ಬೆಂಗಳೂರು: ಜೆ.ಎಸ್.ಎಸ್.ಆಡಿಟೋರಿಯಂ ಸಭಾಂಗಣದಲ್ಲಿ ದಕ್ಷಿಣ ಜಿಲ್ಲಾ ಹಾಲು ಮತ ಕುರುಬ ಸಮಾಜ ಬೃಹತ್ ಸಮಾವೇಶ ಜರುಗಿತು. ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿಸೂರ್ಯ ಶಾಸಕರುಗಳಾದ ರವಿಸುಬ್ರಮಣ್ಯ, ಸಿ.ಕೆ.ರಾಮಮೂರ್ತಿ ಮತ್ತು ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳು, ಮಾಜಿ ಪಾಲಿಕೆ ಸದಸ್ಯರುಗಳಾದ ಬಿ.ಸೋಮಶೇಖರ್ ಅವರು ದೀಪ ಬೆಳಗಿಸಿ, ದಾಸಶೇಷ್ಠ ಕನಕದಾಸರು, ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಮಾವೇಶಕ್ಕೆ ಚಾಲನೆ ನೀಡಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ತೇಜಸ್ವಿಸೂರ್ಯರವರು ಮಾತನಾಡಿ ಮೂರು ವಿಚಾರದಲ್ಲಿ ಮನವಿ ಮಾಡುತ್ತೇನೆ ದೇಶ ಚುನಾವಣೆ ಬರುತ್ತಿದೆ ಕಾರ್ಪೋರೇಷನ್ ಅಥವಾ ವಿಧಾನಸಭಾ ಚುನಾವಣೆ ಅಲ್ಲ ದೇಶದ ಪ್ರಧಾನಿ ಆಯ್ಕೆ ಮಾಡುವ ಚುನಾವಣೆಯಾಗಿದೆ.
ಮತ್ತೋಮ್ಮೆ ಪ್ರಧಾನಿ ನರೇಂದ್ರಮೋದಿ ಅವರನ್ನು ಯಾಕೆ ಆಯ್ಕೆ ಮಾಡಬೇಕು ಎಂದು ವಿದ್ಯಾವಂತರಿಗೆ, ಪ್ರಜ್ಞಾವಂತರಿಗೆ ಅರಿವಿದೆ.
28ಲೋಕಸಭಾ ಕ್ಷೇತ್ರಗಳು ಇವೆ. ಕಾಂಗ್ರೆಸ್ ಪಕ್ಷ 12ಸ್ಥಾನಗಳಲ್ಲಿ ಕಾಂಗ್ರೆಸ್ ಸಚಿವರ ಮಕ್ಕಳಿಗೆ ಟಿಕೆಟ್ ನೀಡಿದ್ದಾರೆ. ಕಾಂಗ್ರೆಸ್ ಚುನಾವಣೆ ನಡೆಸುತ್ತಿರುವುದು ಮಕ್ಕಳ ಗೆಲ್ಲಿಸಲು , ಬಿಜೆಪಿ ಪಕ್ಷ ದೇಶ ಗೆಲ್ಲಿಸಲು ಅಭ್ಯರ್ಥಿಗಳನ್ನು ಹಾಕಿದ್ದಾರೆ.
ಮುಂದಿನ 25ವರ್ಷ ಭಾರತ ಭವಿಷ್ಯದ ಕುರಿತು ಯೋಜನೆ ರೂಪಿಸಿದೆ. ಅದರೆ ಕಾಂಗ್ರೆಸ್ ಪಕ್ಷ ಮಕ್ಕಳ ಅಭಿವೃದ್ದಿಗೆ ಶ್ರಮಿಸುತ್ತಿದೆ. ಭಾರತ ವಿಶ್ವಮಟ್ಟದಲ್ಲಿ ಮುನ್ನೆಡಸಲು ಮತ್ತೇ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕು.
ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ಲಕ್ಷಾಂತರ ಕೋಟಿ ರೂಪಾಯಿ ಹಗರಣ ನಡೆದಿದೆ. ಅದರೆ ಕಳೆದ 10ವರ್ಷ ಬಿಜೆಪಿ ಉತ್ತಮ ಆಡಳಿತ ನೀಡಿದೆ.
