ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ವಿವಿಧ ಕಟ್ಟಡ ನಿರ್ಮಾಣ ಕಾರ್ಮಿಕ ಸಂಘಗಳು ರಾಜ್ಯಾದ್ಯಂತ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ CITU, AITUC, INTUC, NCL, HMS, AICCTU,AIUTUC ಹಾಗು TUCC ಸಂಯೋಜಿತ ಸಂಘಗಳಲ್ಲದೆ ಹಲವು ಸ್ವತಂತ್ರ ಸಂಘಗಳು ಇಂದಿನಿಂದ ಜುಲೈ 3 ರವರೆಗೆ ನಡೆಯುವ ಈ ಹೋರಾಟದಲ್ಲಿ ಭಾಗವಹಿಸುತ್ತಿವೆ.
ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕ ಇಲಾಖೆಯಲ್ಲಿ ಸೌಲಭ್ಯಗಳನ್ನು ನೀಡುವಲ್ಲಿ, ವಿದ್ಯಾರ್ಥಿ ವೇತನ ವಿತರಣೆಯಲ್ಲಿ ,ವಿವಿಧ ಬಗೆಗೆ ಟೆಂಡರ್ ಗಳನ್ನು ನೀಡುವಲ್ಲಿ,ನೇಮಕಾತಿಗಳಲ್ಲಿ ವ್ಯಾಪಕ ಭ್ರಷ್ಟಾಚಾರಗಳು ನಡೆಯುತ್ತಿದ್ದು ಅದರಲ್ಲಿ ಅಧಿಕಾರಿಗಳು ನೇರವಾಗಿ ಶಾಮೀಲಾಗಿದ್ದಾರೆ ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು. ಮತ್ತು ಎಲ್ಲಖರೀದಿ ಟೆಂಡರ್ ಗಳನ್ನು ನಿಲ್ಲಿಸಬೇಕು.
ಹೈಕೋರ್ಟ್ ಆದೇಶದಂತೆ 2021 ಅಧಿಸೂಚನೆಯಂತೆ ಎಲ್ಲ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಧನ ಸಹಾಯ ಬಿಡುಗಡೆ ಮಾಡಬೇಕು, ಸೌಲಭ್ಯಗಳ ಅರ್ಜಿ ಸಲ್ಲಿಸಲು ಆಗುತ್ತಿರುವ ತೊಂದರೆ ಹಾಗೂ ಪಿಂಚಣಿ, ವೈದ್ಯಕೀಯ ಧನಸಹಾಯ ಇತ್ಯಾಧಿಗಳ ಧನ ಸಹಾಯ ನೀಡುವಲ್ಲಿ ಆಗುತ್ತಿರುವ ವಿಳಂಬ ಧೋರಣೆಗಳ ವಿರುದ್ದ ಈ ಹೋರಾಟ ನಡೆಸಲಾಗುತ್ತಿದೆ.
ಹೋರಾಟದ ಮೊದಲನೆ ದಿನ ರಾಯಚೂರು, ತುಮಕೂರು, ಪಾವಗಡ ಉಡುಪಿ ಕುಂದಾಪುರ, ಬೈಂದೂರು, ದಾವಣಗೆರೆ,ಧಾರವಾಡ, ಕೋಲಾರ ವಿಜಯನಗರ ಜಿಲ್ಲೆಗಳಲ್ಲಿ ಜಂಟಿ ಹೋರಾಟಗಳು ಯಶಸ್ವಿಯಾಗಿ ಜರುಗಿವೆ ಮತ್ತು ನಾಳೆಯಿಂದ ಜುಲೈ 2 ದವರೆಗೆ ಮುಂದುವರೆಯಲಿವೆ ಜುಲೈ 3ರಂದು ಬೆಂಗಳೂರು ಹಾಗೂ ಸುತ್ತಲಿನ ಪ್ರದೇಶದ ಕಾರ್ಮಿಕರು ಕಲ್ಯಾಣ ಮಂಡಳಿ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ.
ಇದಾದ ಬಳಿಕ “ಭ್ರಷ್ಟಾಚಾರಿಗಳಿಂದ ಕಲ್ಯಾಣ ಮಂಡಳಿ ರಕ್ಷಿಸಿ” “ಬಡ ಕಾರ್ಮಿಕರ ಹಕ್ಕು, ಸೌಲಭ್ಯಗಳನ್ನು ಉಳಿಸಿ” ಎನ್ನುವ ಒಂದು ತಿಂಗಳ ಅಭಿಯಾನ ನಡೆಸಲಾಗುವುದು. ಅಂತಿಮವಾಗಿ ಆಗಸ್ಟ್ ಮೊದಲ ವಾರದಲ್ಲಿ ಸಾವಿರಾರು ಕಾರ್ಮಿಕರಿಂದ “ಮುಖ್ಯಮಂತ್ರಿ ಮನೆ ಚಲೋ” ಹೋರಾಟವನ್ನು ನಡೆಸಲು ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ನಿರ್ಧರಿಸಲಾಗಿದೆ.











