ಅಕ್ಕಿ,ರಾಗಿ,ಜೋಳ ತಗೊಂಡು ಸರ್ಕಾರಿ ಕೆಲಸ ಕೊಡಿ: ಉದ್ಯೋಗ ಆಕಾಂಕ್ಷಿಗಳು

4 years ago

ಬೆಂಗಳೂರು: ಫ್ರೀಡಂ ಪಾರ್ಕ್ ನಲ್ಲಿ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ನಡೆಸುತ್ತಿರುವ ಧರಣಿಯ ಹಿನ್ನೆಲೆಯಲ್ಲಿ, ಉದ್ಯೋಗಗಳಿಗೆ ಲಂಚ ಕೊಡುವ ಶಕ್ತಿಯಿಲ್ಲದ ಬಡ ಉದ್ಯೋಗಕಾಂಕ್ಷಿಗಳು ತಮ್ಮ ಪೋಷಕರು ಬೆಳೆದ ಅಕ್ಕಿ, ರಾಗಿ, ಜೋಳ ಮುಂತಾದ ಬೆಳೆಗಳ ಗಂಟನ್ನು ಸಿದ್ದರಾಮಯ್ಯ ಅವರ ಕೈಗಿತ್ತು ಸರ್ಕಾರಕ್ಕೆ ತಲುಪಿಸಿ ಉದ್ಯೋಗ ಕೊಡಿಸಿ ಎಂದು ಮನವಿ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಅವರು ಸರ್ಕಾರಿ ಉದ್ಯೋಗ ಪಡೆಯಬೇಕೆಂಬ ನಿರೀಕ್ಷೆಯಿಟ್ಟುಕೊಂಡು, ವರ್ಷಗಟ್ಟಲೆ ಓದಿ, ಪ್ರಾಮಾಣಿಕವಾಗಿ ಪರೀಕ್ಷೆ ಎದುರಿಸಿ ಸರ್ಕಾರದ ಅಕ್ರಮದ ಕಾರಣಕ್ಕೆ ಉದ್ಯೋಗ ವಂಚಿತರಾದಾಗ ಆಗುವ ನೋವು, ಹತಾಶೆ, ಸಂಕಟವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ ಎಂದರು.

ರಾಜ್ಯ ಸರ್ಕಾರ ಇನ್ನಾದರೂ ಪಾರದರ್ಶಕ ನೇಮಕಾತಿ ನಡೆಸಿ, ಪ್ರಾಮಾಣಿಕರಿಗೆ ಉದ್ಯೋಗ ಸಿಗುವಂತೆ ಮಾಡಬೇಕು, ಇಲ್ಲದಿದ್ದರೆ ಯುವ ಜನರ ಆಕ್ರೋಶದ ಅಲೆಗೆ ಬಿಜೆಪಿಯ ಭ್ರಷ್ಟ ಸರ್ಕಾರ ಕೊಚ್ಚಿ ಹೋಗುವ ದಿನ ದೂರವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Leave a Reply