಾಗಿದೆ.
ಶಕ್ತಿ ಯೋಜನೆಯ ಅನುಷ್ಠಾನದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಆಗಿಲ್ಲ ಎಂದು ಟೀಕೆ ಮಾಡುವವರಿಗೆ ಕೆಲವು ವಿಚಾರಗಳನ್ನ ತಿಳಿಸುವಂತಹ ಅವಶ್ಯಕತೆ ಇದೆ ಸಾರಿಗೆ ಸಚಿವರು ಯೋಜನೆಯ ಅನುಷ್ಠಾನದ ಜೊತೆಯಲ್ಲಿ ಇಲಾಖೆಯ ಪ್ರಗತಿಗೆ ಮತ್ತು ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ ಪರಿಣಾಮವಾಗಿ ಇಷ್ಟೊಂದು ದೊಡ್ಡ ಯೋಜನೆ, ಜಾರಿಗೊಳಿಸಿದ್ದರು ಸಹ ಸಾರಿಗೆ ಇಲಾಖೆ ಆರ್ಥಿಕವಾಗಿ ತನ್ನ ಸಾಮರ್ಥ್ಯವನ್ನು ಉಳಿಸಿಕೊಂಡಿದೆ.
ಪಲ್ಲಕ್ಕಿ ಅಶ್ವ ಮೇಧ ಕ್ಲಾಸಿಕ್ ಕಲ್ಯಾಣ ರಥ ಅಮೋಘವರ್ಷ ಮುಂತಾದಂತಹ ವಿನೂತನ ಮಾದರಿಯ ಬಸ್ಗಳು ಸಹ ಸೇರ್ಪಡೆಯಾಗಿದೆ.
ಇಲ್ಲಿಯ ತನಕ ಸಾರಿಗೆ ನೌಕರರು ತಮ್ಮ ಕರ್ತವ್ಯವನ್ನ ನಿರ್ವಹಿಸುತ್ತಿದ್ದಾಗ ಮೃತಪಟ್ಟಾಗ ಇದ್ದಂತಹ ಪರಿಹಾರದ ಮೊತ್ತವನ್ನ ಒಂದು ಕೋಟಿ ರೂಪಾಯಿಗಳಿಗೆ ಹೆಚ್ಚಿಸಿ ಆ ಕುಟುಂಬಗಳ ಭದ್ರತೆಗೆ ಗಟ್ಟಿಯಾದಂತಹ ಅಡಿಪಾಯವನ್ನು ಹಾಕಿ ಕೊಟ್ಟಿದ್ದಾರೆ.
ಅದೇ ರೀತಿಯಲ್ಲಿ ಸಾರಿಗೆ ಬಸ್ಗಳಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ಅಪಘಾತಗಳಲ್ಲಿ ಮೃತಪಟ್ಟರೇ ಆ ಈ ಹಿಂದೆ ನೀಡುತ್ತಿದ್ದ ಮೂರು ಲಕ್ಷ ರೂಪಾಯಿಗಳ ಬದಲಿಗೆ ಹತ್ತು ಲಕ್ಷ ರೂಪಾಯಿಗಳ ಪರಿಹಾರವನ್ನ ನೀಡುವಂತಹ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಬೇರೆ ಬೇರೆ ಕಾರಣಗಳಿಂದಾಗಿ ಮೃತಪಟ್ಟಂತಹ ಸಿಬ್ಬಂದಿಗಳ ಕುಟುಂಬದ ಕಲ್ಯಾಣ ವಿಮೆ ಯೋಜನೆಯನ್ನು ಮೂರು ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಈ ಹಿಂದೆ ಪ್ರತಿ ದಿನ ಕರ್ತವ್ಯ ನಿರ್ವಹಿಸುತ್ತಿದ್ದ 158909 ಟ್ರಿಪ್ ಗಳ ಪ್ರಯಾಣವನ್ನು 169627 ಸಂಖ್ಯೆಗೆ ಹೆಚ್ಚಿಸಿ ಈ ಯೋಜನೆಯಲ್ಲಿ ಪ್ರಯಾಣಿಸುವವರ ಪ್ರಯಾಣಿಕರ ಒತ್ತಡವನ್ನ ನಿಯಂತ್ರಿಸಲಾಗಿದೆ.
