ಬೆಂಗಳೂರು: ರಾಜ್ಯಾದ್ಯಂತ ಕರ್ನಾಟಕ ರಾಜ್ಯಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ( ಸಿ ಐ ಟಿ ಯು) ನೇತೃತ್ವದಲ್ಲಿ ರಾಜ್ಯದಾದ್ಯಂತ ಸಾವಿರಾರು ಕಟ್ಟಡ ನಿರ್ಮಾಣ ಕಾರ್ಮಿಕರು ತಮ್ಮ ಹಲವು ಬೇಡಿಕೆಗಳಿಗಾಗಿ ಬೆಂಗಳೂರಿನ ಕಲ್ಯಾಣ ಮಂಡಳಿ ಹಾಗೂ ರಾಜ್ಯದ ಹಲವು ಜಿಲ್ಲೆ ತಾಲೂಕು ಕಾರ್ಮಿಕ ಇಲಾಖೆ ಮುಂದೆ ಪ್ರತಿಭಟನೆ ನಡೆಸಿದರು.
ಬೇಡಿಕೆಗಳು:
ವಿದ್ಯಾರ್ಥಿ ವೇತನ ಪಡೆಯಲು ರೇಷನ್ ಕಾರ್ಡ್ ಕಡ್ಡಾಯ ವಿರೋಧಿಸಿ ಮನೆ ನಿರ್ಮಾಣಕ್ಕೆ 5 ಲಕ್ಷ ನಗದು ಸಹಾಯಧನ ನಗದು ರಹಿತ ವೈದ್ಯಕೀಯ ಸೌಲಭ್ಯ ಇಲಾಖೆಯಲ್ಲಿ ಕಾರ್ಮಿಕರ ಸಲ್ಲಿಸಿರುವ ಅರ್ಜಿಗಳ ಶೀಘ್ರ ವಿಲೇವಾರಿ ಕಲ್ಯಾಣ ಮಂಡಳಿಯಲ್ಲಿ ಸಂಘಕ್ಕೆ ಪ್ರಾತಿನಿಧ್ಯ ಮತ್ತು ಕಲ್ಯಾಣಮಂಡಳಿ ಖರೀದಿಗಳಲ್ಲಿ ನಡೆದಿರುವ ವ್ಯಾಪಕ ಭ್ರಷ್ಟಾಚಾರ, ಪಿಂಚಣಿ ಪಡೆಯಲು ವಯೋಮಿತಿ ಏರಿಕೆ, ಮುಂತಾದ ಬೇಡಿಕೆಗಳಿಗೆ ಒತ್ತಾಯಿಸಿ ಪ್ರತಿಭಟನೆ ನಡೆಯಿತು
ಬೆಂಗಳೂರಿನ ಕಲ್ಯಾಣ ಮಂಡಳಿ ಮುಂದೆ ಬೆಂಗಳೂರು ದಕ್ಷಿಣ, ಉತ್ತರ, ಉಡುಪಿ, ಕುಂದಾಪುರ ಹಾಗೂ ಬೈಂದೂರು ತುಮಕೂರು, ಕೋಲಾರ ಹಾಗೂ ಮಂಡ್ಯ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಕಾರ್ಮಿಕರು ಬೆಳೆಗ್ಗೆಯಿಂದ ಮಧ್ಯಾನ್ಹದವರೆಗೂ ಮಂಡಳಿ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ದ.ಕನ್ನಡ ಜಿಲ್ಲೆಯ ಮಂಗಳೂರು, ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಗದಗ, ಕೊಪ್ಪಳ, ಕಲಬುರಗಿ, ರಾಯಚೂರು ಜಿಲ್ಲೆಯ ಹಟ್ಟಿ, ಲಿಂಗಸುಗೂರು, ದೇವದುರ್ಗ, ಬೀದರ್ ಜಿಲ್ಲೆಯ ಹುಮ್ನಾಬಾದ್, ವಿಜಯನಗರ ಜಿಲ್ಲೆಯ ಹೊಸಪೇಟೆ, ಬಳ್ಳಾರಿ ಜಿಲ್ಲೆಯ ಕಂಪ್ಲಿ,ಮೈಸೂರು, ಕೊಡಗು, ಚಿತ್ರದುರ್ಗ ಹಾಗೂ ದಾವಣಗೆರೆ ಸೇರಿ ಇನ್ನೂ ಹಲವಾರು ಜಿಲ್ಲಾ ಹಾಗೂ ತಾಲೂಕು ಕಾರ್ಮಿಕ ಕಚೇರಿಗಳ ಮುಂಭಾಗದಲ್ಲಿ ಈ ಯಶಸ್ವಿ ಹೋರಾಟಗಳನ್ನು ಸಂಘಟಿಸಲಾಗಿದೆ.
