ಬೆಸ್ಕಾಂ ವಿದ್ಯುತ್ ತಂತಿ ಬಿದ್ದು ವಿದ್ಯಾರ್ಥಿನಿಗೆ ಗಂಭೀರ ಗಾಯ

3 years ago

#student #seriously #injured #BESCOM #power #line #fell

ಬೆಂಗಳೂರು: ಇಂದು ಮಧ್ಯಾಹ್ನ 1:30 ಗಂಟೆ ಸುಮಾರಿಗೆ ನಗರದ ಬಿಟಿಎಂ ಲೇಔಟ್ ಎಸ್ ಜಿ ಪಾಳ್ಯ ಬಳಿ ವಿದ್ಯುತ್ ತಂತಿ ಬಿದ್ದು ಪಿಯುಸಿ ಓದುತ್ತಿದ್ದ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದರು.

ಯುವತಿಯ ದೇಹ 40% ಸುಟ್ಟು ಹೋಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಪ್ರಿಯಾ ಕ್ರೈಸ್ಟ್ ಕಾಲೇಜಿನಲ್ಲಿ ಮೊದಲನೇ ಪಿಯುಸಿ ಓದುತ್ತಿದ್ದು ಮೂಲತಹ ಡೆಲ್ಲಿ ಮೂಲದವರಾಗಿದ್ದಾರೆ. ಮಧ್ಯಾಹ್ನ ಕಾಲೇಜು ಮುಗಿಸಿ ಊಟಕ್ಕೆ ಎಂದು ಪಿಜಿಗೆ ತೆರಳುವಾಗ ನಡೆದ ಘಟನೆ ನಡೆದಿದೆ. ಪ್ರಿಯಾ ಜೊತೆಗೆ ಇನ್ನೂ ಇಬ್ಬರು ಸ್ನೇಹಿತರು ಕೂಡ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೆಸ್ಕಾಂನ 11 ಕೆ ವಿ ವಿದ್ಯುತ್ ತಂತಿ ಬಿದ್ದು ಪ್ರಿಯಾ ಗಂಭೀರವಾಗಿ ಗಾಯಗೊಂಡರು.

Leave a Reply