9000 ಹುದ್ದೆಗಳ ನೇಮಕಾತಿ ಆದೇಶವನ್ನು ನೀಡಲಾಗಿದೆ 6,500 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿರುತ್ತದೆ ಸಾವಿರದ ಇನ್ನೂರ ಎಪ್ಪತ್ತೇಳು ಹಳೆಯ ಬಸ್ಗಳ ಪುನಶ್ಚೇತನ ಕಾರ್ಯ ಮಾಡಲಾಗಿದೆ, 2438 ನೂತನ ಬಸ್ಗಳ ಸೇರ್ಪಡೆಯಾಗಿದೆ 5800 ಹೊಸ ಬಸ್ ಗಳ ಖರೀದಿಗೆ ಅನುಮೋದನೆಯಾಗಿದೆ 553 ಮೃತ ಸಿಬ್ಬಂದಿಗಳ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ಇಲಾಖೆಯಲ್ಲಿ ಉದ್ಯೋಗವನ್ನು ಕಲ್ಪಿಸಿಕೊಡಲಾಗಿದೆ.
ಜಯದೇವ ಆಸ್ಪತ್ರೆಯೊಂದಿಗೆ ಒಡಂಬಡಿಕೆಯನ್ನ ಮಾಡಿಕೊಂಡು ಚಾಲಕರು ಮತ್ತು ನಿರ್ವಾಹಕರಿಗೆ ಹೃದಯ ತಪಾಸಣೆಗೆ ವ್ಯವಸ್ಥೆಯನ್ನು ಮಾಡಲಾಗಿದೆ.
ಇವೆಲ್ಲವನ್ನೂ ಹೇಳಿರುವುದು ಇಲಾಖೆ ಅಭಿವೃದ್ಧಿ ಕಾರ್ಯವನ್ನ ನಿಲ್ಲಿಸಿಲ್ಲ ಎನ್ನುವುದನ್ನ ಸೂಚಿಸುವುದರ ಜೊತೆಗೆ ಎಷ್ಟು ಬದ್ಧತೆಯಿಂದ ಕರ್ತವ್ಯವನ್ನ ನಿರ್ವಹಿಸುತ್ತಿದ್ದಾರೆ ಎನ್ನುವುದನ್ನು ಜನರಿಗೆ ತಿಳಿಸುವ ಮತ್ತೊಂದು ಉದ್ದೇಶವೂ ಇದೆ.
ಸುಖದ ಸುಪ್ಪತ್ತಿಗೆಯಲ್ಲಿ ಕುಳಿತು ಯಾವುದೇ ಸಮಸ್ಯೆಗಳಿಲ್ಲದಂತಹ ಒಂದಷ್ಟು ಮಂದಿ ಶಕ್ತಿ ಯೋಜನೆಯ ಬಗ್ಗೆ ಹಗುರವಾಗಿ ಮಾತನಾಡುವವರು, ಒಂದು ಬಾರಿ ಕಟ್ಟಡ ಕಾರ್ಮಿಕರು, ಗಾರ್ಮೆಂಟ್ಸ್ ನೌಕರರು, ಸಣ್ಣಪುಟ್ಟ ಕಾರ್ಖಾನೆಗಳಲ್ಲಿ ದುಡಿಯುವ ಮಹಿಳೆಯರು ಮತ್ತು ಕಾಲೇಜು ವಿದ್ಯಾರ್ಥಿನಿಯರು ಹಾಗೂ ಮನೆ ಕೆಲಸಗಳನ್ನು ಮಾಡುವ ಮಹಿಳೆಯರಿಗೆ ಇದರಿಂದ ಆಗುತ್ತಿರುವ ಅನುಕೂಲವನ್ನು ಅರಿತುಕೊಳ್ಳಬೇಕು.
