’ಸಂಬಂಧಗಳು’ ಕಥಾಸ್ಪರ್ಧೆಗೆ ಮುಕ್ತ ಆಹ್ವಾನ

5 years ago

ದಯವಿಟ್ಟು ಆಸಕ್ತ ಕಥೆಗಾರ/ಬರಹಗಾರರಿಗೆ ಶೇರ್/ಪಾರ್ವರ್ಡ್ ಮಾಡಿ, ಸಹಕರಿಸಿರಿ

ಆಜಾದಿ ಕಾ ಅಮೃತಮಹೋತ್ಸವ (75ನೇಯ ಸ್ವಾತಂತ್ರ್ಯೋತ್ಸವ) ಆಚರಣೆ ಪ್ರಯುಕ್ತ ಗಣಕರಂಗ(ರಿ), ಧಾರವಾಡ ಆಯೋಜಿಸುತ್ತಿರುವ ’ಸಂಬಂಧಗಳು’ ಕಥಾಸ್ಪರ್ಧೆಗೆ ಮುಕ್ತ ಆಹ್ವಾನ

ಕೋರೋನಾ ಲಾಕ್ ಡೌನ್ ಸಮಯದಲ್ಲಿ ಸಂಬಂಧಗಳು ಸಾವಿನಾಟದೆದುರು ಅರ್ಥ ಬದಲಿಸಿಕೊಂಡವು. ಮನುಜ ಸಂಬಂಧಗಳ ಮಹತ್ವದ ಕುರಿತು ದೇವನೂರ ಮಹದೇವರವರು ಸಂಬಂಜ ಅನ್ನಾದು ದೊಡ್ದು ಕನಾ ಎಂದಿದ್ದಾರೆ. ಈ ಹಿನ್ನಲೆಯಲ್ಲಿ ಈ ಕಥಾಸ್ಪರ್ಧೆ ವಾಟ್ಸಪ್ ದಲ್ಲಿ ಆಯೋಜಿತವಾಗಿದೆ.

ಸ್ಪರ್ಧೆಯ ದಿನಾಂಕ : 15-08-2021, ರವಿವಾರ

ಸ್ಪರ್ಧೆಯ ಸಮಯ : ಸಾಯಂಕಾಲ 5:00ಗಂಟೆಯಿಂದ 8:00ಗಂಟೆಯವರೆಗೆ

ಕಥಾಸ್ಪರ್ಧೆ ನಡೆಯುವ ವಾಟ್ಸಪ್ ಗುಂಪುಗಳು :
ಗಣಕರಂಗ ಕಥಾವಿಹಾರ-1, ಗಣಕರಂಗ ಕಥಾವಿಹಾರ-2, ಗಣಕರಂಗ ಕಥಾವಿಹಾರ-3 ಮತ್ತು ಗಣಕರಂಗ ಕಥಾವಿಹಾರ-4.

ಕಥಾಸ್ಪರ್ಧೆಯ ನಿಯಮಗಳು:

1. “ಸಂಬಂಧಗಳು” ವಿಷಯಾಧಾರಿತವಾಗಿ ಇಲ್ಲಿಯವರೆಗೆ ಎಲ್ಲಿಯೂ ಪ್ರಕಟವಾಗಿರದ, ಉತ್ತಮ ಕಥಾಹಂದರದ. ಒಂದು ಸಾವಿರ ಪದಗಳಿಗೆ ಮೀರದಂತೆ ಇರುವ ಸ್ವರಚಿತ ಆಧುನಿಕ ಪರಿಕಲ್ಪನೆಯ ಕಥೆಗೆ ನಿಮ್ಮದೇ ಆಕರ್ಷಕ ಶೀರ್ಷಿಕೆ ಕಡ್ಡಾಯವಾಗಿ ಹಾಕಬೇಕು.

2. ಸ್ವರಚಿತ ಕಥೆಯ ಶೀರ್ಷಿಕೆಯ ಮೊದಲು “ಆಜಾದಿ ಕಾ ಅಮೃತಮಹೋತ್ಸವ ಗಣಕರಂಗ ಕಥಾ ಸ್ಪರ್ಧೆ” ತಲೆಬರಹ ಎಂದು ಕಡ್ಡಾಯವಾಗಿ ಹಾಕಿರಬೇಕು. ಹಾಕದಿದ್ದರೆ ಸ್ಪರ್ಧೆಗೆ ಪರಿಗಣಿಸುವುದಿಲ್ಲ.