ಬೆಂಗಳೂರಿನ ಕಲ್ಯಾಣ ಮಂಡಳಿ ಮುಂದೆ ಆರಂಭಗೊಂಡ ಈ ಅನಿರ್ದಿಷ್ಟ ಧರಣಿ ಹೋರಾಟವನ್ನು ರಾಜ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ಬೆಂಗಳೂರು ಜಿಲ್ಲೆ ಸಿಐಟಿಯು ಅಧ್ಯಕ್ಷ ಬಿ ಎನ್ ಮಂಜುನಾಥ್ cwfi ಜಿಲ್ಲಾ ಅಧ್ಯಕ್ಷ ಕೆ.ಎಸ್.ಲಕ್ಷ್ಮೀ, ಪ್ರಧಾನ ಕಾರ್ಯದರ್ಶಿ ಲಿಂಗರಾಜ್, ಬೆಂಗಳೂರು ಉತ್ತರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಹರೀಶ್ ಹಾಗೂ ಖಜಾಂಚಿ ಹನುಮಂತರಾವ್ ಹವಾಲ್ದಾರ್ ಉಡುಪಿ ಜಿಲ್ಲೆಯ ಮುಖಂಡರಾದ ಸುರೇಶ್ ಕಲ್ಲಾಗಾರ, ಶೇಖರ್ ಬಂಗೇರ ಮುಂತಾದವರು ಮಾತನಾಡಿದರು
ಮಧ್ಯಾನ್ಹದ ಬಳಿಕ ಕಲ್ಯಾಣ ಮಂಡಳಿ ಸಿಇಓ ಹಾಗೂ ಕಾರ್ಯದರ್ಶಿ ಗುರುಪ್ರಸಾದ್, ಜಂಟಿ ಕಾರ್ಯದರ್ಶಿ ಶಿವಪುತ್ರ ಬಾಬುರಾವ್ ಮಾನವಿ ಸ್ವೀಕರಿಸಿ CWFI ಸಲ್ಲಿಸಿದ 10 ಪ್ರಮುಖ ಬೇಡಿಕೆಗಳಾದ ಶೈಕ್ಷಣಿಕ ಅರ್ಜಿ ಹಾಕುವಾಗ ಪಡಿತರ ಚೀಟಿ ಕಡ್ಡಾಯ ರದ್ದು, ಪಿಂಚಣಿ ವಯೋಮಿತಿ ಏರಿಕೆ, ಬಾಕಿ ಶೈಕ್ಷಣಿಕ ಅರ್ಜಿಗಳಿಗೆ ಹಣ ಪಾವತಿ ಬೇಡಿಕೆಗಳನ್ನು ಶೀಘ್ರದಲ್ಲಿ ಪರಿಹಾರ ದೊರೆಕಿಸುವದಾಗಿ ಭರವಸೆ ನೀಡಿದರು.
ಇತರೆ ಪ್ರಮುಖ ಬೇಡಿಕೆಗಳ ಬಗೆಹರಿಸಲು cwfi ಕಾರ್ಮಿಕ ಪ್ರತಿನಿಧಿಗಳ ಸಭೆಯೊಂದನ್ನು ಏಪ್ರಿಲ್ ಮೊದಲವಾರ ಕರೆಯುವುದಾಗಿ ಭರವಸೆ ನೀಡಿದರು. ಮತ್ತು ನಿನ್ನೆ ಸುಳ್ಯದಲ್ಲಿ ಮಣ್ಣು ಕುಸಿದು ಸಾವನ್ನಪ್ಪಿದ ಮೂರು ಜನ ಕಾರ್ಮಿಕ ಕುಟುಂಬಗಳಿಗೆ ಎರಡು ದಿನದೊಳಗೆ ಪರಿಹಾರದ ಚೆಕ್ ನೀಡುವುದಾಗಿ ಸಭೆಯಲ್ಲಿ ಪ್ರಕಟಿಸಿದರು. ಈ ಭರವಸೆ ಮೇರೆಗೆ ಈ ಅನಿರ್ದಿಷ್ಟ ಹೋರಾಟವನ್ನು ಕೈ ಬಿಡಲು ಮನವಿ ಮಾಡಿದರು.
ವಸತಿಗೆ ಐದು ಲಕ್ಷ ಸಹಾಯಧನ ನೀಡುವುದು, ಮಂಡಳಿ ನಿಧಿ ದುರುಪಯೋಗ ಮೊದಲಾದ ಬೇಡಿಕೆಗಳಿಗಾಗಿ ಜೂನ್ ಎರಡನೇ ವಾರದಲ್ಲಿ ಇತರೆ ಕಾರ್ಮಿಕ ಸಂಘಗಳೊಂದಿಗೆ ಸೇರಿ ಐಕ್ಯ ಹೋರಾಟವನ್ನು ರೂಪಿಸುವ ತೀರ್ಮಾನದೊಂದಿಗೆ ಇಂದಿನ ಪ್ರತಿಭಟನೆ ಕೈ ಬಿಡಲಾಯಿತು.
ರಾಜ್ಯಾದ್ಯಂತ ನಡೆದ ಈ ಹೋರಾಟವನ್ನು ಯಶಸ್ವಿಯಾಗಿಸಿದ ಕಟ್ಟಡ ಕಾರ್ಮಿಕರಿಗೆ ಕರ್ನಾಟಕ ರಾಜ್ಯಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ( ಸಿ ಐ ಟಿ ಯು) ಅಭಿನಂದನೆ ಸಲ್ಲಿಸಿದೆ.