ನಗರದ ಬಹಳಷ್ಟು ಬಹು ಮಹಡಿ ಕಟ್ಟಡಗಳಲ್ಲಿ ಹೌಸ್ ಕೀಪಿಂಗ್ ಕೆಲಸವನ್ನು ಮಾಡುವ ಮಹಿಳೆಯರು ಸಹ ಈ ಯೋಜನೆಯ ಅನುಕೂಲ ವನ್ನು ಪಡೆದುಕೊಂಡಿದ್ದಾರೆ. ಟೀಕೆ ಮಾಡುವ ಜನರಿಗೆ ಬಹುಶಃ ಈ ರೀತಿಯಲ್ಲಿ ದುಡಿಯುವ ಮಹಿಳೆಯರ ಸಂಬಳದ ಪ್ರಮಾಣದ ಅರಿವು ಇರುವುದಿಲ್ಲ. ಒಂದು ಸಾವಿರದಿಂದ ಹಿಡಿದು ಕೆಲವು ಸಾವಿರ ರೂಪಾಯಿಗಳ ವೇತನವನ್ನು ಪಡೆಯುವಂತಹ ಅದರಲ್ಲೂ ನಿರ್ದಿಷ್ಟವಾದಂತಹ ಆದಾಯವು ಇಲ್ಲದಂತಹ ಲಕ್ಷಾಂತರ ಮಹಿಳೆಯರು ಪ್ರತಿ ತಿಂಗಳು ತಮ್ಮ ಕೆಲಸಕ್ಕಾಗಿ ಬಸ್ ಗಳಲ್ಲಿ ಪ್ರಯಾಣ ಮಾಡುತ್ತಾ ಸಾವಿರಾರು ರೂಪಾಯಿಗಳ ಟಿಕೆಟ್ ಗಳನ್ನ ಖರೀದಿಸಬೇಕಾಗಿತ್ತು. ಇದರಿಂದಾಗಿ ಅವರ ಸಂಪಾದನೆಯ ಬಹಳಷ್ಟು ಭಾಗ ವೆಚ್ಚವಾಗುತ್ತಿತ್ತು. ಶಕ್ತಿ ಯೋಜನೆಯ ಅನುಷ್ಠಾನದ ಹಿನ್ನೆಲೆಯಲ್ಲಿ ಪ್ರತಿದಿನ ಲಕ್ಷಾಂತರ ಮಹಿಳೆಯರು ದುಡಿಯುವ ಮಹಿಳೆಯರು ಶ್ರಮದ ಬದುಕಿನ ಮಹಿಳೆಯರು ಬದುಕು ಕಟ್ಟಿಕೊಳ್ಳಲು ಪ್ರಯಾಣ ಮಾಡುವಂತಹ ಮಹಿಳೆಯರು ಪ್ರತಿ ತಿಂಗಳು ಸಾವಿರಾರು ರೂಪಾಯಿಗಳ ಉಳಿತಾಯ ಕಂಡಿರುತ್ತಾರೆ. ಇದರಿಂದಾಗಿ ಅವರಿಗೆ ಒಂದಷ್ಟು ಆರ್ಥಿಕ ಹೊರೆ ಕಡಿಮೆಯಾಗಿರುತ್ತದೆ. ಬಸ್ ಟಿಕೆಟ್ ಗಳ ಖರೀದಿಯ ಹಣದ ವೆಚ್ಚವಿಲ್ಲದ ಕಾರಣದಿಂದ ಅವರ ಬದುಕಿಗೆ ಒಂದಷ್ಟು ಆರ್ಥಿಕ ನೆರವು ಸಿಕ್ಕಿರುತ್ತದೆ.