3. ಕಥೆಯ ಕೊನೆಯಲ್ಲಿ ನಿಮ್ಮ ಹೆಸರು, ಸಂಪೂರ್ಣ ವಿಳಾಸ (ಪಿನ್ ಕೋಡ್ ಸಹಿತ), ಮೊಬೈಲ್ ಸಂಖ್ಯೆ ಮತ್ತು ಇತ್ತೀಚಿನ ಪೋಟೋ (ಪ್ರಮಾಣಪತ್ರದಲ್ಲಿ ಹಾಕಲು) ಕಳಿಸಬೇಕು.

4. ಕಥೆಯ ಕೈಬರಹದ ಪೋಟೋ, ಪಿಡಿಎಪ್ ಆವೃತ್ತಿ ಕಳಿಸಿದರೆ ತಿರಸ್ಕರಿಸಲಾಗುವುದು.ಕಥೆಯು ಕಡ್ಡಾಯವಾಗಿ ಮೊಬೈಲಿನಲ್ಲಿ ಟೈಪಿಸಿ (ಯುನಿಕೋಡ್/ಅಕ್ಷರರೂಪದಲ್ಲಿ) ಕಳಿಸಬೇಕು.

5. ಒಬ್ಬರು ಒಂದೇ ಕಥೆ ಕಳಿಸಬೇಕು. ವಯಸ್ಸಿನ ನಿರ್ಭಂಧವಿಲ್ಲ.

6. ಫಲಿತಾಂಶ ಪ್ರಕಟವಾಗುವವರೆಗೆ ಕಥೆಯನ್ನು ಬೇರೆಲ್ಲೂ ಪ್ರಕಟಿಸಬಾರದು. ಪ್ರಕಟಿಸಿದರೆ ಸ್ಪರ್ಧೆಗೆ ಪರಿಗಣಿಸುವುದಿಲ್ಲ.

7. ಕಥಾಸ್ಪರ್ಧೆಯಲ್ಲಿ ಯಾರನ್ನೇ ಆಗಲಿ, ಯಾವುದೇ ರೀತಿಯ ಅವಹೇಳನಕಾರಿ, ಅಪಮಾನಿಸುವ, ಸಮಾಜವಿರೋಧಿ, ಸಂವಿಧಾನ ವಿರೋಧಿ, ದೇಶದ ಭಾವೈಕ್ಯತೆಗೆ ದಕ್ಕೆ ತರುವ ವಿಷಯಗಳಿರಬಾರದು. ಹಾಗೇನಾದರೂ ಕಂಡು ಬಂದರೆ ಕಥೆಯನ್ನು ಆರಂಭದಲ್ಲಿಯೇ ತಿರಸ್ಕರಿಸಲಾಗುವುದು.

8. ಕಥೆಯನ್ನು ಕಡ್ಡಾಯವಾಗಿ ಸ್ಪರ್ಧೆ ನಡೆಯುವ ಗಣಕರಂಗ ಕಥಾವಿಹಾರ ವಾಟ್ಸಪ್ ಗುಂಪಿನಲ್ಲಿ ಒಂದೇ ಸಲ, ಒಂದೇ ಗುಂಪಿನಲ್ಲಿ ಹಾಕಬೇಕು. ಸಂಯೋಜಕರ ಮತ್ತು ಗಣಕರಂಗ ಮುಖ್ಯಸ್ಥರ ವೈಯಕ್ತಿಕ ನಂಬರಿಗೆ ವಾಟ್ಸಪ್ ಮಾಡುವ/ಕಳಿಸುವ ಕಥೆಗಳನ್ನು ಪರಿಗಣಿಸುವುದಿಲ್ಲ. ಸಹಕರಿಸಿರಿ.

9. ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆಯುವ ಮೂವರು ಕಥೆಗಾರರಿಗೆ ಪುಸ್ತಕ ಗೌರವ ಹಾಗೂ ವಿಶೇಷ ಉಡುಗೊರೆ ನೀಡಿ ಗೌರವಿಸಲಾಗುವುದು. ಉಳಿದ ಐವರು ಕಥೆಗಾರರಿಗೆ ತೀರ್ಪುಗಾರರ ಮೆಚ್ಚುಗೆಯ (ಉತ್ತಮ) ಕಥೆಗಳಿಗೆ ಬಹುಮಾನವಾಗಿ ಪುಸ್ತಕ ಗೌರವ ಕಳಿಸಲಾಗುವುದು. ಆದರೆ ಬಹುಮಾನ ಪಡೆಯಲು ಬಹುಮಾನಿತರು ಫಲಿತಾಂಶ ಪ್ರಕಟವಾದ ತಕ್ಷಣವೇ ಗಣಕ ರಂಗಕ್ಕೆ ಕೃತಜ್ಞತೆ ಪೂರ್ವಕವಾಗಿ ತಮ್ಮ ಕಥಾ ವಾಚನದ ವಿಡಿಯೋ ಕಳಿಸಬೇಕು. ನಮ್ಮ ಸಂಸ್ಥೆಯ ದಾಖಲಾತಿಗಾಗಿ ಸಹಕರಿಸಿರಿ.

10. ಫಲಿತಾಂಶ ಪ್ರಕಟಣೆಯ ನಂತರ ಆಯೋಜಿಸುವ ಅಭಿನಂಧನೆ ಸಲ್ಲಿಸುವ ‘ಗೂಗಲ್ ಮಿಟ್’ ಕಾರ್ಯಕ್ರಮದಲ್ಲಿ ಆರಂಭದಿಂದ ಕೊನೆಯವರೆಗೆ ಕಡ್ಡಾಯವಾಗಿ ಭಾಗವಹಿಸಬೇಕು. ಪ್ರಮಾಣ ಪತ್ರ ಪಡೆಯಲು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರೂ ಗೂಗಲ್ ಮೀಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ಪರ್ಧಾ ವಿಜೇತರಿಗೂ ಹಾಗೂ ತೀರ್ಪುಗಾರರಿಗೂ ಅಭಿನಂದನೆಗಳನ್ನು ಸಲ್ಲಿಸಬೇಕು. ಇಲ್ಲವಾದರೆ ಪ್ರಮಾಣ ಪತ್ರ ಸಿಗಲಾರದು. ದಯವಿಟ್ಟು ಸಹಕರಿಸಿ.

11. ಗೌರವಾನ್ವಿತ ತೀರ್ಪುಗಾರರ ತೀರ್ಪು ಅಂತಿಮವಾಗಿರುತ್ತದೆ. ತೀರ್ಪಿಗೆ ಎಲ್ಲ ಸ್ಪರ್ಧಿಗಳು ಬದ್ಧರಾಗಿರಬೇಕು. ಈ ವಿಷಯದಲ್ಲಿ ಯಾವುದೇ ಚರ್ಚೆಗೆ ಅವಕಾಶವಿಲ್ಲ. ಸಹಕರಿಸಿರಿ.

12. ಮುಕ್ತ ಅವಕಾಶದ ಈ ಸ್ಪರ್ಧೆಯಲ್ಲಿ ವಿಶ್ವದ ಎಲ್ಲಾ ಭಾಗಗಳಿಂದ ಆಸಕ್ತರೆಲ್ಲರೂ ಭಾಗವಹಿಸಬಹುದು. ಮುಂಚಿತವಾಗಿ ನೋಂದಣಿ ಇಲ್ಲ. ನೇರವಾಗಿ ಕಥೆಯನ್ನು ಸ್ಪರ್ಧೆಯ ದಿನ, ಸ್ಪರ್ಧೆಯ ಸಮಯದಲ್ಲಿ ಕಳಿಸಬೇಕು. ಸ್ಪರ್ಧಾಶಿಸ್ತನ್ನು ಕಟ್ಟುನಿಟ್ಟಾಗಿ ಪಾಲಿಸದವರನ್ನು ತಕ್ಷಣವೇ ವಾಟ್ಸಪ್ ಗುಂಪಿನಲ್ಲಿ ಬ್ಲಾಕ್ ಮಾಡಲಾಗುವುದು. ಅಂಥವರನ್ನು ಮುಂದಿನ ನಮ್ಮ ಯಾವುದೇ ಸ್ಪರ್ಧೆಗಳಿಗೆ ಪರಿಗಣಿಸುವುದಿಲ್ಲ.

13. ದಯವಿಟ್ಟು ಸ್ಪರ್ಧೆ ನಡೆಯುವಾಗ ಸ್ಪರ್ಧೆಯ ವಿಷಯದ ಹೊರತಾಗಿ ಬೇರೆ ಏನನ್ನೂ ಸ್ಪರ್ಧೆ ನಡೆಯುವ ಗಣಕರಂಗ ಕಥಾವಿಹಾರ ವಾಟ್ಸಪ್ ಗುಂಪುಗಳಲ್ಲಿ ಹಾಕಬಾರದು. ದಯವಿಟ್ಟು ಸಹಕರಿಸಬೇಕು.