ಬಡವರಿಗೆ ಮೊದಲ ಬಾರಿಗೆ ಬ್ಯಾಂಕ್ ಅಕೌಂಟ್ ಮಾಡಿ, ಬಡವರ ಬಾಳಿಗೆ ಬಿಜೆಪಿ ಆಶಾಕಿರಣವಾಯಿತು. ಬೀದಿ ಬದಿಯ ವ್ಯಾಪಾರಿಗಳಿಗೆ 10 ಸಾವಿರದಿಂದ 1ಲಕ್ಷದವರಗೆ ಸುಲಭ ಸಾಲಸೌಲಭ್ಯ ಸಿಗುತ್ತಿದೆ. ಇದಕ್ಕೆ ಪ್ರಧಾನಿ ನರೇಂದ್ರಮೋದಿರವರು ಕಾರಣ.
ದೇಶ ಅಂತರಿಕ ಮತ್ತು ವಿದೇಶ ಭಯೋತ್ಪದಕ ಚಟುವಟಿಕೆಯನ್ನ ನಿಗ್ರಹ ಮಾಡಲಾಗಿದೆ. ಜಮುಕಾಶ್ಮಿರ ಆರ್ಟಿಕಲ್ 370 ಮತ್ತು 500ವರ್ಷಗಳ ಸತತ ಹೋರಾಟದ ಪ್ರತಿಫಲ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣವಾಗಿದೆ.
ಇಚ್ಚಾಶಕ್ತಿ ಮತ್ತು ದೇಶದ ಜನರು ಮತ ನೀಡಿದ ಪರಿಣಾಮ ಪ್ರಧಾನಿ ಮೋದಿ ಸಾಧನೆ ಮಾಡಲು ಸಾಧ್ಯವಾಯಿತು.
ಹಿಂದುಳಿದ ವರ್ಗಗಳ ಅಭಿವೃದ್ದಿಗೆ ನೆಹರೂರವರ ಕಾಲದಲ್ಲಿ ಶಿಫಾರಸ್ಸು ಮಾಡಲಾಗಿತ್ತು. ಅದರೆ ಪ್ರಧಾನಿ ನರೇಂದ್ರಮೋದಿರವರು ಆಡಳಿತದಲ್ಲಿ ಜಾರಿಗೆ ಬಂತು.
ನೀಟ್ ಪರೀಕ್ಷೆಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ನೀಡಲಾಯಿತು. ಜನರಿಗೆ ಸತ್ಯ ಹೇಳುವ ಸಮಯ ಬಂದಿದೆ. ಜನರನ್ನು ಜಾತಿ ಹೆಸರಿನಲ್ಲಿ ಒಡೆಯುವ ಕೆಲಸ ಮಾಡಲಾಗುತ್ತಿದೆ.
ಜಾತಿ, ದುಡ್ಡು ಮತ್ತು ಹೆಂಡ ಅಮಿಷಗಳಿಗೆ ಒಳಗಾಗಿ ಮತ ನೀಡಬೇಡಿ, ಬುದ್ದಿಶಕ್ತಿ ಉಪಯೋಗಿಸಿ ದೇಶದ ಹಿತಕ್ಕೆ ಮತ ನೀಡಿ ಎಂದು ಹೇಳಿದರು.
ನಿವೃತ್ತ ಐ.ಎ.ಎಸ್ ಅಧಿಕಾರಿ ಸಿ.ಸೋಮಶೇಖರ್, ರಘು ಕೌಟಿಲ್ಯ, ಮಾಜಿ ಬಿಬಿಎಂಪಿ ಸದಸ್ಯರುಗಳಾದ ಎ.ಹೆಚ್.ಬಸವರಾಜ್, ಮಾಲತಿ ಸೋಮಶೇಖರ್ ಯೋಶೋಧ ಲಕ್ಷ್ಮಿಕಾಂತ್, ಭಾರತಿ ರಾಮಚಂದ್ರ, ಬಿಜೆಪಿ ಮುಖಂಡರುಗಳಾದ ಲಕ್ಷ್ಮೀಕಾಂತ್,ದೊಡ್ಡಯ್ಯಾ ಅವರು ಉಪಸ್ಥಿತರಿದ್ದರು.