ಈ ಯೋಜನೆ ಅನುಷ್ಠಾನವಾಗುವ ಮುನ್ನ ತುಮಕೂರು ರಸ್ತೆ, ಮೈಸೂರು ರಸ್ತೆ. ಮಾಗಡಿ ರಸ್ತೆ, ಹೊಸೂರು ರಸ್ತೆ ಇಲ್ಲಿದುಡಿಯುವ ಮಹಿಳೆಯರು ಲಾರಿಗಳಲ್ಲಿ ತ್ರಿಚಕ್ರವಾಹನಗಳಲ್ಲಿ ಟೆಂಪೋಗಳಲ್ಲಿ ಸರಕುಗಳನ್ನ ತುಂಬಿಕೊಂಡು ಹೋಗುತ್ತಿದ್ದ ರೀತಿಯಲ್ಲಿ ಕುಳಿತುಕೊಂಡು ಪ್ರಯಾಣವನ್ನು ಮಾಡುತ್ತಿದ್ದರು. ಇಂತಹ ದೃಶ್ಯಗಳನ್ನು ಕಂಡವರಿಗಷ್ಟೇ ಆ ದುಡಿಯುವ ಮಹಿಳೆಯರ ಸಂಕಟದ ಬದುಕಿನ ಪರಿಚಯವಿರುತ್ತದೆ.
ಇದರ ನಡುವೆ ಸಾಕಷ್ಟು ಮಹಿಳೆಯರು ತಮ್ಮ ಕುಟುಂಬದವರನ್ನ ತಮ್ಮ ಪರಿಚಯಸ್ತರನ್ನ ಭೇಟಿ ಮಾಡುವ ಸಲುವಾಗಿ ಪ್ರಯಾಣವನ್ನು ಮಾಡುತ್ತಾರೆ. ಇವರುಗಳು ಸಹ ಆರ್ಥಿಕವಾಗಿ ಅಷ್ಟಾಗಿ ಶಕ್ತರಾಗಿರುವುದಿಲ್ಲ. ಇಂತಹ ಮಹಿಳೆಯರಲ್ಲಿ ಸಾಕಷ್ಟು ಮಂದಿ ಬದುಕನ್ನ ಕಟ್ಟಿಕೊಳ್ಳಲು ಬೇರೆ ಬೇರೆ ಊರುಗಳಿಗೆ ಬಂದವರಾಗಿರುತ್ತಾರೆ. ಈ ಕಾರಣದಿಂದ ತಮ್ಮ ಸಂಬಂಧಿಗಳನ್ನ ಭೇಟಿ ಮಾಡುವ ಸಲುವಾಗಿ ಪ್ರಯಾಣ ಮಾಡುತ್ತಾರೆ.
ನಾಡಿನಲ್ಲಿ ಲಕ್ಷಾಂತರ ಮಂದಿ ಹಣವಿಲ್ಲದ ಕಾರಣದಿಂದ ಅನೇಕ ಪವಿತ್ರ ಸ್ಥಳಗಳನ್ನ ಮತ್ತು ದೇವಾಲಯಗಳನ್ನು ದರ್ಶನ ಮಾಡಲು ಸಾಧ್ಯವೇ ಆಗಿರಲಿಲ್ಲ. ನೂರಾರು ಕಿಲೋಮೀಟರ್ಗಳ ಪ್ರಯಾಣವನ್ನು ಸಾವಿರಾರು ರೂಪಾಯಿಗಳ ಸಾರಿಗೆ ವೆಚ್ಚವನ್ನು ಬರಿಸಿ ಪ್ರಯಾಣವನ್ನು ಮಾಡಲು ಆರ್ಥಿಕವಾಗಿ ಸಾಧ್ಯವಿರಲಿಲ್ಲ. ಇವರುಗಳಿಗೆ ಹಲವಾರು ದೇವಾಲಯಗಳು ಕನಸಾಗಿತ್ತು. ಇಂತಹ ಸಂದರ್ಭದಲ್ಲಿ ಲಕ್ಷಾಂತರ ಮಹಿಳೆಯರು ಇದರ ಉಪಯೋಗವನ್ನು ಪಡೆದುಕೊಂಡು ಹಲವಾರು ದಶಕಗಳ ತಮ್ಮ ದೇವಾಲಯಗಳ ದರ್ಶನದ ಕನಸನ್ನು ಈಡೇರಿಸಿಕೊಂಡಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಹಲವಾರು ಮಹಿಳೆಯರು ರಾಜ್ಯ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ವಿಶೇಷವಾಗಿ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ರವರಿಗೆ ತಮ್ಮ ಕೃತಜ್ಞತೆಯನ್ನ ಅನೇಕ ಪ್ರಕಾರದಲ್ಲಿ ಸಲ್ಲಿಸಿರುವುದು ಮಾಧ್ಯಮಗಳಲ್ಲಿ ಪ್ರಕಟಣೆ ಆಗಿರುತ್ತದೆ.