14. ಕೃತಿಚೋರತನಕ್ಕೆ ಸಂಬಂಧಿಸಿದಂತೆ ದೇಶದ ಕಾನೂನು ಕ್ರಮಗಳಿಗೆ ಆಯಾ ಲೇಖಕರು ಜವಾಬ್ದಾರರು. ಗಣಕರಂಗ ಸಂಸ್ಥೆ ಹೊಣೆಗಾರವಲ್ಲ. ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ತಿಳಿಸಿದರೆ ಗಣಕರಂಗ ಸಂಸ್ಥೆಯು ಅಂತಹ ಕಥೆಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ. ಸಹಕಾರವಿರಲಿ.

15. ಸ್ಪರ್ಧೆಯ ನಂತರ ಸೂಕ್ತವೆನಿಸುವ ಕಥೆಗಳನ್ನು ಸಾಧ್ಯವಾದರೆ ಗಣಕರಂಗ ಪ್ರಕಾಶನದಿಂದ ಮುದ್ರಣ ಅಥವಾ ಡಿಜಿಟಲ್ ಆವೃತ್ತಿ ಸೇರಿದಂತೆ ಆಧುನಿಕ ತಂತ್ರಜ್ಞಾನದ ಸೂಕ್ತ ಆವೃತ್ತಿ/ರೂಪದಲ್ಲಿ ಪ್ರಕಟಿಸುವಿಕೆಯ ಹಕ್ಕನ್ನು ಗಣಕರಂಗ ಪ್ರಕಾಶನವು ಹೊಂದಿರುತ್ತದೆ. ಸಹಕರಿಸಿರಿ.

16. ನಿಗದಿಪಡಿಸಿದ ದಿನಾಂಕ ಮತ್ತು ಸಮಯದಲ್ಲಿ ನಿಮ್ಮ ಸ್ವರಚಿತ ಕಥೆಗಳನ್ನು ಗಣಕರಂಗ ಕಥಾವಿಹಾರ ದ ಯಾವುದಾದರೂ ಒಂದು ಗುಂಪಿನಲ್ಲಿ ಹಾಕಬೇಕು. ಮೊದಲು ಮತ್ತು ನಂತರ ಬಂದ ಕಥೆಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ. ಸಹಕರಿಸಿರಿ.

17. ಈ ಕೆಳಗಿನ ಯಾವುದಾದರು ಒಂದು ಲಿಂಕನ್ನು ಒತ್ತುವ ಮೂಲಕ ನೀವು ಸ್ಪರ್ಧೆಯ ಗುಂಪಿಗೆ ಸೇರಿಕೊಳ್ಳಬಹುದು.

ಗಣಕರಂಗ ಕಥಾವಿಹಾರ-4

https://chat.whatsapp.com/DmQGG7ZwyDd26fEzzJb6xr

ಗಣಕರಂಗ ಕಥಾವಿಹಾರ -2

https://chat.whatsapp.com/IDnTlx6qhQq6f7Qu5EJplQ

ಗಣಕರಂಗ ಕಥಾವಿಹಾರ -3
https://chat.whatsapp.com/BiCnJWjKIFc3E7XBo06LbF

ಸ್ಪರ್ಧೆಯ ನಿಯಮಗಳನ್ನು ದಯವಿಟ್ಟು ಸಾವಧಾನವಾಗಿ ಸಂಪೂರ್ಣ ಓದಿಕೊಳ್ಳಿ, ಅನಗತ್ಯ ವಿಚಾರಿಸಬೇಡಿ.

ಈ ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿಗೆ ಮಾತ್ರ ಸಂಪರ್ಕಿಸಿರಿ :

ಗಣಪತಿ ಗೋ ಚಲವಾದಿ (ಗಗೋಚ),
ಸ್ಪರ್ಧೆಯ ಸಂಯೋಜಕರು-9620685599 ಮತ್ತು 9740691429

ಮತ್ತು

ಸಿದ್ಧರಾಮ ಹಿಪ್ಪರಗಿ, ಮುಖ್ಯಸ್ಥರು, ಗಣಕರಂಗ (ರಿ), ಧಾರವಾಡ. 9845109480, 9902674005. ganakaranga@gmail.com

Leave a Reply