ಮಕ್ಕಳು ಪ್ರತಿಭೆಯನ್ನು ಹೊರಹಾಕಲು ಬೇಸಿಗೆ ಶಿಬಿರಗಳು ಸೂಕ್ತ ವೇದಿಕೆ: ಸಿ.ಎಂ.ನರಸಿಂಹಮೂರ್ತಿ

3 years ago

ಚಾಮರಾಜನಗರ: ಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಬೇಸಿಗೆ ಶಿಬಿರಗಳು ಸೂಕ್ತ ವೇದಿಕೆಗಳಾಗಿವೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಸದಸ್ಯ ಸಿಎಂ ನರಸಿಂಹಮೂರ್ತಿ ಹೇಳಿದರು.

ತಾಲೂಕಿನ ಸಿದ್ದಯ್ಯನಪುರ ಗ್ರಾಮದಲ್ಲಿ. ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಕನಸು ಸಾಂಸ್ಕೃತಿಕ ಟ್ರಸ್ಟ್ ಏರ್ಪಡಿಸಿದ್ದ ಕನಸಿನ ಚಿನ್ನರ ಲೋಕ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಬೇಸಿಗೆ ಶಿಬಿರ ಮಕ್ಕಳ ಸರ್ವತೋಮುಖ ಕಲಿಕೆಗೆ ಉತ್ತಮ ವೇದಿಕೆಯಾಗಿದೆ. ಮಕ್ಕಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸುವುದರಿಂದ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿದಂತಾಗುತ್ತದೆ. ಇದರಿಂದ ಅವರ ಆಸಕ್ತಿಯ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಪ್ರೇರೇಪಿಸಿದಂತಾಗುತ್ತದೆ ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ಇಂತಹ ಶಿಬಿರವನ್ನು ಏರ್ಪಡಿಸಿರುವ ಕನಸು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷೆ ಪುಷ್ಪಲತಾ ಅವರು ಅತ್ಯುತ್ತಮ ಸೇವೆ ಮಾಡುತ್ತಿದ್ದಾರೆ .ಈಗಾಗಲೇ ಇವರು ಉತ್ತಮ ರಂಗನಟಿ ಎಂದು ಗುರುತಿಸಿಕೊಂಡಿದ್ದಾರೆ. ಸಿನಿಮಾ ರಂಗದಲ್ಲಿಯೂ ಇವರು ಅಭಿನಯಿಸುವುದರ ಮೂಲಕ ಸಿದ್ದಯ್ಯನಪುರಕ್ಕೆ ಹೆಚ್ಚಿನ ಕೀರ್ತಿ ತಂದಿದ್ದಾರೆ ಎಂದರು.

ಮೈಸೂರು ಮೈಮ್ ರಂಗ ನಿರ್ದೇಶಕ ಗೌತಮ್ ಮಾತನಾಡಿ ಶಿಬಿರದಲ್ಲಿ ಮಕ್ಕಳಿಗೆ ಕಥೆ, ನಾಟಕ, ಸಾಹಿತ್ಯ, ಆಟ – ಪಾಠ ತಾಳ, ಕುಣಿತ, ಸಂಗೀತ ಸೇರಿದಂತೆ ವಿವಿಧ ಕಲಾಪ್ರಕಾರಗಳನ್ನು ಕಲಿಸಿಕೊಟ್ಟಿದ್ದಾರೆ. ಇದರಿಂದ ಮಕ್ಕಳ ಜ್ಞಾನವಿಕಾಸಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು.

ಸಮಾರಂಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪುಟ್ಟರಾಜು , ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಹೊನ್ನಮ್ಮ, ಅಂತರರಾಷ್ಟ್ರೀಯ ತಬಲವಾದಕ ಆರ್ ರಘುನಾಥ,ಜಾನಪದ ಗಾಯಕ ಲಕ್ಷ್ಮಿ ರಾಮ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಸವಣ್ಣ ಗ್ರಾಮ ಪಂಚಾಯಿತಿ ಸದಸ್ಯ ರೇಖಾ ಮಹದೇವಸ್ವಾಮಿ ಮಹದೇವಮ್ಮ ಸಿದ್ದರಾಜು ಸೋಮಣ್ಣ, ಮಂಜು, ಶೈಲಜಾ ಗೋವಿಂದರಾಜು, ಎಸ್ ಟಿ ಎಂ ಸಿ ಸದಸ್ಯ ರೇವಣ್ಣ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಈಶ್ವರ್, ಚೆನ್ನಂಜೆಶ್ವರ ನೀರು ಬಳಕೆದಾರರ ಸಂಘದ ಅಧ್ಯಕ್ಷ ಗೋವಿಂದರಾಜು ಮಹಾನಾಯಕ ಡಾ ಬಿ ಆರ್ ಅಂಬೇಡ್ಕರ್ ಯುವಕರ ಸಂಘದ ಎನ್ ಶೇಷಣ್ಣ ಮಹದೇವಸ್ವಾಮಿ ಎನ್ಎಂ ಮಹೇಶ್, ಗ್ರಾಮದ ಯಜಮಾನರುಗಳಾದ ಮರಿ ಕೂಸಯ್ಯ ಹನುಮಯ್ಯ ಪಟ್ಟಿ ಸಿದ್ದಯ್ಯ ಭಾಗವಹಿಸಿದ್ದರು . ಎಸ್ ಡಿ ಎಂ ಸಿ ಅಧ್ಯಕ್ಷ ಚಂದ್ರಕಾಂತ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರಾದ ನಾರಾಯಣ ಅವರಿಗೆ ರಾಜ್ಯ ಪ್ರಶಸ್ತಿ ಬಂದದ್ದಕ್ಕಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು.

Leave a Reply