ಚುನಾವಣೆಗಳು ಬರುತ್ತವೆ ಹೋಗುತ್ತವೆ. ಫಲಿತಾಂಶಗಳು ಬೇರೆ ಬೇರೆ ಸ್ವರೂಪದಲ್ಲಿರುತ್ತವೆ. ಆದರೆ ಈ ಯೋಜನೆಗಳ ಹಿಂದೆ ಮಾನವೀಯತೆಯ ಸ್ಪರ್ಶವಿದೆ. ಈ ಯೋಜನೆಯ ಬಹಳಷ್ಟು ಫಲಾನುಭವಿಗಳು ಸಂಕಷ್ಟದ ಬದುಕಿನಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣೆಯ ಫಲಿತಾಂಶಗಳು ಏನೇ ಆಗಲಿ ಶಕ್ತಿ ಯೋಜನೆಯನ್ನು ಮುಂದುವರಿಸುವಂತಹ ಗಟ್ಟಿಯಾದಂತಹ ಮಾತುಗಳನ್ನಾಡಿರುವ ರಾಮಲಿಂಗಾರೆಡ್ಡಿ ರವರಿಗೆ ಮತ್ತೊಮ್ಮೆ ಅಭಿನಂದಿಸುತ್ತ, ಇದೇ ಧಾಟಿಯಲ್ಲಿ ಎಲ್ಲ ಸಚಿವರು ಕರ್ತವ್ಯವನ್ನ ನಿರ್ವಹಿಸುವುದರ ಜೊತೆಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಅನಾವಶ್ಯಕವಾದಂತಹ ಟೀಕೆಗಳನ್ನ ಮತ್ತು ಮಾತುಗಳನ್ನ ಆಡುವುದು ಸರಿಯಾದ ಕ್ರಮವಲ್ಲ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡವರ ಬದುಕಿಗೆ ನಿಜಕ್ಕೂ ಆಸರೆಯಾಗಿದೆ. ಇಂತಹ ಯೋಜನೆಗಳ ಬಗ್ಗೆ ಹಗುರವಾಗಿ ಮಾತನಾಡುವುದರಿಂದ ಈಗಾಗಲೇ ಗ್ಯಾರಂಟಿ ಯೋಜನೆಗಳ ಬಗ್ಗೆ ವ್ಯಂಗ್ಯವಾಗಿ ಮಾತನಾಡುವ ಹೊಟ್ಟೆ ತುಂಬಿದ ನೋವಿಲ್ಲದ ಬೆವರು ಸುರಿಸದ ಮಂದಿಯ ಮಾತುಗಳಿಗೆ ಪ್ರೋತ್ಸಾಹಿಸಿದಂತಾಗುತ್ತದೆ .
- ಕೆ ಎಸ್ ನಾಗರಾಜ್, ಬೆಂಗಳೂರು




